ದಿ ಕೇರಳ ಸ್ಟೋರಿ: ಆರನೇ ದಿನದಂದು 68.86 ಕೋಟಿ ರೂ ಗಳಿಕೆ

ಕೇರಳದ ಹಿಂದೂ ಮಹಿಳೆಯ ಮತಾಂತರ ಮತ್ತು ಭಯೋತ್ಪಾದಕ ಸಂಘಟನೆ ಐಸಿಸ್ ಸುತ್ತ ಸುತ್ತುವ ಅದಾ ಶರ್ಮಾ ಅಭಿನಯದ ದಿ ಕೇರಳ ಸ್ಟೋರಿ ಚಲಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿದ್ದು, ಆರನೇ ದಿನಕ್ಕೆ 60 ಕೋಟಿ ಮೈಲಿಗಲ್ಲನ್ನು ದಾಟಿದೆ. ಸುದೀಪ್ತೋ ಸೇನ್ ನಿರ್ದೇಶನ ಹಾಗೂ ವಿಪುಲ್ ಶಾಹ್ ನಿರ್ಮಾಣದ ಈ ಚಿತ್ರವು ಮೇ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಕೇರಳ ಸ್ಟೋರಿ ಮೊದಲ ದಿನವೇ 8 ಕೋಟಿ ಗಳಿಸಿತ್ತು. ಇದು 2023 ರಲ್ಲಿ ಶಾರುಖ್ ಖಾನ್ […]
ದಿ ಕೇರಳ ಸ್ಟೋರಿ: ಬಂಗಾಳದಲ್ಲಿ ನಿಷೇಧ; ಉತ್ತರ ಪ್ರದೇಶದಲ್ಲಿ ತೆರಿಗೆ ಮುಕ್ತ

ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ‘ದಿ ಕೇರಳ ಸ್ಟೋರಿ’ ಚಿತ್ರವನ್ನು ತೆರಿಗೆ ಮುಕ್ತಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳವಾರ ಘೋಷಿಸಿದ್ದಾರೆ. ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಚಲನಚಿತ್ರವನ್ನು ನಿಷೇಧಿಸಿದ ಒಂದು ದಿನದ ನಂತರ ಆದಿತ್ಯನಾಥ್ ಅವರ ಘೋಷಣೆ ಹೊರಬಿದ್ದಿದೆ. ‘ದಿ ಕೇರಳ ಸ್ಟೋರಿ’ಯನ್ನು ನಿಷೇಧಿಸುವ ನಿರ್ಧಾರವನ್ನು ಪಶ್ಚಿಮ ಬಂಗಾಳ ಸರ್ಕಾರ ಸೋಮವಾರ ಪ್ರಕಟಿಸಿದೆ. ರಾಜ್ಯದಲ್ಲಿ ಪ್ರದರ್ಶನಗೊಳ್ಳುತ್ತಿರುವ ಪರದೆಗಳಿಂದ ಚಲನಚಿತ್ರವನ್ನು ತೆಗೆದುಹಾಕುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಮಮತಾ ಬ್ಯಾನರ್ಜಿ ನಿರ್ದೇಶನ ನೀಡಿದ್ದಾರೆ. “ಬಂಗಾಳದಲ್ಲಿ ಶಾಂತಿ […]
ʼದಿ ಕೇರಳ ಸ್ಟೋರಿʼಗೆ ʼಎʼ ಸರ್ಟಿಫಿಕೇಟ್:10 ದೃಶ್ಯಗಳಿಗೆ ಕತ್ತರಿ ಹಾಕಿದ ಸೆನ್ಸಾರ್ ಬೋರ್ಡ್

