ಬಹುನಿರೀಕ್ಷಿತ ʼಬೇರʼ ಸಿನಿಮಾ ಜೂನ್ 16ಕ್ಕೆ ರಿಲೀಸ್……..

ನಿಮಗೆಲ್ಲ ಗೊತ್ತಿರೋ ಹಾಗೇ ಇದೀಗ ರಿಲೀಸ್ ಆಗಿರೋ ಸಿನಿಮಾದ ಟೀಸರ್ ಸಖತ್ ಸೌಂಡ್ ಮಾಡಿದೆ. ಟೀಸರ್ ನೋಡಿದ ಜನರಿಗೆ ಸಿನಿಮಾ ಬಗ್ಗೆಗ್ಗಿನ ನಿರೀಕ್ಷೆ ಕೂಡ ದುಪ್ಪಟ್ಟು ಆಗಿದೆ.ಬೇರʼ ಅನ್ನೋ ಟೈಟಲ್ ಹೊಂದಿರೋ ಅದ್ಭುತ ಸಿನಿಮಾ ಇದೇ ಜೂನ್ ತಿಂಗಳ 16ಕ್ಕೆ ರಿಲೀಸ್ ಆಗುತ್ತಿದೆ.
ಕಿರುತೆರೆಯ ಸಾಕಷ್ಟು ಜನಪ್ರಿಯ ಧಾರಾವಾಹಿಗಳ ನಿರ್ದೇಶಕ ವಿನು ಬಳಂಜ “ಬೇರ” ಚಿತ್ರನಿರ್ದೇಶಿಸುವ ಮೂಲಕ ಹಿರಿತೆರೆಗೆ ಪದಾರ್ಪಣೆ ಮಾಡಿದ್ದಾರೆ. ಎಸ್‌ಎಲ್‌ವಿ ಕಲರ್ಸ್ ಬ್ಯಾನರ್‌ನಲ್ಲಿ ದಿವಾಕರ ದಾಸ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆಯಾಯಿತು. ಅದಾದ ಬಳಿಕ ಶಿವರಾಜ್‌ ಕುಮಾರ್‌ ಅವರನ್ನು ಭೇಟಿ ಮಾಡಿದ ತಂಡ ಅವರಿಂದಲೂ ಶೀರ್ಷಿಕೆ ಫಸ್ಟ್‌ ಲುಕ್‌, ಟೀಸರ್‌ ಅನ್ನು ಬಿಡುಗಡೆ ಮಾಡಿಸಿತು.
ವಿಭಿನ್ನ ಮತ್ತು ಸಸ್ಪೆನ್ಸ್ ಸ್ಟೋರಿ ಹೊಂದಿರೋ ಸಿನಿಮಾ ಅಂದ್ರೆ ಬೇರ. ಇತ್ತೀಚಿಗೆ ಜನ ಕೂಡ ಇಂತಹ ಸಿನಿಮಾಗಳನ್ನ ಮೆಚ್ಚಿಕೊಳ್ಳುತ್ತಿದ್ದಾರೆ. ಇನ್ನೂ ಸಿನಿಮಾದ ಟೈಟಲ್ ಕೂಡ ಡಿಫರೆಂಟ್ ಆಗಿದ್ದು ಕೂತುಹಲಕ್ಕೆ ಕಾರಣವಾಗಿದೆ.

ತುಳುವಿನಲ್ಲಿ ಬೇರ ಎಂದರೆ ಕನ್ನಡದಲ್ಲಿ ವ್ಯಾಪಾರ ಎಂದು ಅರ್ಥ. ಅಮಾಯಕರನ್ನು ಬಳಸಿಕೊಂಡು ಹೇಗೆ ನಾಯಕರಾಗುತ್ತಾರೆ ಹಾಗೂ ಯಾವ ತಾಯಂದ್ರ ಮಕ್ಕಳೂ ಇನ್ನೊಬ್ರಿಂದಾಗಿ ಸಾಯ್ಬಾರ್ದು ಎಂಬುದೇ ಕಥಾಹಂದರ. ಈ ಚಿತ್ರದಲ್ಲಿ ನಾಯಕ, ನಾಯಕಿ ಅಂತ ಇಲ್ಲ. ಬರುವ ಎಲ್ಲಾ ಪಾತ್ರಗಳು ಮುಖ್ಯ ಪಾತ್ರಗಳಾಗಿರುತ್ತದೆ. ಸದ್ಯ ಟೀಸರ್ ಬಿಡುಗಡೆ ಮಾಡಿದ್ದೇವೆ. ಮೇ ಅಂತ್ಯಕ್ಕೆ ಚಿತ್ರವನ್ನು ತೆರೆಗೆ ತರುವ ಯೋಜನೆ ಇದೆ ಎಂದರು ನಿರ್ದೇಶಕರು.

ರಾಜಶೇಖರ್ ಛಾಯಾಗ್ರಹಣ ಮಾಡಿರುವ ಈ ಚಿತ್ರಕ್ಕೆ ರಾಮದಾಸ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ವಿನು ಬಳಂಜ ಅವರ ನಿರ್ದೇಶನದಲ್ಲಿ ಕೆಲಸ ಮಾಡಿದ್ದ ಖುಷಿಯಿದೆ. ನಮ್ಮ ಪಾತ್ರ ಕೂಡ ಚೆನ್ನಾಗಿದೆ ಎಂದರು ಕಲಾವಿದರು. ಈ ಚಿತ್ರದಲ್ಲಿ ದತ್ತಣ್ಣ, ಯಶ್ ಶೆಟ್ಟಿ, ಹರ್ಷಿಕಾ ಪೂಣಚ್ಛ, ಅಶ್ವಿನ್ ಹಾಸನ್, ಚಿತ್ಕಳಾ ಬಿರಾದಾರ್, ಮಂಜುನಾಥ್ ಹೆಗಡೆ, ಗುರು ಹೆಗಡೆ, ರಾಕೇಶ್ ಮಯ್ಯ, ಧವಳ್ ದೀಪಕ್ ಮುಂತಾದವರು ನಟಿಸಿದ್ದಾರೆ.