ಇಷ್ಟು ಮಾಡಿದ್ರೆ ರಾತ್ರಿ ಗ್ಯಾರಂಟಿ ಸುಖ ನಿದ್ರೆ ಬರುತ್ತೆ:ಮಲಗುವ ಮುನ್ನ ಏನ್ ಮಾಡ್ಬೇಕು?

ನಿದ್ರೆ ಮಾಡೋದು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಹೆಚ್ಚಿನವರು ಕೇವಲ ದೇಹಕ್ಕೆ ಸುಸ್ತಾದಾಗ ಮಾತ್ರವಲ್ಲ ಮನಸ್ಸಿಗೆ ಸುಸ್ತಾದಾಗ ಅಂದರೆ ಬೇಜಾರಾದಾಗ, ಸಿಟ್ಟು ಬಂದಾಗ  ನಿದಿರಾದೇವಿಯ ಮೊರೆ ಹೋಗಲಿಚ್ಛಿಸುತ್ತಾರೆ. ಹೌದು, ನಿದ್ರೆ ದೇಹಕ್ಕೂ ಮನಸ್ಸಿನಾರೋಗ್ಯಕ್ಕೂ ದಿವ್ಯೌಷಧ. ಶಾಂತಚಿತ್ತದಿಂದ ನಿದ್ರಿಸುವ ವ್ಯಕ್ತಿ ದೀರ್ಘಕಾಲ ಆರೋಗ್ಯವಂತನಾಗಿ ಬಾಳುತ್ತಾನೆ ಎಂದು ಅನೇಕ ಸಮೀಕ್ಷೆಗಳು ಹೇಳುತ್ತವೆ. ದಿನಕ್ಕೆ ಕನಿಷ್ಟ ಎಂಟು ಗಂಟೆಗಳ ನಿದ್ರೆ ಅವಶ್ಯಕ. ಸಾಧ್ಯವಾಗದಿದ್ದರೆ, ಕನಿಷ್ಠಪಕ್ಷ ಮಾಡುವ ಕೆಲವು ಗಂಟೆಗಳ ನಿದ್ರೆಯನ್ನಾದರೂ ನೆಮ್ಮದಿಯಿಂದ ಮಾಡಿದರೆ ಇಡೀ ದಿನ ಲವಲವಿಕೆಯಿಂದಿರಲು ಸಾಧ್ಯ. ಹಾಗಾದರೆ […]

ಒಂದು ಲೋಟ ಕಬ್ಬಿನ ಹಾಲಲ್ಲಿ ಎಷ್ಟು ಶಕ್ತಿ ಇದೆ ಅಂತ ಗೊತ್ತಾ? ಆರೋಗ್ಯದ ಅರಸ, ಕಬ್ಬಿನ ರಸ

ಬೇಸಿಗೆ ಪ್ರಾರಂಭವಾಗುತ್ತಿದ್ದಂತೆಯೇ ದಾಹ ಅಧಿಕವಾಗುತ್ತದೆ. ಬಿಸಿಲಲ್ಲಿ ಸ್ವಲ್ಪ ಸಮಯ ಹೋದರೆ ಸಾಕು ಕೋಲ್ಡ್ ಜ್ಯೂಸ್ ಕುಡಿಯುವ, ಐಸ್ ಕ್ರೀಮ್ ತಿನ್ನುವ ಬಯಕೆಯಾಗುತ್ತುದೆ. ಆದ್ರೆ ಆರೋಗ್ಯಕರ, ನೈಸರ್ಗಿಕವಾದ ಕಬ್ಬಿನ ಹಾಲು ಹೀರಿದರೆ ದೊರೆಯುವ ಪೌಷ್ಠಿಕಾಂಶಗಳ ಪಟ್ಟಿ ನೋಡಿದ್ರೆ ನೀವು ಯಾವತ್ತೂ ದೇಹಕ್ಕೆ ಹಾನಿ ಉಂಟು ಮಾಡುವ ಕೋಲ್ಡ್ ಡ್ರಿಂಕ್ಸ್, ಐಸ್ ಕ್ರೀಮ್ ಗಳತ್ತ ಕಣ್ಣೆತ್ತಿಯೂ ನೋಡದೇ ತಣ್ಣಗೇ ಶುಗರ್ ಕೇನ್ ಜ್ಯೂಸ್ ಕಡೆನೇ ವಾಲ್ತೀರಾ ಅದಂತೂ ಸತ್ಯ. ಹಾಗಾದ್ರೆ ಇದ್ರಲ್ಲಿರೋ ಔಷಧೀಯ ಗುಣಗಳನ್ನು ತಿಳ್ಕೊಳ್ಬೇಕಲ್ವಾ? ಶೇಕಡಾ 15 ನೈಸರ್ಗಿಕ […]

