ಡ್ರಗ್ಸ್ ದಂಧೆ: ನಟಿ ಸಂಜನಾ ಐದು ದಿನ ಕಾಲ ಸಿಸಿಬಿ ಕಸ್ಟಡಿಗೆ

ಬೆಂಗಳೂರು: ಡ್ರಗ್ಸ್ ಜಾಲದ ನಂಟಿನ ಆರೋಪಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾನಿ ಅವರನ್ನು ಐದು ದಿನಗಳ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ. ವಿಡಿಯೋ ಕನ್ಫೋರೆನ್ಸ್ ಮೂಲಕ ನಗರದ 8ನೇ ಎಸಿಎಂಎಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು. ಹೆಚ್ಚಿನ ವಿಚಾರಣೆಗಾಗಿ ಸಂಜನಾಳನ್ನು 9 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಸಿಸಿಬಿ ಪೊಲೀಸರು ಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ ನ್ಯಾಯಾಲಯ 5 ದಿನಗಳ ಕಾಲ ಸಿಸಿಬಿ ಕಸ್ಟಡಿ ನೀಡಿ ಎಂದು ಆದೇಶ ನೀಡಿದೆ. ಡ್ರಗ್ಸ್ ಜಾಲದ ನಂಟಿಗೆ ಸಂಬಂಧಿಸಿದಂತೆ ಇಂದು […]
ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ಚಂದನವನದ ಹಿರಿಯ ನಟ ಹೃದಯಾಘಾತದಿಂದ ವಿಧಿವಶ

ಬೆಂಗಳೂರು: ಚಂದನವನದ ಹಿರಿಯ ನಟ, ರಂಗಭೂಮಿ ಕಲಾವಿದ ಸಿದ್ದರಾಜ್ ಕಲ್ಯಾಣ್‌ಕರ್ (60) ನಿನ್ನೆ ತಡರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ನಿನ್ನೆಯಷ್ಟೇ ತಮ್ಮ 60ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದರು. ಆದರೆ ತಡರಾತ್ರಿ ಅವರು ಇಹಲೋಕ ತ್ಯಜಿಸಿದ್ದಾರೆ. ಅವರ ಅಂತ್ಯಕ್ರಿಯೆ ಹುಬ್ಬಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಉಪೇಂದ್ರ ನಟನೆಯ ಬುದ್ಧಿವಂತ , ಸೂಪರ್ ಸೇರಿದಂತೆ ಸುಮಾರು 75 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಪ್ರಸ್ತುತ ಪ್ರೇಮಲೋಕ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಸೆಟ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು ಎನ್ನಲಾಗಿದೆ.
ತೆಲುಗಿನ ಖ್ಯಾತ ಖಳನಟ ಜಯ ಪ್ರಕಾಶ್ ರೆಡ್ಡಿ ನಿಧನ

ಅಮರಾವತಿ: ತೆಲುಗಿನ ಖ್ಯಾತ ಖಳನಟ ಜಯ ಪ್ರಕಾಶ್ ರೆಡ್ಡಿ (74) ಅವರು ಮಂಗಳವಾರ ಬೆಳಿಗ್ಗೆ ಗುಂಟೂರಿನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಜಯ ಪ್ರಕಾಶ್ ರೆಡ್ಡಿ ಖಳನಾಯಕ ಮತ್ತು ಹಾಸ್ಯ ಪಾತ್ರಗಳಿಗೆ ಹೆಸರುವಾಸಿಯಾಗಿದ್ದರು. ಅವರ ಅತ್ಯಂತ ಜನಪ್ರಿಯ ಚಿತ್ರಗಳಲ್ಲಿ ‘ಸಮರಸಿಂಹ ರೆಡ್ಡಿ, ಪ್ರೇಮಿಂಚುಕುಂದಮು ರಾ, ನರಸಿಂಹ ನಾಯ್ಡು, ರೆಡಿ, ಕಿಕ್, ಜಯಂ ಮನದೇರಾ, ಜಂಬಾ ಲಕಿಡಿ ಪಂಬಾ’ ಪ್ರಮುಖವಾಗಿವೆ. ನಟನ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ನಟ–ನಟಿಯರು ಸಂತಾಪ ಸೂಚಿಸಿದ್ದಾರೆ.
ಡ್ರಗ್ಸ್ ನಂಟಿನ ಆರೋಪ: ನಟಿ ಸಂಜನಾ ಗಲ್ರಾನಿ ಮನೆ ಮೇಲೆ ಸಿಸಿಬಿ ಪೊಲೀಸರ ದಾಳಿ, ಶೋಧಕಾರ್ಯ

