ಕಾಲನ ಜೊತೆ ಜಿದ್ದಿಗೆ ಬಿದ್ದು ಕಾಲನಲ್ಲಿ ಲೀನರಾನ ಮಹಾನ್ ಚೇತನ ಶಂಕರ್ ನಾಗ್ ರವರ 68 ನೇ ಜನ್ಮ ದಿನ

ಇವತ್ತು ಕನ್ನಡ ಚಿತ್ರರಂಗದ ಯಶಸ್ಸನ್ನು ಕಂಡಾಗ ಪ್ರತಿಯೊಬ್ಬರ ಮನಸ್ಸಿನಲ್ಲೂ ಮೂಡುವ ವಿಚಾರ ಶಂಕರ್ ನಾಗ್ ಇದ್ದಿದ್ದರೆ ಈ ಯಶಸ್ಸು ಯಾವತ್ತೋ ಬಂದಿರುತ್ತಿತ್ತು. ಶಂಕರ್ ನಾಗ್ ಬರಿಯ ವ್ಯಕ್ತಿಯಲ್ಲ, ಅವರೊಂದು ಶಕ್ತಿ. ಅದಮ್ಯ ಚೈತನ್ಯ, ಎಂದಿಗೂ ಬತ್ತದ ಉತ್ಸಾಹ, ಕಾಲಕ್ಕಿಂತ ಒಂದು ಹೆಜ್ಜೆ ಮುಂದಿರಬೇಕೆನ್ನುವ ತುಡಿತ. ಕಾಲನ ಜೊತೆ ಜಿದ್ದಿಗೆ ಬಿದ್ದು ಕಾಲನಲ್ಲಿ ಲೀನರಾಗಿ 32 ವರ್ಷಗಳು ಸಂದರೂ ಶಂಕರ್ ನಾಗ್ ನೆನಪು ಎಳ್ಳಷ್ಟೂ ಮಾಸಿಲ್ಲ. ಅವರಿಂದು ನಮ್ಮ ಜೊತೆಗಿರುತ್ತಿದ್ದರೆ ಅವರಿಗೆ 68 ವರ್ಷ ತುಂಬುತ್ತಿತ್ತು. ಇಷ್ಟು ವರ್ಷಗಳಲ್ಲಿ […]

ಭಾರತೀಯ ಚಿತ್ರರಂಗದ ಮಹಿಳಾ ಸೂಪರ್ ಸ್ಟಾರ್ ಬಾಹುಬಲಿಯ ದೇವಸೇನೆಗೆ ಹುಟ್ಟುಹಬ್ಬದ ಸಂಭ್ರಮ

ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿ, ಮಹಿಳಾ ಸೂಪರ್ ಸ್ಟಾರ್ ಎಂದೇ ಕರೆಯಲ್ಪಡುವ ಬಾಹುಬಲಿಯ ದೇವಸೇನೆ ಪಾತ್ರಧಾರಿ ಅನುಷ್ಕಾ ಶೆಟ್ಟಿಗೆ ಇಂದು 41 ನೇ ಹುಟ್ಟುಹಬ್ಬದ ಸಂಭ್ರಮ. ಅತಿ ಹೆಚ್ಚು ಸಂಭಾವನೆ ಪಡೆಯುವ ದಕ್ಷಿಣ ಭಾರತದ ನಟಿಯರಲ್ಲಿ ಒಬ್ಬರಾಗಿರುವ ಅನುಷ್ಕಾ ಪ್ರತಿ ಚಲನಚಿತ್ರಕ್ಕೆ 2 ರಿಂದ 3 ಕೋಟಿ ರೂ ಸಂಭಾವನೆ ಪಡೆಯುತ್ತಾರೆ ಎನ್ನಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಳ್ಳಿಪಾಡಿ ಗ್ರಾಮದ ತುಳುವ ಬಂಟ ಕುಟುಂಬದ ಪ್ರಫುಲ್ಲ ಶೆಟ್ಟಿ ಮತ್ತು ಎ.ಎನ್.ವಿಟ್ಟಲ್ ಶೆಟ್ಟಿಯವರ ಮೂರು ಮಕ್ಕಳಲ್ಲಿ […]

ಸಕುಟುಂಬ ಸಮೇತರಾಗಿ ಕಾಣಿಸಿಕೊಂಡ ರಿಷಭ್ ಶೆಟ್ಟಿ: ಶುಭ ಹಾರೈಸಿದ ಅಭಿಮಾನಿಗಳು

ಕರಾವಳಿಯ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಪಸರಿಸಿದ ಕಾಂತಾರ ಚಿತ್ರದ ನಟ-ನಿರ್ದೇಶಕ ರಿಷಭ್ ಶೆಟ್ಟಿಯವರು ಇದೆ ಮೊದಲ ಬಾರಿಗೆ ಸಕುಟುಂಬ ಸಮೇತರಾಗಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಪತ್ನಿ ಪ್ರಗತಿ ಶೆಟ್ಟಿ, ಮಗ ರನ್ವಿತ್ ಶೆಟ್ಟಿ ಮತ್ತು ಮಗಳು ರಾಧ್ಯ ಶೆಟ್ಟಿ ಜೊತೆ ಇರುವ ತಮ್ಮ ಫೋಟೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ರಿಷಭ್ ಶೆಟ್ಟಿ ಅವರ ಪರಿವಾರವನ್ನು ಕಂಡ ನೆಟ್ಟಿಗರು ಸಂತೋಷ ವ್ಯಕ್ತ ಪಡಿಸಿ ಕಾಂತಾರ ಯಶಸ್ಸಿಗಾಗಿ ಶುಭಹಾರೈಸಿದ್ದಾರೆ. ಇದಕ್ಕೂ ಕೆಲದಿನಗಳ ಮುನ್ನ ತಮ್ಮ ಮಗಳು ರಾಧ್ಯ ಜೊತೆ ಇರುವ ಮುದ್ದಾದ […]

