ಆ.13 ರಂದು ಶ್ರೀ ವಿಷ್ಣು ಫ್ರೆಂಡ್ಸ್ ಅಜೆಕಾರು ಇದರ ಆಶ್ರಯದಲ್ಲಿ ಪ್ರಥಮ ವರ್ಷದ “ಕೆಸರ್ ಡೊಂಜಿ ದಿನ”

ಅಜೆಕಾರು: ಕಾರ್ಕಳ ತಾಲೂಕಿನ ಅಜೆಕಾರು ಶ್ರೀ ವಿಷ್ಣು ಫ್ರೆಂಡ್ಸ್ ಇದರ ಆಶ್ರಯದಲ್ಲಿ ಪ್ರಥಮ ವರ್ಷದ ಮರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಂದೂ ಬಾಂಧವರ ಕೆಸರ್ ಡೊಂಜಿ ದಿನವನ್ನು ಆಗಸ್ಟ್ 13 ಆದಿತ್ಯವಾರ ಅಜೆಕಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬಳಿ ಜಯಂತಿಮಾರ್ ಕಂಬಳದಲ್ಲಿ ನಡೆಯಲಿದೆ. ಮರ್ಣೆ ಗ್ರಾಮದ ಹಿಂದೂ ಸಮಾಜದ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಪುರುಷರಿಗೆ ಕಬ್ಬಡಿ, ವಾಲಿಬಾಲ್, ಹಗ್ಗ ಜಗ್ಗಾಟ, ವಿವಿಧ ಬಗೆಯ ಆಟೋಟ ಸ್ಪರ್ಧೆಗಳು ನಡೆಯಲಿರುವುದು. ತಾರ ಮೆರುಗಾಗಿ ತುಳು ಚಿತ್ರನಟರಾದ ದೀಪಕ್ ರೈ ಪಾಣಾಜೆ, […]

ಸೌಜನ್ಯಾ ಪ್ರಕರಣ ಮರು ತನಿಖೆಗೆ ಆಗ್ರಹಿಸಿ ದ.ಕ/ಉಡುಪಿ ಬಿಜೆಪಿ ಶಾಸಕರಿಂದ ಪ್ರತಿಭಟನೆ: ನಳಿನ್ ಕುಮಾರ್

ಮಂಗಳೂರು: ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆ ನಡೆಸುವಂತೆ ಆಗ್ರಹಿಸಿ ಆ. 27 ರಂದು ಬೆಳ್ತಂಗಡಿಯ ತಾಲೂಕು ಕಚೇರಿ ಮುಂಭಾಗದಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಯ ಶಾಸಕರಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಪ್ರತಿಭಟನೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಲಾಗುವುದು. ಸೌಜನ್ಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಲಾಗುವುದು ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಉಡುಪಿ: ನೂತನ ಎಡಿಸಿಯಾಗಿ ಮಮತಾ ದೇವಿ ನೇಮಕ

ಉಡುಪಿ: ಜಿಲ್ಲೆಯಲ್ಲಿ ಕರ್ತವ್ಯದಲ್ಲಿದ್ದ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ವರ್ಗಾವಣೆಗೊಂಡಿದ್ದು, ನೂತನ ಅಪರ ಜಿಲ್ಲಾಧಿಕಾರಿಯಾಗಿ ಮಮತಾ ದೇವಿ ಜಿಎಸ್ ನೇಮಕಗೊಂಡಿದ್ದಾರೆ.  

ಪುತ್ತಿಗೆ ಶ್ರೀಗಳ ಸುವರ್ಣ ಚಾತುರ್ಮಾಸ್ಯ ಕಾರ್ಯಕ್ರಮ

ಉಡುಪಿ: ಶುಕ್ರವಾರದಂದು ಮಠದ ಭಕ್ತರಾದ ಬೆಂಗಳೂರಿನ ವೆಂಕಟರಮಣ ಸೋಮಯಾಜಿ ಅವರು ಭಾವೀ ಪರ್ಯಾಯ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಸುಗುಣೇಂದ್ರತೀರ್ಥ ಶ್ರೀ ಪಾದರನ್ನು ಆದರದಿಂದ ಬರಮಾಡಿಕೊಂಡು ವೈಭವೋಪೇತವಾಗಿ ಸಂಸ್ಥಾನಪೂಜೆ ಹಾಗೂ ಭಿಕ್ಷಾವಂದನೆ ಇತ್ಯಾದಿ ಕಾರ್ಯಕ್ರಮಗಳನ್ನು ನೆರವೇರಿಸಿ ಗುರುಗಳ ಹಾಗೂ ಶ್ರೀ ವಿಠಲ ದೇವರ ಅನುಗ್ರಹ ಪಡೆದುಕೊಂಡಾರು. ಈ ಸಂದರ್ಭದಲ್ಲಿ ಕೋಟಿ ಗೀತಾ ಲೇಖನ ಯಜ್ಞ ದೀಕ್ಷಾ ಅಭಿಯಾನ ನಡೆಯಿತು.

ಮಣಿಪಾಲ: ಆಗಸ್ಟ್‌ 13 ರಂದು ತಪೋವನ ಲೈಫ್‌ ಸ್ಪೇಸ್‌ನಲ್ಲಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆ

ಮಣಿಪಾಲ: ಮಣಿಪಾಲ್‌ ಯೂನಿವರ್ಸಲ್‌ ಪ್ರೆಸ್‌, ಮಣಿಪಾಲ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ ಮತ್ತು ತಪೋವನ, ಮಣಿಪಾಲ ‌ಇವರ ಸಹಯೋಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ‘ರಾಷ್ಟ್ರಭಕ್ತಿ’ ಎಂಬ ವಿಷಯದ ಮೇಲೆ ಮಕ್ಕಳಿಗಾಗಿ ಚಿತ್ರಕಲೆ, ಸಂಗೀತ  ಮತ್ತು ಕಥೆ ಹೇಳುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಮಣಿಪಾಲದ ತಪೋವನ ಲೈಫ್‌ ಸ್ಪೇಸ್‌ನಲ್ಲಿ ಆಗಸ್ಟ್‌ 13 ರವಿವಾರ ಳಗ್ಗೆ 10 ಗಂಟೆಯಿಂದ ಸ್ಪರ್ಧೆ ಆರಂಭವಾಗಲಿದೆ. ಪ್ರತಿ ಸ್ಪರ್ಧೆಯಲ್ಲಿಯೂ 1 ರಿಂದ 3, 4 ರಿಂದ 7 ಮತ್ತು 8ರಿಂದ 10ನೆಯ ತರಗತಿಯವರೆಗಿನ ಮೂರು ವಿಭಾಗಗಳಿವೆ. ಆಸಕ್ತ ವಿದ್ಯಾರ್ಥಿಗಳು ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಳಿಗಾಗಿ ಭಾವನಾ ಭಟ್ [ 6364919422] , ಮಹೇಶ ಮಲ್ಪೆ [8660637172] ಇವರನ್ನು ಸಂಪರ್ಕಿಸಬಹುದಾಗಿದೆ.