ಬೆಂಗಳೂರು: ಡ್ರಗ್ಸ್ ಜಾಲದ ನಂಟಿನ ಆರೋಪದಡಿ ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಮನೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಇಂದಿರಾನಗರದಲ್ಲಿ ಇರುವ ಫ್ಲ್ಯಾಟ್ ಗೆ ಇಂದು ಬೆಳಿಗ್ಗೆ 6.30ಕ್ಕೆ ಪೊಲೀಸರು ದಾಳಿ ನಡೆಸಿ ಶೋಧಕಾರ್ಯ ನಡೆಸುತ್ತಿದ್ದಾರೆ. ಈ ವೇಳೆ ಸಂಜನಾಗೆ ಸೇರಿದ ಕಾರನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಹಾಗೆ ಸಂಜನಾಳಿಗೆ ಸೇರಿದ ಮೂರು ಮೊಬೈಲ್ ಗಳನ್ನು ಹಾಗೂ ಮನೆಯಲ್ಲಿ ಸಿಕ್ಕಿರುವ ವಸ್ತುಗಳನ್ನು ವಶಕ್ಕೆ ಪಡೆದು ತಪಾಸಣೆ ನಡೆಸುತ್ತಿದ್ದಾರೆ. ಇದೀಗ ಸಂಜನಾ ಪೊಲೀಸರ ವಿಚಾರಣೆಗೆ […]
“ರತ್ನನ್ ಪ್ರಪಂಚ” ಕ್ಕೆ ಎಂಟ್ರಿ ಕೊಡ್ತಿದ್ದಾರೆ ನಟಿ ಉಮಾಶ್ರೀ:

“ರತ್ನ ನ್ ಪ್ರಪಂಚ”ಅನ್ನೋ ಹೊಸ ಮೂವಿ ಬಗ್ಗೆ ಸಿನಿಮಾ ಅಭಿಮಾನಿಗಳು ಈಗಾಗಲೇ ಕೇಳಿರುತ್ತೀರಿ. ರೋಹಿತ್ ಪಡಕಿಯ “ರತ್ನನ್ ಪ್ರಪಂಚ” ದಲ್ಲಿ ಧನಂಜಯ್ ಮತ್ತು ರೆಬಾ ಮೋನಿಕಾ ಜಾನ್ ಪ್ರಮುಖ ತಾರಾಂಗಣದಲ್ಲಿರುವುದು ಸಾಮಾನ್ಯ ಸಂಗತಿ. ಆದರೆ ಇದೀಗ ಸುದ್ದಿಯಾಗ್ತಿರೋದು ನಟಿ ಉಮಾಶ್ರೀ. ಯಸ್ ಹಿರಿಯ ನಟಿ, ರಾಜಕಾರಣಿ ಉಮಾಶ್ರೀ ಈ ಚಿತ್ರದ ಮೂಲಕ ಮತ್ತೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದಾರೆ. ಈ ಹಿಂದೆ “ಲವ್ ಯು ಆಲಿಯಾ” ಚಿತ್ರದಲ್ಲಿ ನಟಿಸಿ ಆ ಮೇಲೆ ಸಿನಿಮಾದಿಂದ ದೂರ ಉಳಿದಿದ್ದ ಉಮಾಶ್ರೀ […]