ದಿನಪೂರ್ತಿ ನೆಮ್ಮದಿಯಾಗಿರಲು ಇವಿಷ್ಟನ್ನು ಮಾಡಿ :ಮಾನಸಿಕ ಆರೋಗ್ಯದ ಒಂದಷ್ಟು ಗುಟ್ಟು

ಬ್ಯುಸಿ, ಕಾಂಪಿಟೇಟಿವ್ ಲೈಫ್ ಸ್ಟೈಲ್ ನಲ್ಲಿ ನಮ್ಮ ಆಸಕ್ತಿ, ಖುಷಿಗಳಿಗೆ ಸಮಯ ಕೊಡೋದೇ ಕಷ್ಟ ಆಗ್ತಿದೆ. ಇಂತಹ ಸಮಯದಲ್ಲಿ ನಮ್ಮ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯ ಕೂಡಾ ತುಂಬಾ ಮುಖ್ಯ ಅಲ್ವಾ. ಮನಸ್ಸು ಫ್ರೆಶ್ ಆಗಿದ್ದರೆ ಎಲ್ಲವೂ ಸುಂದರವಾಗಿ ಕಾಣುತ್ತೆ. ಲೈಫ್ ಖುಷಿಯ ಮೋಡ್ ನಲ್ಲಿರುತ್ತೆ. ನಾವು  ಹೇಳೋ ಕೆಲವು ಸಿಂಪಲ್ ಸೂತ್ರಗಳನ್ನು ಪಾಲಿಸಿ,  ಖಂಡಿತ ನೀವು ಮೆಂಟಲಿ ಹೆಲ್ದಿ ಆಗಿರ್ತೀರಾ. * ನಿಮ್ಮ ಪ್ರೀತಿಪಾತ್ರರಿಗೆ ದಿನದ ಒಂದು ಗಂಟೆಯನ್ನಾದರೂ ಮೀಸಲಿಡಿ. * ಮಾಡಬೇಕಾಗಿರುವ ಎಲ್ಲಾ ಕೆಲಸಗಳನ್ನು […]

ನೀವು ಬೇಕಾಬಿಟ್ಟಿ ಇಯರ್ ಫೋನ್ ಬಳಸಿದ್ರೆ ಒಂದಿನ ಏನಾಗುತ್ತೆ ಗೊತ್ತಾ?

ಕಿವಿಗೆ ಇಯರ್ ಫೋನ್ ಇಲ್ಲಾಂದ್ರೆ ಬಸ್ ಪ್ರಯಾಣನೇ ಸಾಗಲ್ಲ ಅನ್ನೋರು, ಇಯರ್ ಫೋನ್ ಹಾಕಿ ಹಾಡು ಕೇಳದಿದ್ದರೆ ನಿದ್ದೆನೇ ಬರೋಲ್ಲ ಅನ್ನೋರು ಮೊದಲು ನಾವ್ ಹೇಳೋದನ್ನು ಗಮನವಿಟ್ಟು ಕೇಳಿ. ಆ ಮೇಲೆ ಇಯರ್ ಫೋನ್ ಸ್ವರವನ್ನು ಕೇಳಬೇಕಾ? ಬೇಡವಾ ಅಂತ ಡಿಸೈಡ್ ಮಾಡಿ. ಇಯರ್ ಫೋನ್ ಬಳಸುವವರೇ ಇಲ್ಲಿ ಕೇಳಿ: ಖುಷಿ ಕೊಡತ್ತೆ ಅಂತ ಯಾವತ್ತೂ ಇಯರ್ ಫೋನ್ ಹಾಕಿಕೊಂಡೇ ಇದ್ರೆ ಆದಷ್ಟು ಬೇಗ ಕಿವಿಯ ಸಮಸ್ಯೆ ಬರೋದಂತೂ ಖಂಡಿತ. ಸಣ್ಣ ವಯಸ್ಸಿನಲ್ಲೇ ಕಿವಿಯ ಕಾರ್ಯಕ್ಷಮತೆ ಕಡಿಮೆ […]

ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ನೀವಿದನ್ನು ಮಾಡಲೇಬೇಕು: ಇಲ್ಲಿದೆ ಡಾ. ಹರ್ಷಾ ಕಾಮತ್ ಸಲಹೆ

ಚಳಿಗಾಲದಲ್ಲಿ ಪಾಲಿಸಬೇಕಾದ ಹಲವು ನಿಯಮಗಳು ಆಯುರ್ವೇದದಲ್ಲಿದೆ . ಇದನ್ನೇ ಋತುಚರ್ಯವೆಂದು ಕರೆಯುತ್ತಾರೆ. ನಾವು ಇದನ್ನು ಸರಿಯಾಗಿ ಪಾಲಿಸಿದರೆ ಮಾತ್ರ ಚಳಿಗಾಲದಲ್ಲಿ ಆರೋಗ್ಯದಿಂದಿರಲು ಸಾಧ್ಯ.ಕಾರ್ಕಳದ ಡಾ.ಹರ್ಷಾ ಕಾಮತ್ ಅವರು ಚಳಿಗಾಲದಲ್ಲಿ ಆರೋಗ್ಯವನ್ನು ಹೇಗಿಟ್ಟುಕೊಳ್ಳಬೇಕು? ಎನ್ನುವ ಕುರಿತು ಒಂದಷ್ಟು  ಸಲಹೆ ನೀಡಿದ್ದಾರೆ. ಅವರ ಸಲಹೆ ಪ್ರಕಾರ ನಡೆದರೆ ನಿಮಗೇ ಲಾಭ. ಇಲ್ಲದಿದ್ದರೆ ನಿಮ್ಮ ಆರೋಗ್ಯಕ್ಕೆ ಲಾಸ್. ಚಳಿಗಾಲದಲ್ಲಿ ವಾತಾವರಣವು ಬಹಳ ತಂಪಾಗಿ ಶುಷ್ಕ ಹವೆಯಿಂದ ಕೂಡಿರುತ್ತದೆ.ಇದರಿಂದ ದೇಹದಲ್ಲಿ ಶುಷ್ಕತೆ ಹೆಚ್ಚಾಗಿ ಸಂದುನೋವು  ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಚಳಿಗಾಳಿಯಿಂದಾಗಿ ನೆಗಡಿ, ಕೆಮ್ಮು ಮುಂತಾದ […]