ಜಿಲ್ಲಾ ಸರಕಾರಿ ನೌಕರರ ವಾರ್ಷಿಕ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ

ಉಡುಪಿ: ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ ಜಿಲ್ಲೆಯ ಸರಕಾರಿ ನೌಕರರು ಸರಕಾರಿ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನವಾಗುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು ಸಾರ್ವಜನಿಕರಿಗೆ ಉತ್ತಮ ರೀತಿಯಲ್ಲಿ ಸೇವೆ ನೀಡುತ್ತಿದ್ದಾರೆ ಎಂದು ಶಾಸಕ ರಘುಪತಿ ಭಟ್ ಹೇಳಿದರು. ಅವರು ಶುಕ್ರವಾರದಂದು ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಸರಕಾರಿ ನೌಕರರ ಸಂಘದ 2022 ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ 7500 ಕ್ಕೂ ಅಧಿಕ ಸರಕಾರಿ […]

ಮಿಸ್ ಯೂನಿವರ್ಸ್ ವೇದಿಕೆಯಲ್ಲಿ ಶಕ್ತಿ ಸ್ವರೂಪಿಣಿಯಾಗಿ ಕಂಗೊಳಿಸಿದ ನೇಪಾಳದ ಸೊಫಿಯಾ ಭುಜೆಲ್

ನ್ಯೂ ಓರ್ಲಿಯನ್ಸ್‌ನಲ್ಲಿ ಅರ್ನೆಸ್ಟ್ ಎನ್. ಮೋರಿಯಲ್ ಕನ್ವೆನ್ಷನ್ ನಲ್ಲಿ ನಡೆಯುತ್ತಿರುವ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಮಿಸ್ ಯೂನಿವರ್ಸ್ ನೇಪಾಳ ಸೋಫಿಯಾ ಭುಜೆಲ್ ಮಿಸ್ ಯೂನಿವರ್ಸ್ 2023 ವೇದಿಕೆಯಲ್ಲಿ ‘ಶಕ್ತಿ’ (ದುರ್ಗಾ) ರೂಪದಲ್ಲಿ ಕಂಗೊಳಿಸಿದ್ದಾರೆ. ನೇಪಾಳದಲ್ಲಿ ಶಾಕ್ತ್ಯ ಪರಂಪರೆಯು ಉಚ್ಛ್ರಾಯ ಸ್ಥಿತಿಯಲ್ಲಿದ್ದು ಇಲ್ಲಿ ಶಕ್ತಿ ಉಪಾಸನೆ ಬಹಳ ಮಹತ್ವಪೂರ್ಣವಾಗಿದೆ. ನೇಪಾಳದ ಪರಂಪರೆಯನ್ನು ತನ್ನ ವಸ್ತ್ರದಲ್ಲಿ ಬಿಂಬಿಸಿರುವ ಸೋಫಿಯಾ ಭುಜೆಲ್ ನೇಪಾಳದ ಹಿಂದೂ ಸಂಸ್ಕೃತಿಯನ್ನು ಪತಿನಿಧಿಸಿದ್ದಾರೆ. Nepal, the endangered #Hindurashtra that always takes pride in its […]

ಮಂಗಳೂರು: ಜ. 15 ರಂದು ರಚನಾ ಅವಾರ್ಡ್-2023 ಪ್ರದಾನ ಕಾರ್ಯಕ್ರಮ

ಮಂಗಳೂರು: ಕ್ಯಾಥೋಲಿಕ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿ ಮಂಗಳೂರು ವತಿಯಿಂದ ನೀಡಲಾಗುವ ರಚನಾ ಅವಾರ್ಡ್-2023 ಅನ್ನು ಜ.15 ರಂದು ಸಂಜೆ 6 ಗಂಟೆಗೆ ಮಿಲಾಗ್ರಿಸ್ ಜುಬಿಲಿ ಹಾಲಿನಲ್ಲಿ ಹಮ್ಮಿಕೊಳ್ಳಲಾಗಿದ್ದು, ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ರೆ.ಡಾ ಪೀಟರ್ ಪೌಲ್ ಸಲ್ಡಾನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಚ್.ಡಿ.ಎಫ್.ಸಿ ಬ್ಯಾಂಕಿನ ಹಿರಿಯ ಕಾರ್ಯಕಾರಿ ಉಪಾಧ್ಯಕ್ಷ ಸಂಜಯ್ ಡಿ’ಸೋಜಾ ಭಾಗವಹಿಸಲಿದ್ದಾರೆ. ಅಧ್ಯಕ್ಷ ವಿನ್ಸೆಂಟ್ ಕುಟೀನಾ, ಕಾರ್ಯದರ್ಶಿ ಲವೀನಾ ಎಸ್.ಮೊಂಟೆರಿಯೋ, ಸಂಚಾಲಕ ಸಿಎ ರುಡಾಲ್ಫ್ ರೊಡ್ರಿಗಸ್, ಸಹ ಸಂಚಾಲಕ ಟೈಟಸ್ […]

