ಯುಕೆಯ ಕೇಂಬ್ರಿಡ್ಜ್ ನಲ್ಲೂ ಕಾಂತಾರ ಕಲರವ: ಕನ್ನಡಿಗರ ತಂಡದಿಂದ ಕಾಂತಾರ ವೀಕ್ಷಣೆ

ಕೇಂಬ್ರಿಡ್ಜ್:  ಯುನೈಟೆಡ್ ಕಿಂಗ್ಡಮ್ ನ  ಕೇಂಬ್ರಿಡ್ಜಿನ ವ್ಯೂ ಸಿನಿಮಾ ಹಾಲ್ ನಲ್ಲಿ ಮಂಗಳವಾರ ರಾತ್ರಿಯಂದು 50 ಜನರ ಕನ್ನಡಿಗರ ತಂಡವು ಕಾಂತಾರ ಸಿನಿಮಾವನ್ನು ವೀಕ್ಷಿಸಿ ಆನಂದಿಸಿದೆ. ಯುಕೆ ನ ಕೇಂಬ್ರಿಡ್ಜ್ ನಲ್ಲಿ ನೆಲೆಸಿರುವ  ಕನ್ನಡಿಗರ ತಂಡವು ಖಾಸಗಿ ಸಿನಿಮಾ ಪ್ರದರ್ಶನವನ್ನು ಏರ್ಪಡಿಸಿದ್ದು, ನೆಲ-ಜಲದಿಂದ ದೂರವಿದ್ದರೂ ಬೇರುಗಳನ್ನು ಭದ್ರವಾಗಿ ಹಿಡಿದಿಟ್ಟಿದ್ದರ ಕುರುಹಾಗಿ ಕಾಂತಾರ ಚಿತ್ರ ನೋಡಿ ಸಂಭ್ರಮಿಸಿದ್ದಾರೆ. ಗುರುವಾರದಂದು ಮಗದೊಂದು ಪ್ರದರ್ಶನವನ್ನು ಏರ್ಪಾಡು ಮಾಡಿದ್ದು, ತಂಡವು ಕಾಂತಾರ ಗುಂಗಿನಿಂದ ಹೊರಬಂದಿರುವ ಲಕ್ಷಣಗಳು ಕಾಣಿಸುತ್ತಿಲ್ಲ.

ಕೃಪೆ: ನವೀನ್ ಕ್ಯಾಸ್ಟಲೀನೊ