udupixpress
Home Trending ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ಚಂದನವನದ ಹಿರಿಯ ನಟ ಹೃದಯಾಘಾತದಿಂದ ವಿಧಿವಶ

ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ಚಂದನವನದ ಹಿರಿಯ ನಟ ಹೃದಯಾಘಾತದಿಂದ ವಿಧಿವಶ

ಬೆಂಗಳೂರು: ಚಂದನವನದ ಹಿರಿಯ ನಟ, ರಂಗಭೂಮಿ ಕಲಾವಿದ ಸಿದ್ದರಾಜ್ ಕಲ್ಯಾಣ್‌ಕರ್ (60) ನಿನ್ನೆ ತಡರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ನಿನ್ನೆಯಷ್ಟೇ ತಮ್ಮ 60ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದರು. ಆದರೆ ತಡರಾತ್ರಿ ಅವರು ಇಹಲೋಕ ತ್ಯಜಿಸಿದ್ದಾರೆ. ಅವರ ಅಂತ್ಯಕ್ರಿಯೆ ಹುಬ್ಬಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಉಪೇಂದ್ರ ನಟನೆಯ ಬುದ್ಧಿವಂತ , ಸೂಪರ್ ಸೇರಿದಂತೆ ಸುಮಾರು 75 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಪ್ರಸ್ತುತ ಪ್ರೇಮಲೋಕ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಸೆಟ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು ಎನ್ನಲಾಗಿದೆ.