ಕಾರ್ಕಳ: ಇಂದು ಸಂಜೆ ಕಲ್ಯಾ ಗ್ರಾಮ ಪಂಚಾಯತ್ ನೂತನ ಕಛೇರಿ ಕಟ್ಟಡದ ಉದ್ಘಾಟನೆ

ಕಲ್ಯಾ: ಇಂದು ಸಂಜೆ 6ಕ್ಕೆ ಶ್ರೀ ರಾಜಶೇಖರಾನಂದ ಸ್ವಾಮೀಜಿ, ವಜ್ರದೇಹಿ ಮಠ, ಗುರುಪುರ ಇವರ ಶುಭಾಶಿರ್ವಾದ ಮತ್ತು ದಿವ್ಯ ಉಪಸ್ಥಿತಿಯೊಂದಿಗೆ ಕಲ್ಯಾಗ್ರಾಮ ಪಂಚಾಯತ್ ನ ನೂತನ ಕಚೇರಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಜರಗಲಿರುವುದು.

ಗ್ರಾಮ ಪಂಚಾಯತ್ ಕಾರ್ಯಕ್ರಮಗಳ ವಿವರ

ಮಧ್ಯಾಹ್ನ 2.30 ರಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ಸಾ ಸಂಜೆ 6ಗಂಟೆಗೆ ಸಭಾ ಕಾರ್ಯಕ್ರಮ ಸಂಜೆ 7.00 ರಿಂದ ನಮ್ಮ ಕಲಾವಿದೆರ್ ಬೆರ್ರಿ ಇವರಿಂದ ತುಳು ಹಾಸ್ಯಮಯ ನಾಟಕ ಕುಸಲ್ದ ಗೊಬ್ಬು. ಸಭಾ ಕಾರ್ಯಕ್ರಮದ ನಂತರ ಊಟದ ವ್ಯವಸ್ಥೆ ಇರುತ್ತದೆ.

ಸಂಜೆ 6.00 ಗಂಟೆಗೆ ಗ್ರಾಮ ಪಂಚಾಯತ್, ಕಲ್ಯಾ (ಕಲ್ಕಾರು) ಉದ್ಘಾಟನೆ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಂಧನ ಸಚಿವ ವಿ.ಸುನಿಲ್ ಕುಮಾರ್ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಎಸ್. ಅಂಗಾರ, ಮಾನ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು, ಘನ ಶೋಭಾ ಕರಂದ್ಲಾಜೆ, ಮಾನ್ಯ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವರು, ಕೋಟಾ ಶ್ರೀನಿವಾಸ ಪೂಜಾರಿ, ಮಾನ್ಯ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು, ಮುಖ್ಯ ಅತಿಥಿಗಳು: ಕೆ. ಜಯಪ್ರಕಾಶ್ ಹೆಗ್ಡೆ, ಮಾನ್ಯ ಅಧ್ಯಕ್ಷರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ , ಆಯನೂರು ಮಂಜುನಾಥ, ಮಾನ್ಯ ಶಾಸಕರು, ವಿಧಾನ ಪರಿಷತ್, ಎಸ್. ಎಲ್. ಭೋಜೆಗೌಡ, ಮಾನ್ಯ ಶಾಸಕರು ವಿಧಾನ ಪರಿಷತ್, ಡಾ|ತೇಜಸ್ವಿನಿ ಗೌಡ, ಮಾನ್ಯ ಶಾಸಕರು, ವಿಧಾನ ಪರಿಷತ್, ಮಂಜುನಾಥ್ ಭಂಡಾರಿ, ಮಾನ್ಯ ಶಾಸಕರು, ವಿಧಾನ ಪರಿಷತ್, ಮಣಿರಾಜ್ ಶೆಟ್ಟಿ, ಮಾನ್ಯ ಅಧ್ಯಕ್ಷರು, ಕರ್ನಾಟಕ ಗೇರು ಅಭಿವೃದ್ದಿ ನಿಗಮ ನಿಯಮಿತ, ಸಂಜೀವ ಶೆಟ್ಟಿ, ಗ್ರಾಮ ಪಂಚಾಯಿತ್, ಕಲ್ಯಾ , ಮನೋಜ್ ಜೈನ್, ಭಾ.ಆ.ಸೇ, ಆಡಳಿತ ಅಧಿಕಾರಿ, ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ , ಕೂರ್ಮರಾವ್ ಎಂ, ಭಾ.ಆ.ಸೇ. ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ, ಉಡುಪಿ , ಪ್ರಸನ್ನ ಹೆಚ್, ಭಾ.ಆ.ಸೇ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಜಿಲ್ಲಾ ಪಂಚಾಯಿತ್ ಉಡುಪಿ ಜಿಲ್ಲೆ, ಉಡುಪಿ , ಹಾ.ಕೆ. ಅಕ್ಷಯ್ ಮಚ್ಚಿಂದ್ರ, ಭಾ.ಪೋ.ಸೇ. ಪೋಲಿಸ್ ಅಧೀಕ್ಷಕರು, ಉಡುಪಿ ಜಿಲ್ಲೆ, ಉಡುಪಿ ಶ್ರೀಮತಿ ಪ್ರತಿಭಾ ಆರ್., ಆಡಳಿತಾಧಿಕಾರಿ, ತಾಲೂಕು ಪಂಚಾಯತ್ ಕಾರ್ಕಳ
, ಪ್ರದೀಪ್ ಕುರುಡೇಕರ್ ಎಸ್., ತಹಶೀಲ್ದಾರು, ಕಾರ್ಕಳ ತಾಲೂಕು, ಕಾರ್ಕಳ , ಗುರುದತ್ ಎಂ. ಎನ್., ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತ್ ಕಾರ್ಕಳ ಭಾಗವಹಿಸಲಿದ್ದಾರೆ.

ಅಧ್ಯಕ್ಷ ಸಂಜೀವ ಶೆಟ್ಟಿ, ಉಪಾಧ್ಯಕ್ಷೆ ಶ್ರೀಮತಿ ಸುಪ್ರಿಯಾ, ಕಾರ್ಯದರ್ಶಿ ಶ್ರೀಮತಿ ಕಸ್ತೂರಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀಮತಿ ರೇವತಿ, ಕಲ್ಯಾ ಗ್ರಾಮ ಪಂಚಾಯತ್ ನ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿರಲಿದ್ದಾರೆ.