ಪುಷ್ಪಾ ದ ರೂಲ್ ಗೆ ಜೈ ಎಂದ ವಿಜಯ್ ಸೇತುಪತಿ? ಪುಷ್ಪಾ ಭಾಗ-2ರಲ್ಲಿ ಖಳನಾಯಕನಾಗಿ ಮಿಂಚಲಿರುವ ವೇಧ!

ಪುಷ್ಪಾ ಭಾಗ-2, ಪುಷ್ಪಾ ದ ರೂಲ್ ನಲ್ಲಿ ವಿಕ್ರಮ್ ವೇಧ ಖ್ಯಾತಿಯ ವಿಜಯ್ ಸೇತುಪತಿ ನಟಿಸಲಿದ್ದಾರೆ ಎಂದು ವರದಿಯಾಗಿದೆ. ವಿಜಯ್ ಸೇತುಪತಿ ಮುಖ್ಯ ಖಳನಾಯಕನಾಗಿ ನಟಿಸಲಿದ್ದಾರೆ ಹಾಗೂ ಫಹಾದ್ ಫಾಸಿಲ್ ಪೋಲೀಸ್ ಪಾತ್ರದಲ್ಲಿ ಮುಂದುವರೆಯಲಿದ್ದಾರೆ ಎನ್ನಲಾಗಿದೆ. ಎಲ್ಲವೂ ಸರಿಯಾಗಿದ್ದರೆ ವಿಜಯ್ ಪುಷ್ಪಾ-1 ರಲ್ಲಿ ಅರಣ್ಯಾಧಿಕಾರಿಯ ಪ್ರಾತ್ರವನ್ನು ಮಾಡಬೇಕಿತ್ತು. ಆದರೆ ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಅವರು ಚಿತ್ರವನ್ನು ಒಪ್ಪಿಕೊಂಡಿರಲಿಲ್ಲ. ಪುಷ್ಪ ಭಾಗ ಎರಡಲ್ಲಿ ವಿಜಯ್ ನಟಿಸುವ ಬಗ್ಗೆ ಅಧಿಕೃತ ದೃಢೀಕರಣ ಇನ್ನೂ ಬಂದಿಲ್ಲವಾದರೂ, ಈ ಸುದ್ದಿಯು ಅಭಿಮಾನಿಗಳನ್ನು ರೋಮಾಂಚನಗೊಳಿಸಿದೆ.

ಬುಕ್ ಮೈ ಶೋ ವಿರುದ್ದ ನಿರ್ದೇಶಕಿ ಶೀತಲ್ ಶೆಟ್ಟಿ ಅಸಮಾಧಾನ: ಕನ್ನಡ ಚಿತ್ರಗಳಿಗೆ ಅನ್ಯಾಯದ ಗಂಭೀರ ಆರೋಪ

ಬೆಂಗಳೂರು: ಚಲನಚಿತ್ರಗಳನ್ನು ವೀಕ್ಷಿಸಲು ಥಿಯೇಟರ್ ನಲ್ಲಿ ಮುಂಗಡವಾಗಿ ಟಿಕೇತು ಖರೀದಿಸಿಡುವ ಆನ್ ಲೈನ್ ವೇದಿಕೆ ಬುಕ್ ಮೈ ಶೋ ಮೇಲೆ ನಿರ್ದೇಶಕಿ ಶೀತಲ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವೇದಿಕೆಯಲ್ಲಿ ಪ್ರೇಕ್ಷಕರ ವಿಮರ್ಶೆ ಮತ್ತು ಚಿತ್ರದ ರೇಟಿಂಗ್ ಗಳನ್ನು ತೋರಿಸಲು ಷರತ್ತುಗಳನ್ನು ವಿಧಿಸಿ ಕನ್ನಡ ಚಿತ್ರರಂಗಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಹೊರಿಸಿದ್ದಾರೆ. ವೀಕ್ಷಕರು ವಿಮರ್ಶೆಗಳನ್ನು ನೋಡಿ ಚಿತ್ರ ನೋಡಲು ಮುಂದಾಗುತ್ತಾರೆ. ಆದರೆ ಇಲ್ಲಿ ವಿಮರ್ಶೆಗಳನ್ನು ಕಾಣದಂತೆ ಮಾಡಿರುವುದು ವಿಂಡೋ ಸೀಟ್ ನಿರ್ದೇಶಕಿಯ ಸಿಟ್ಟಿಗೆ ಕಾರಣವಾಗಿದೆ. […]

