udupixpress
Home Trending "ರತ್ನನ್ ಪ್ರಪಂಚ" ಕ್ಕೆ ಎಂಟ್ರಿ ಕೊಡ್ತಿದ್ದಾರೆ ನಟಿ ಉಮಾಶ್ರೀ:

“ರತ್ನನ್ ಪ್ರಪಂಚ” ಕ್ಕೆ ಎಂಟ್ರಿ ಕೊಡ್ತಿದ್ದಾರೆ ನಟಿ ಉಮಾಶ್ರೀ:

“ರತ್ನ ನ್ ಪ್ರಪಂಚ”ಅನ್ನೋ ಹೊಸ ಮೂವಿ ಬಗ್ಗೆ ಸಿನಿಮಾ ಅಭಿಮಾನಿಗಳು ಈಗಾಗಲೇ ಕೇಳಿರುತ್ತೀರಿ. ರೋಹಿತ್ ಪಡಕಿಯ  “ರತ್ನನ್ ಪ್ರಪಂಚ” ದಲ್ಲಿ  ಧನಂಜಯ್ ಮತ್ತು ರೆಬಾ ಮೋನಿಕಾ ಜಾನ್ ಪ್ರಮುಖ ತಾರಾಂಗಣದಲ್ಲಿರುವುದು ಸಾಮಾನ್ಯ ಸಂಗತಿ. ಆದರೆ ಇದೀಗ ಸುದ್ದಿಯಾಗ್ತಿರೋದು ನಟಿ ಉಮಾಶ್ರೀ. ಯಸ್ ಹಿರಿಯ ನಟಿ, ರಾಜಕಾರಣಿ ಉಮಾಶ್ರೀ ಈ ಚಿತ್ರದ ಮೂಲಕ ಮತ್ತೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದಾರೆ.

ಈ ಹಿಂದೆ “ಲವ್ ಯು ಆಲಿಯಾ” ಚಿತ್ರದಲ್ಲಿ ನಟಿಸಿ ಆ ಮೇಲೆ ಸಿನಿಮಾದಿಂದ ದೂರ ಉಳಿದಿದ್ದ ಉಮಾಶ್ರೀ ಐದು ವರ್ಷಗಳ ನಂತರ ಮತ್ತೆ ಸಿನಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿರುವುದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ನಿಮಗೆ ನೆನಪಿರಬಹುದು  ರವಿಚಂದ್ರನ್ ಅಭಿನಯದ ಪುಟ್ನಂಜ ಚಿತ್ರದಲ್ಲಿ ರವಿಚಂದ್ರನ್ ತಾಯಿಯ ಪಾತ್ರವನ್ನು ನಿರ್ವಹಿಸಿದ್ದರು ಉಮಾಶ್ರೀ. ಈಗ “ರತ್ನನ್ ಪ್ರಪಂಚ”ಸಿನಿಮಾದಲ್ಲಿ ಕೂಡ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

 ಆಗಸ್ಟ್ 31 ರಂದು ನಡೆದ ಚಿತ್ರದ ಮುಹೂರ್ತದಲ್ಲಿ ಭಾಗವಹಿಸಿದ್ದ ನಟಿ ಉಮಾಶ್ರೀ ಸೆಪ್ಟೆಂಬರ್‌ನಿಂದ ಸೆಟ್ ಗೆ ಆಗಮಿಸಲಿದ್ದಾರೆ.