ಹೊಸ ಅವತಾರದಲ್ಲಿ ಸುನೀಲ್ ಶೆಟ್ಟಿ: ಧಾರಾವಿ ಬ್ಯಾಂಕ್ ಒಟಿಟಿ ಸರಣಿಯಲ್ಲಿ ‘ತಲೈವನ್’ ಆದ ಬಾಲಿವುಡ್ ನ ಅಣ್ಣ!

ಬಾಲಿವುಡ್ ನಲ್ಲಿ “ಅಣ್ಣ” ಎಂದೇ ಪ್ರಖ್ಯಾತರಾದ ಸುನಿಲ್ ಶೆಟ್ಟಿಯವರು ಹಿಂದೆಂದೂ ಕಾಣದ ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸುನೀಲ್ ಶೆಟ್ಟಿ ಅವರು ಎಂಎಕ್ಸ್ ಪ್ಲೇಯರ್ ಒಟಿಟಿಯಲ್ಲಿ ‘ಧಾರಾವಿ ಬ್ಯಾಂಕ್‌’ ಸರಣಿಯೊಂದಿಗೆ ಡಿಜಿಟಲ್ ಕ್ಷೇತ್ರಕ್ಕೆ ಪ್ರವೇಶಿಸಲು ಸಿದ್ಧರಾಗಿದ್ದಾರೆ. ಈ ಸರಣಿಯನ್ನು ಸಮಿತ್ ಕಕ್ಕಡ್ ಅವರು ನಿರ್ದೇಶಿಸಿದ್ದಾರೆ. ಧಾರಾವಿ ಬ್ಯಾಂಕ್ ಸರಣಿಯಲ್ಲಿ ಸುನಿಲ್ ‘ತಲೈವನ್’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ವಿವೇಕ್ ಒಬೆರಾಯ್ ಕೂಡಾ ನಟಿಸಲಿದ್ದಾರೆ. ನಟಿ ಸೋನಾಲಿ ಕುಲಕರ್ಣಿ ಪ್ರಮುಖ ಪಾತ್ರದಲ್ಲಿದ್ದಾರೆ. ಧಾರಾವಿ […]

ಯುಕೆಯ ಕೇಂಬ್ರಿಡ್ಜ್ ನಲ್ಲೂ ಕಾಂತಾರ ಕಲರವ: ಕನ್ನಡಿಗರ ತಂಡದಿಂದ ಕಾಂತಾರ ವೀಕ್ಷಣೆ

ಕೇಂಬ್ರಿಡ್ಜ್:  ಯುನೈಟೆಡ್ ಕಿಂಗ್ಡಮ್ ನ  ಕೇಂಬ್ರಿಡ್ಜಿನ ವ್ಯೂ ಸಿನಿಮಾ ಹಾಲ್ ನಲ್ಲಿ ಮಂಗಳವಾರ ರಾತ್ರಿಯಂದು 50 ಜನರ ಕನ್ನಡಿಗರ ತಂಡವು ಕಾಂತಾರ ಸಿನಿಮಾವನ್ನು ವೀಕ್ಷಿಸಿ ಆನಂದಿಸಿದೆ. ಯುಕೆ ನ ಕೇಂಬ್ರಿಡ್ಜ್ ನಲ್ಲಿ ನೆಲೆಸಿರುವ  ಕನ್ನಡಿಗರ ತಂಡವು ಖಾಸಗಿ ಸಿನಿಮಾ ಪ್ರದರ್ಶನವನ್ನು ಏರ್ಪಡಿಸಿದ್ದು, ನೆಲ-ಜಲದಿಂದ ದೂರವಿದ್ದರೂ ಬೇರುಗಳನ್ನು ಭದ್ರವಾಗಿ ಹಿಡಿದಿಟ್ಟಿದ್ದರ ಕುರುಹಾಗಿ ಕಾಂತಾರ ಚಿತ್ರ ನೋಡಿ ಸಂಭ್ರಮಿಸಿದ್ದಾರೆ. ಗುರುವಾರದಂದು ಮಗದೊಂದು ಪ್ರದರ್ಶನವನ್ನು ಏರ್ಪಾಡು ಮಾಡಿದ್ದು, ತಂಡವು ಕಾಂತಾರ ಗುಂಗಿನಿಂದ ಹೊರಬಂದಿರುವ ಲಕ್ಷಣಗಳು ಕಾಣಿಸುತ್ತಿಲ್ಲ. ಕೃಪೆ: ನವೀನ್ ಕ್ಯಾಸ್ಟಲೀನೊ