ಬೆಳ್ಳಿ ಪರದೆ ಮೇಲೆ ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋ ಸೀಟ್

ಸುದ್ದಿ ನಿರೂಪಕಿ, ನಟಿ ಶೀತಲ್ ಶೆಟ್ಟಿ ಆಕ್ಷನ್ ಕಟ್ ಹೇಳಿರುವ ವಿಂಡೋ ಸೀಟ್ ಸಿನಿಮಾ ಬಿಡುಗಡೆ ಕಂಡಿದೆ. ಈ ಹಿಂದೆ ಕಿರುಚಿತ್ರ ನಿರ್ದೇಶಿಸಿದ್ದ ಶೀತಲ್‍ ಶೆಟ್ಟಿ ಈಗ ಕಥೆ ಹಾಗೂ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ವಿಂಡೋಸೀಟ್ ಎಂಬುದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಿದು. ಚಿತ್ರದ ತಾರಾಗಣಲ್ಲಿ ನಿರೂಪ್ ಭಂಡಾರಿ, ಸಂಜನಾ ಆನಂದ್, ಅಮೃತ ಅಯ್ಯಂಗಾರ್ ಮುಂತಾದವರಿದ್ದಾರೆ. ರಘು ಪಾತ್ರ ನಿರ್ವಹಿಸುತ್ತಿರುವ ನಿರೂಪ್, ಅಮೃತಾ ಅಯ್ಯಂಗಾರ್ ನ ಅಂಜಲಿ ಎಂಬ ಪಾತ್ರದ ಮಾಲೀಕತ್ವದ ಹೈ-ಎಂಡ್ ರೆಸ್ಟೋರೆಂಟ್‌ನಲ್ಲಿ ಹಾಡುವ ಒಂಟಿ […]

ರಾಕೆಟ್ರಿ: ದ ನಂಬಿ ಎಫೆಕ್ಟ್: ಪ್ರಖ್ಯಾತ ವಿಜ್ಞಾನಿ ನಂಬಿ ನಾರಾಯಣನ್ ರಂತೆ ಕಾಣಿಸಿಕೊಳ್ಳಲು ದವಡೆ ಮುರಿದುಕೊಂಡ ಆರ್ ಮಾಧವನ್

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ ಆರ್ ಮಾಧವನ್ ನಟಿಸಿ, ಚಿತ್ರಕಥೆ ಬರೆದು ನಿರ್ದೇಶಿಸಿರುವ ರಾಕೆಟ್ರಿ: ದ ನಂಬಿ ಎಫೆಕ್ಟ್ ಚಿತ್ರವು ಜುಲೈ 1ರಂದು ಬಿಡುಗಡೆ ಕಾಣುತ್ತಿದೆ. ಪ್ರಖ್ಯಾತ ವಿಜ್ಞಾನಿ ನಂಬಿ ನಾರಾಯಣನ್ ಬಯೋಪಿಕ್ ಇದಾಗಿದ್ದು, ಇದರಲ್ಲಿ ನಂಬಿ ನಾರಾಯಣನ್ ಅವರ ಪಾತ್ರವನ್ನು ಆರ್ ಮಾಧವನ್ ಮಾಡುತ್ತಿದ್ದಾರೆ. ಈ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿರುವ ಮಾಧವನ್, ನಂಬಿ ನಾರಾಯಣನ್ ಅವರಂತೆ ಕಾಣಿಸಿಕೊಳ್ಳಲು ಹರಸಾಹಸ ಪಟ್ಟಿದ್ದಾರೆ. ತನ್ನ ಹಲ್ಲುಗಳು ನಂಬಿ ನಾರಾಯಣನ್ ಅವರಂತೆ ಕಾಣಿಸಿಕೊಳ್ಳಬೇಕೆಂದು ತನ್ನ ದವಡೆಗಳನ್ನು ಮುರಿಸಿಕೊಂಡಿದ್ದೆ […]

‘ಪುಷ್ಪ 2’ ಚಿತ್ರದ ಚಿತ್ರಕಥೆ ಬರೆಯಲು ಆರಂಭ: ಆಗಸ್ಟ್ ನಲ್ಲಿ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜು!

ಹೈದರಾಬಾದ್: ಅಲ್ಲು ಅರ್ಜುನ್, ಫಹಾದ್ ಫಾಸಿಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ: ದಿ ರೈಸ್’ ಚಿತ್ರದ ಯಶಸ್ಸಿನ ನಂತರ, ಎಲ್ಲರ ಕಣ್ಣುಗಳು ಈಗ ಅದರ ಭಾಗ ಎರಡರ ಮೇಲೆ ನೆಟ್ಟಿದೆ. ಮೂಲಗಳ ಪ್ರಕಾರ ‘ಪುಷ್ಪಾ: ದಿ ರೂಲ್‌’ನ ಚಿತ್ರಕಥೆ ಇನ್ನೂ ಬರವಣಿಗೆಯ ಹಂತದಲ್ಲಿದೆ. ಸುಕುಮಾರ್ ಮತ್ತು ಅವರ ಸಿಬ್ಬಂದಿ ಆಗಸ್ಟ್‌ನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದ್ದಾರೆ. ಕಥಾ ಲೇಖಕ ಸುಕುಮಾರ್ ಆರೋಗ್ಯ ಸ್ಥಿತಿಯ ಕಾರಣದಿಂದಾಗಿ ಚಿತ್ರ ಕಥೆ ಬರೆಯಲು ಸಾಕಷ್ಟು ಸಮಯ ತೆಗೆದುಕೊಂಡಿರುವುದರಿಂದಾಗಿ ಚಿತ್ರೀಕರಣ ಪ್ರಾರಂಭಿಸುವ […]