ಹರೆಯದ ಭಾವವೇ “ಆಸರೆ”ಯ ಜೀವ: ಮತ್ತೆ ಮತ್ತೆ ಸದ್ದು ಮಾಡ್ತಿದೆ “ಆಸರೆ”ತುಳು ಆಲ್ಬಂ

ಹರೆಯದ ತುಮುಲ ಭಾವನೆಗಳೇ ಜೀವಾಳವಾಗಿರುವ ಆಸರೆ ತುಳು ಆಲ್ಬಂ ಇತ್ತೀಚೆಗೆ ಬಿಡುಗಡೆ ಗೊಂಡಿದೆ.
ಬೀಯಿಂಗ್ ಸೋಶಿಯಲ್  ಹಾಗೂ, ಮಣಿಪಾಲ್ ರೋಟರಿ ಹಿಲ್ಸ್ , manipalchoice.com ನ  ಸಹಯೋಗದಲ್ಲಿ ಮಣಿ ಪಾಲದ ಪ್ರಸನ್ನ ಗಣಪತಿ ದೇವಸ್ಥಾನ ಬಳಿಯ ಲೇಕ್ ಗ್ರೌಂಡ್ ನಲ್ಲಿ ನಡೆದ ಕೂತು ಮಾತನಾಡುವ” 
ಕಾರ್ಯ ಕ್ರಮದಲ್ಲಿ  “ಆಸರೆ” ಬಿಡುಗಡೆ ಮಾಡಲಾಯಿತು. ಮಂಗಳೂರಿನ  ಮಹಿಳಾ ಸಾಧಕಿ ಮಂಜುಳಾ ರಾವ್ ಹಾಗೂ ಖ್ಯಾತ ನಿರೂಪಕ ಅವಿನಾಶ್ ಕಾಮತ್ ಆಲ್ಬಂ ಬಿಡುಗಡೆಗೊಳಿಸಿದರು.
ಕನಸು ಕ್ರಿಯೇಶನ್ ಅಡಿಯಲ್ಲಿ ಮೂಡಿ ಬಂದಿರುವ  ಆಸರೆ ತುಳು ಅಲ್ಬಂ ಕರಾವಳಿ ಯಾದ್ಯಂತ ವೈರಲ್ ಅಗುತ್ತಿದೆ. ಮಿಸ್ಟರ್ ಮಂಗಳೂರು 2018 ವಿನ್ನರ್ ದರ್ಶಿತ್   ನಾಯಕನಾಗಿ ಹಾಗೂ ಕಿರುತೆರೆ ನಟಿ ಸೌಮ್ಯ ಮೆಂಡನ್  ತೆರೆಯಲ್ಲಿ ಕಾಣಿಸಿಕೊಂಡಿದ್ದು ಸದ್ದಿಲ್ಲದೆ ಸುದ್ದಿ ಮಾಡುತ್ತಿದೆ.ಅಭಿಲಾಶ್ ಪೂಜಾರಿ ಹಾಗೂ ಉಮೇಶ್ ಆಚಾರ್ಯ ಸಾಹಿತ್ಯ ಬರೆದಿದ್ದು ,
ಬಲೆ ತೆಲಿಪಾಲೆ ಖ್ಯಾತಿ ಯ  ಕಲಾವಿದ ಶ್ರೀಶ ನಾಯಕ್ ನಿರ್ದೇಶನ ಮಾಡಿದ್ದಾರೆ.  ಗಂಗಾಧರ್ ಆಚಾರ್ಯ ಹಿನ್ನೆಲೆ ಗಾಯಕರಾಗಿ ಕಾಣಿಸಿಕೊಳ್ಳುವ ಮೂಲಕ “ಆಸರೆ”ಯನ್ನು ಇನ್ನಷ್ಟು ಸೊಂಪಾಗಿಸಿದ್ದಾರೆ. 
   “ಆಸರೆ”ಯನ್ನು ನೋಡುವವರಿಗೆ ಯೂಟ್ಯೂಬ್ ಲಿಂಕ್ ಇಲ್ಲಿದೆ.