ರಿಯಲ್ ಸ್ಟಾರ್ ಉಪೇಂದ್ರ ಅವರ “ಬುದ್ದಿವಂತ-2” ಚಿತ್ರದ ಪೋಸ್ಟರ್ ಬಿಡುಗಡೆ

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರ “ಬುದ್ಧಿವಂತ-2” ಹೆಸರಿನಲ್ಲಿ ಮತ್ತೊಂದು ಸಿನಿಮಾ ಬರುತ್ತಿದ್ದು, ವಿಶೇಷವಾಗಿ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಎರಡು ಪೋಸ್ಟರ್ ಗಳ ಮೂಲಕ ಉಪೇಂದ್ರ ದರ್ಶನವನ್ನು ನಿರ್ದೇಶಕರು ಮಾಡಿಸಿದ್ದಾರೆ. ಎರಡೂ ಪೋಸ್ಟರ್ ಗಳು ಒಂದಷ್ಟು ಕುತೂಹಲ ಹುಟ್ಟಿಸಿವೆ. ಮೌರ್ಯ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ನಟಿ ಸೋನಾಲ್ ಹಾಗೂ ಮೇಘನಾ ರಾಜ್ ಚಿತ್ರದ ನಾಯಕಿಯರಾಗಿದ್ದು, ನಟ ಆದಿತ್ಯ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬುದ್ಧಿವಂತ 2 ಎಂಬ ಹೆಸರಿನ ಕಾರಣ ಸಿನಿಮಾದ ಮೇಲೆ ನಿರೀಕ್ಷೆ ದೊಡ್ಡದಾಗಿದೆ. […]
ರಜನಿಕಾಂತ್ “ದರ್ಬಾರ್” ಗೆ ವಿಲನ್ ಆದ ಸುನೀಲ್ ಶೆಟ್ಟಿ

ಬೆಂಗಳೂರು: ಸೂಪರ್ ಸ್ಟಾರ್, ತಲೈವ ರಜನಿಕಾಂತ್ ದರ್ಬಾರ್ ಗೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ವಿಲನ್ ಆಗಿ ಅಭಿನಯಿಸಲಿದ್ದಾರೆ. ಪೈಲ್ವಾನ್ ನಲ್ಲಿ ಕಿಚ್ಚ ಸುದೀಪ್ ಜತೆ ಕಾಣಿಸಿಕೊಂಡು ಅಬ್ಬರಿಸಿದ್ದ ಸುನೀಲ್ ಈಗ ವಿಲನ್ ಆಗಿದ್ದು, ಈ ಸಿನಿಮಾದಲ್ಲಿ ಸುನೀಲ್ ಶೆಟ್ಟಿ ಖಳ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಸುನೀಲ್ ಶೆಟ್ಟಿ ಸದ್ಯ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷೆಯ ಪೈಲ್ವಾನ್ ಚಿತ್ರದಲ್ಲಿ ಸುನೀಲ್ ಶೆಟ್ಟಿ ಪ್ರಮುಖ […]
ಕುಂದಾಪುರ ಕಡಲ ತಡಿಯಲ್ಲಿ ಬಿರುಸಿನಿಂದ ಸಾಗ್ತಿದೆ”ಮಲ್ಲದಾನ” ಸಿನಿಮಾ ಚಿತ್ರೀಕರಣ:

ಕುಂದಾಪುರ: ಅಂಗಾಂಗದಾನದ ಮಹತ್ವ ಸಾರುವ, ಕಣ್ಣೀರಗಡಲಲ್ಲಿ ಸಾಗಿ ಬರುವ, ಭಾವನಾತ್ಮಕ ಹಾಗೂ ಸೂಕ್ಷ್ಮ ಸಂವೇದನೆಯುಳ್ಳು ಎರಡು ಗಂಟೆ ಸಮಯದ “ಮಲ್ಲದಾನ” ತುಳು ಸಿನೆಮಾದ ಚಿತ್ರೀಕರಣ ಕೋಡಿ ಕಡಲ ತಡಿಯಲ್ಲಿ ಬಿರುಸಿನಿಂದ ಸಾಗುತ್ತಿದೆ. ಕರಾವಳಿಯ ಉಡುಪಿ, ಮಲ್ಪೆ, ಮರವಂತೆ, ಕೋಡಿ, ಕುಂದಾಪುರದ ಚಿನ್ಮಯಿ ಆಸ್ಪತ್ರೆ ಹಾಗೂ ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಅವರ ಮನೆಯಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಈಗಾಗಲೇ ಚಿತ್ರೀಕರಣ ಮುಕ್ಕಾಲು ಭಾಗ ಪೂರ್ಣಗೊಂಡಿದೆ. ಕ್ಲೈಮ್ಯಾಕ್ಸ್ ಚಿತ್ರೀಕರಣ ಕೋಡಿ ಬ್ಯಾರೀಸ್ ಕಾಲೇಜಿನ ಆಸುಪಾಸಿನಲ್ಲಿ ನಡೆಯುತ್ತಿದೆ. ಸುಮಾರು ೨೦ಲಕ್ಷ ಬಜೆಟ್‌ನ […]
ಅನಿವಾಸಿ ಕನ್ನಡಿಗರ ಮರ್ಡರ್ ಮಿಸ್ಟರಿ ‘ರತ್ನಮಂಜರಿ’ಚಿತ್ರ ಮೇ.17 ರಂದು ರಾಜ್ಯಾದ್ಯಂತ ಬಿಡುಗಡೆ