ಜ.16 ರಿಂದ 22 ರವರೆಗೆ ನಾಗರೀಕ ಬಂದೂಕು ತರಬೇತಿ ಕಾರ್ಯಕ್ರಮ: ಆಸಕ್ತರು ಅರ್ಜಿ ಸಲ್ಲಿಸಿ

ಉಡುಪಿ: ಉಡುಪಿ ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ನಾಗರೀಕ ಬಂದೂಕು ತರಬೇತಿ ಕಾರ್ಯಕ್ರಮವನ್ನು ಜ.16 ರಿಂದ 22 ರವರೆಗೆ ಉಡುಪಿ ಜಿಲ್ಲಾ ಪೊಲೀಸ್ ಕವಾಯತು ಮೈದಾನ, ಡಿಎಆರ್ ಉಡುಪಿ ಇಲ್ಲಿ ಹಮ್ಮಿಕೊಳ್ಳಲಾಗಿದ್ದು, ಉಡುಪಿ ಜಿಲ್ಲೆಗೆ ಸಂಬಂಧಿಸಿದ ಆಸಕ್ತ ನಾಗರೀಕರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆಗಳು ಉಡುಪಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಮತ್ತು ಡಿಎಆರ್ ಪೊಲೀಸ್ ಕೇಂದ್ರ ಸ್ಥಾನದಲ್ಲಿ ಲಭ್ಯವಿದ್ದು, ಆಸಕ್ತರು ಆಯಾಯ ಕೇಂದ್ರ ಸ್ಥಾನದಿಂದ ಅರ್ಜಿ ಪಡೆದುಕೊಂದು ಭರ್ತಿ ಮಾಡಿ ಸಲ್ಲಿಸಬಹುದು ಎಂದು ಜಿಲ್ಲಾ ಪೊಲೀಸ್ […]

ಕಾರ್ಕಳ: ಇಂದು ಸಂಜೆ ಕಲ್ಯಾ ಗ್ರಾಮ ಪಂಚಾಯತ್ ನೂತನ ಕಛೇರಿ ಕಟ್ಟಡದ ಉದ್ಘಾಟನೆ

ಕಲ್ಯಾ: ಇಂದು ಸಂಜೆ 6ಕ್ಕೆ ಶ್ರೀ ರಾಜಶೇಖರಾನಂದ ಸ್ವಾಮೀಜಿ, ವಜ್ರದೇಹಿ ಮಠ, ಗುರುಪುರ ಇವರ ಶುಭಾಶಿರ್ವಾದ ಮತ್ತು ದಿವ್ಯ ಉಪಸ್ಥಿತಿಯೊಂದಿಗೆ ಕಲ್ಯಾಗ್ರಾಮ ಪಂಚಾಯತ್ ನ ನೂತನ ಕಚೇರಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಜರಗಲಿರುವುದು. ಗ್ರಾಮ ಪಂಚಾಯತ್ ಕಾರ್ಯಕ್ರಮಗಳ ವಿವರ ಮಧ್ಯಾಹ್ನ 2.30 ರಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ಸಾ ಸಂಜೆ 6ಗಂಟೆಗೆ ಸಭಾ ಕಾರ್ಯಕ್ರಮ ಸಂಜೆ 7.00 ರಿಂದ ನಮ್ಮ ಕಲಾವಿದೆರ್ ಬೆರ್ರಿ ಇವರಿಂದ ತುಳು ಹಾಸ್ಯಮಯ ನಾಟಕ ಕುಸಲ್ದ […]