ಕೊಚ್ಚಿ: ಕಳೆದ ವರ್ಷ ಟೀಸರ್ ರಿಲೀಸ್ ಆದಾಗಿನಿಂದಲೂ ಭಾರೀ ಸದ್ದು ಮಾಡಿದ ʼದಿ ಕೇರಳ ಸ್ಟೋರಿʼ ಇತ್ತೀಚೆಗೆ ಟ್ರೇಲರ್ ಮೂಲಕ ದೇಶದ ಗಮನ ಸೆಳೆದಿದೆ. ಇನ್ನೇನು ಸಿನಿಮಾ ತೆರೆಗೆ ಬರಲು ದಿನಗಣನೆ ಬಾಕಿ ಉಳಿದಿದೆ. ರಿಲೀಸ್ ಗೂ ಮುನ್ನ ಚಿತ್ರದ ಬಗ್ಗೆ ಪರ – ವಿರೋಧ ಮಾತುಗಳು ಕೇಳಿ ಬರುತ್ತಿದೆ. ಸುದೀಪ್ತೋ ಸೆನ್ ನಿರ್ದೇಶನದ ಸಿನಿಮಾಕ್ಕೆ ಕೇರಳದಲ್ಲೇ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಸಿನಿಮಾ ನಿಷೇಧ ಮಾಡುವಂತೆ ಸಿಪಿಎಂ ನೇತೃತ್ವದ ಎಲ್‌ಡಿಎಫ್, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಒತ್ತಾಯಿಸುತ್ತಿವೆ. ಇದರ ಜತೆಗೆ […]
ಏಪ್ರಿಲ್ 28 ರಂದು ತೆರೆಕಾಣಲಿದೆ ಬಹುನಿರೀಕ್ಷಿತ ಪೊನ್ನಿಯಿನ್ ಸೆಲ್ವನ್ -2: ಮಹಾರಾಣಿಯಾಗಿ ಕಂಗೊಳಿಸುತ್ತಿರುವ ಐಶ್ವರ್ಯಾ ರೈ

ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ -2 ಪ್ರೇಕ್ಷಕರು ನಿರೀಕ್ಷಿಸುತ್ತಿರುವ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರವು ಏಪ್ರಿಲ್ 28 ರಂದು ಬಿಡುಗಡೆಯಾಗಲಿದೆ. ನಟಿ ಐಶ್ವರ್ಯಾ ರೈ ದ್ವಿಪಾತ್ರದಲ್ಲಿ ನಟಿಸಿರುವ ಚೋಳ ಸಾಮ್ರಜ್ಯದ ಕಥೆಯಿರುವ ಈ ಚಿತ್ರದ ಮೊದಲನೇ ಭಾಗವು ಯಶಸ್ಸನ್ನು ಕಂಡಿತ್ತು. ನಂದಿನಿ ಮತ್ತು ಊಮೈ ರಾಣಿ ಎಂಬ ಪಾತ್ರಗಳಲ್ಲಿ ಐಶ್ವರ್ಯಾ ರೈ ನಟಿಸಿದ್ದು, ಚಿಯಾನ್ ವಿಕ್ರಂ, ತ್ರಿಶಾಪ್ರಕಾಶ ರಾಜ್, ಕಾರ್ತಿ, ಜಯಮ್ ರವಿ, ಶೋಭಿತಾ, ಐಶ್ವರ್ಯ ಲಕ್ಷ್ಮಿ ಮುಂತಾದವರ ತಾರಾಗಣವಿದೆ. ಇತ್ತೀಚಿನ ಬಾಕ್ಸ್ ಆಫೀಸ್ ವರದಿಗಳ ಪ್ರಕಾರ, ಪೊನ್ನಿಯಿನ್ […]
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದಡ್ಡ ಪ್ರವೀಣನ ಸ್ಕ್ಯಾಮ್ 1770 ಚಿತ್ರದ ಟೀಸರ್ ಬಿಡುಗಡೆ

ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಿರ್ಮಾಣದ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ ದಡ್ಡ ಪ್ರವೀಣ ಖ್ಯಾತಿಯ ರಂಜನ್ ನಟನೆಯ ಸ್ಕ್ಯಾಮ್ 1770 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ದೇವರಾಜ್.ಆರ್ ನಿರ್ಮಾಣ, ಡಿ ಕ್ರಿಯೇಷನ್ಸ್ ಬ್ಯಾನರ್ ನಡಿ ಮೂಡಿಬಂದಿರುವ ಚಿತ್ರಕ್ಕೆ ವಿಕಾಸ್ ಪುಷ್ಪಗಿರಿ ಚಿತ್ರಕಥೆ ಮತ್ತು ನಿರ್ದೇಶನವಿದೆ. ಶಂಕರ್ ರಾಮನ್.ಎಸ್ ಸಂಭಾಷಣೆ, ಶಂಕರ್ ರಾಮನ್.ಎಸ್ & ವಿಕಾಸ್ ಪುಷ್ಪಗಿರಿ ಚಿತ್ರಕಥೆ, ಸತೀಶ್ ಆರ್ಯನ್ ಸಂಗೀತ, ಶೋಯಭ್ […]