ಕರುನಾಡ ಮೇಲಿನ ಅಭಿಮಾನದಿಂದಾಗಿ ಅನೇಕ ಅನಿವಾಸಿ ಕನ್ನಡಿಗರು ಸಿನಿಮಾ ರಂಗದತ್ತ ಮುಖ ಮಾಡುತ್ತಿದ್ದಾರೆ. ಈ ಯಾದಿಗೆ ಹೊಸ ಸೇರ್ಪಡೆ ರತ್ನಮಂಜರಿ ಟೀಮ್. ಅಮೆರಿಕಾದಲ್ಲಿ ನಡೆದ ಭಾರತೀಯರೊಬ್ಬರ ಕೊಲೆಯ ಹಿನ್ನೆಲೆಯಾಗಿಟ್ಟುಕೊಂಡು ಇವರು ಸಿನಿಮಾ ಮಾಡುತ್ತಿದ್ದು, ಕೆಲ ಅನಿವಾಸಿ ಕನ್ನಡಿಗರು ಈ ಚಿತ್ರದಲ್ಲಿ ಪಾತ್ರ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹೆಚ್ಚು ವಿಭಿನ್ನ ಚಿತ್ರಗಳೊಂದಿಗೆ ಕಾಲಿಡುತ್ತಿದ್ದಾರೆ.ಇದೊಂದು ಮರ್ಡರ್ ಮಿಸ್ಟರಿ ಕಥೆಯಾಗಿದ್ದು, ಅಮೆರಿಕಾದಲ್ಲಿ ಕನ್ನಡಕ್ಕಾಗಿ ಸಾಕಷ್ಟು ಕೆಲಸ ಮಾಡುತ್ತಿರುವ ನಟರಾಜ್ ಹಳೇಬಿಡು ಮತ್ತು ತಂಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಸಂದೀಪ್ ಕುಮಾರ್ ಸೇರಿದಂತೆ ಹಲವು […]
ಹರೆಯದ ಭಾವವೇ “ಆಸರೆ”ಯ ಜೀವ: ಮತ್ತೆ ಮತ್ತೆ ಸದ್ದು ಮಾಡ್ತಿದೆ “ಆಸರೆ”ತುಳು ಆಲ್ಬಂ

ಹರೆಯದ ತುಮುಲ ಭಾವನೆಗಳೇ ಜೀವಾಳವಾಗಿರುವ ಆಸರೆ ತುಳು ಆಲ್ಬಂ ಇತ್ತೀಚೆಗೆ ಬಿಡುಗಡೆ ಗೊಂಡಿದೆ. ಬೀಯಿಂಗ್ ಸೋಶಿಯಲ್ ಹಾಗೂ, ಮಣಿಪಾಲ್ ರೋಟರಿ ಹಿಲ್ಸ್ , manipalchoice.com ನ ಸಹಯೋಗದಲ್ಲಿ ಮಣಿ ಪಾಲದ ಪ್ರಸನ್ನ ಗಣಪತಿ ದೇವಸ್ಥಾನ ಬಳಿಯ ಲೇಕ್ ಗ್ರೌಂಡ್ ನಲ್ಲಿ ನಡೆದ ಕೂತು ಮಾತನಾಡುವ” ಕಾರ್ಯ ಕ್ರಮದಲ್ಲಿ “ಆಸರೆ” ಬಿಡುಗಡೆ ಮಾಡಲಾಯಿತು. ಮಂಗಳೂರಿನ ಮಹಿಳಾ ಸಾಧಕಿ ಮಂಜುಳಾ ರಾವ್ ಹಾಗೂ ಖ್ಯಾತ ನಿರೂಪಕ ಅವಿನಾಶ್ ಕಾಮತ್ ಆಲ್ಬಂ ಬಿಡುಗಡೆಗೊಳಿಸಿದರು. ಕನಸು ಕ್ರಿಯೇಶನ್ ಅಡಿಯಲ್ಲಿ ಮೂಡಿ ಬಂದಿರುವ ಆಸರೆ ತುಳು ಅಲ್ಬಂ […]