ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧಾರಾವಾಹಿ ನಟಿ ರಾಧಿಕಾ

ಬೆಂಗಳೂರು: ಕನ್ನಡ ಧಾರಾವಾಹಿ ‘ಮಂಗಳಗೌರಿ ಮದುವೆ’ ನೆಗೆಟಿವ್ ರೋಲ್ ನಲ್ಲಿ ಅಭಿನಯಿಸುತ್ತಿರುವ ನಟಿ ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ರಾಧಿಕಾ ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಮಂಗಳಗೌರಿ ಮದುವೆ’ ಧಾರಾವಾಹಿಯಲ್ಲಿ ಸೌಂದರ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅವರು ನಟ, ನಿರ್ದೇಶಕ ಶ್ರವಂತ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ರಾಧಿಕಾ ಈ ಹಿಂದೆ ನಟ ವಿಜಯ್ ರಾಜ್‍ಕುಮಾರ್ ಅಭಿನಯದ ‘ಗ್ರಾಮಾಯಣ’ ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ‘ಪರಾರಿ’, ‘ಅಂಬರ’ ಮತ್ತು ‘ಚಿಕ್ಕಮಗಳೂರು ಚಿಕ್ಕಮಲ್ಲಿಗೆ’ ಸಿನಿಮಾದಲ್ಲಿ ಶ್ರವಂತ್ ಕೂಡ ನಟಿಸಿದ್ದಾರೆ. ‘ಮಧುಬಾಲ’ ಧಾರಾವಾಹಿಯಲ್ಲಿ […]

ರ‍್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮದುವೆ ದಿನಾಂಕ ಫಿಕ್ಸ್

ಬಿಗ್ ಬಾಸ್ ಸೀಸನ್- 5 ವಿನ್ನರ್ ಕನ್ನಡದ ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ಬಾರ್ಬಿ ಡಾಲ್ ನಿವೇದಿತಾ ಗೌಡ ಮದುವೆ ದಿನಾಂಕ ಫಿಕ್ಸ್ ಆಗಿದೆ. ನಿವೇದಿತಾಗೆ ಚಂದನ್ ಶೆಟ್ಟಿ ಬಹಿರಂಗವಾಗಿಯೇ ಪ್ರಪೋಸ್ ಮಾಡಿ ಕೈಗೆ ಉಂಗುರ ತೊಡಿಸಿಬಿಟ್ಟರು.ಇದಾದ ಮೇಲೆ ಕುಟುಂಬದವರ ಸಮ್ಮತಿಯೊಂದಿಗೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ನಿಶ್ಚಿತಾರ್ಥ ಮಾಡಿಕೊಂಡರು. ಮದುವೆ ಇನ್ನೂ ಲೇಟ್ ಎನ್ನುತ್ತಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಈಗ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದಲ್ಲಿ ಮಾತನಾಡಿದ ನಿವೇದಿತಾ ಗೌಡ […]

“ಶ್ರೀಮನ್ನಾರಾಯಣ” ಚಿತ್ರ ತಂಡ ಉಡುಪಿ ಕಲ್ಪನ ಚಿತ್ರಮಂದಿರಕ್ಕೆ ಭೇಟಿ

ಉಡುಪಿ: ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಅವನೇ ಶ್ರೀಮನ್‌ನಾರಾಯಣ ಚಿತ್ರತಂಡ ನಗರದ ಕಲ್ಪನ ಚಿತ್ರಮಂದಿರಕ್ಕೆ ಸೋಮವಾರ ಭೇಟಿ ನೀಡಿತು. ಈ ವೇಳೆ ಮಾಧ್ಯಮದವರ ಜತೆಗೆ ಮಾತನಾಡಿದ ನಟ ರಕ್ಷಿತ್‌ ಶೆಟ್ಟಿ, ಚಿತ್ರವು ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮಲಯಾಳಂ, ತಮಿಳು ಹಾಗೂ ತೆಲುಗು ವರ್ಷನ್‌ಗೆ ಉತ್ತಮ ಪ್ರಶಂಸೆ ದೊರಕಿದೆ ಎಂದರು. ಚಿತ್ರದ ಹಿಂದಿ ವರ್ಷನ್‌ ಬಿಡುಗಡೆಗೆ ಇನ್ನೂ ದಿನಾಂಕ ಅಂತಿಮವಾಗಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುತ್ತದೆ. ಹಿಂದಿಯಲ್ಲಿ ಬಿಡುಗಡೆಗೆ ಬೇಡಿಕೆ ಹೆಚ್ಚಿದ್ದು, […]

“ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್” ರಿಯಾಲಿಟಿ ಶೋನಲ್ಲಿ ನಮಗೆ ಮೋಸ ಮಾಡಿದ್ದಾರೆ: ಅಳಲು ತೋಡಿಕೊಂಡ ಸ್ಪರ್ಧಾಳುಗಳು

ಖಾಸಗಿ ವಾಹಿನಿಯೊಂದಲ್ಲಿ ನಡೆಯುವ ಅದ್ಧೂರಿ “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಎನ್ನುವ ರಿಯಾಲಿಟಿ ಶೋನಲ್ಲಿ ನಮಗೆ ಮೋಸವಾಗಿದೆ ಎಂದು ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ ಸ್ಪರ್ಧಾಳು ಅನ್ವಿಷಾ, ಪ್ರೇಕ್ಷಿತ್ ಮತ್ತವರ ಹೆತ್ತವರು ಉಡುಪಿ Xpress ಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅವರ ಕತೆ ಖಾಸಗಿ ವಾಹಿನಿಗಳ ರಿಯಾಲಿಟಿ ಶೋ ಗಳಿಗೆ ಮರುಳಾಗುವವರಿಗೆ ಪಾಠದಂತಿದೆ. “ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ  ಆರಂಭದಿಂದಲೂ ಉತ್ತಮ ಪ್ರದರ್ಶನ ಕೊಡುತ್ತಿರುವ  ಅನ್ವಿಷಾ  ಹಾಗೂ ಪ್ರೇಕ್ಷಿತ್  ಜೋಡಿಯನ್ನು ಡಿ.೨೧ ರಂದು […]

ಕೋಟಿ–ಚೆನ್ನಯರ ಗರೋಡಿಗಳ ದರ್ಶನ; 100ಕ್ಕೂ ಹೆಚ್ಚು ಕಂತುಗಳಲ್ಲಿ ಸಾಕ್ಷ್ಯಚಿತ್ರ ಪ್ರಸಾರ

ಉಡುಪಿ: ಸ್ವಸ್ತಿಕ್‌ ಪ್ರೊಡಕ್ಷನ್‌ ಅರ್ಪಿಸುವ ‘ತುಳುನಾಡ ಬಂಗಾರ್‌ ಗರೋಡಿಲು’ ತುಳು ಸಾಕ್ಷ್ಯಚಿತ್ರ ಡಿ. 1ರಿಂದ ಪ್ರತಿ ಭಾನುವಾರ ಬೆಳಿಗ್ಗೆ 11.30ರಿಂದ 12 ಗಂಟೆಯವರೆಗೆ ನಮ್ಮ ಕುಡ್ಲ ಚಾನೆಲ್‌ನಲ್ಲಿ ಪ್ರಸಾರಗೊಳ್ಳಲಿದೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಾಕ್ಷ್ಯಚಿತ್ರದ ನಿರ್ದೇಶಕ ಸುರೇಂದ್ರ ಮೋಹನ್‌ ಅವರು, ಈ ಸಾಕ್ಷ್ಯಚಿತ್ರದಲ್ಲಿ ತುಳುನಾಡಿನ ವೀರ ಪುರುಷರಾದ ಕೋಟಿ–ಚೆನ್ನಯರ ಗರೋಡಿ ಕ್ಷೇತ್ರದ ದರ್ಶನ ಹಾಗೂ ಪರಿಚಯ ಮಾಡಲಾಗುತ್ತಿದೆ. ಈಗಾಗಲೇ ದಕ್ಷಿಣ ಕನ್ನಡ, ಕಾಸರಗೋಡು, ಕುಂದಾಪುರ, ಮಡಿಕೇರಿ ಹಾಗೂ ಮುಂಬೈ ಸೇರಿದಂತೆ 242 ಗರೋಡಿಗಳನ್ನು […]