ಮೂಡುಬಿದಿರೆ:ಪಿಯುಸಿ ಪರೀಕ್ಷೆ: ಆಳ್ವಾಸ್ ಪದವಿ ಪೂರ್ವ ಕಾಲೇಜಿಗೆ ರ‍್ಯಾಂಕ್‌ಗಳ ಸುರಿಮಳೆ

ಮೂಡುಬಿದಿರೆ : ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಗಳಲ್ಲಿ ಒಟ್ಟು 45 ವಿದ್ಯಾರ್ಥಿಗಳು ರಾಜ್ಯದ ಪ್ರಥಮ 10 ರ‍್ಯಾಂಕ್‌ಗಳಲ್ಲಿ ಸ್ಥಾನವನ್ನು ಪಡೆಯುವ ಮೂಲಕ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಸಾರ್ವತ್ರಿಕ ದಾಖಲೆಯನ್ನು ನಿರ್ಮಿಸಿದೆ. ವಿಜ್ಞಾನ ವಿಭಾಗದಲ್ಲಿ ಸಂಸ್ಥೆಯ ಬಿಂದು ನವಲೆ, ರಾಜ ಯದು ವಂಶಿ ಯಾದವ್ ಹಾಗೂ ವಿಜೇತ್ ಜಿ ಗೌಡ 598 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ […]

ಬಂಟಕಲ್:ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸೌರಶಕ್ತಿ ಚಾಲಿತ ಬೀಜ ಬಿತ್ತನೆ ಯಂತ್ರದ ಅಭಿವೃದ್ಧಿ ಕಾರ್ಯ

ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಐಶ್ವರ್ಯ, ಕಿರಣ್, ಗುರುಕಿರಣ್, ಲಿಖಿತ್ ಎರ್ಮಾಳ್ ಇವರು ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ. ರಾಜಾ ಯತೀಶ್ ಯಾದವ್ ಇವರ ನೇತೃತ್ವದಲ್ಲಿ ಸೌರಶಕ್ತಿ ಚಾಲಿತ ಬೀಜ ಬಿತ್ತನೆ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ. ರೈತರು ಕೃಷಿ ಭೂಮಿಯಲ್ಲಿ ಬೀಜಗಳನ್ನು ಬಿತ್ತಲುಸಾಂಪ್ರದಾಯಿಕ ವಿಧಾನಗಳನ್ನು ಬಳಸುತ್ತಿದ್ದಾರೆ. ಈ ಹಳೆಯ ವ್ಯವಸ್ಥೆಯಲ್ಲಿ ಕೈಯಿಂದ ಬೀಜ ಬಿತ್ತಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಹಾಗೂ ಕಾರ್ಮಿಕರಕೊರತೆಯಿರುವುದರಿಂದ ಈ ಪದ್ಧತಿಯು ಕ್ರಮೇಣಅಪ್ರಸ್ತುತ […]

ಮಣಿಪಾಲ: ಧರೆಗೆ ಉರುಳಿತು 50 ವರ್ಷಗಳ ಹಳೆಯ ನೀರಿನ ಟ್ಯಾಂಕ್

ಉಡುಪಿ: ಮಣಿಪಾಲ ಕೆನರಾ ಬ್ಯಾಂಕ್ ರಸ್ತೆಯಲ್ಲಿ ಸಿಂಡಿಕೇಟ್ ಹೌಸ್ ಬಳಿ ಇದ್ದ ಬೃಹತ್ ನೀರಿನ ಟ್ಯಾಂಕ್ ನ್ನು ನಗರಸಭೆ ಸಿಬ್ಬಂದಿ ಧರೆಗೆ ಉರುಳಿಸಿದರು. ನಗರಸಭೆಯ ಮಣಿಪಾಲ ಉಪ ಕಛೇರಿಯ ಎದುರು ಸುಮಾರು 50 ವರ್ಷಗಳಿಂದ ಮಣಿಪಾಲ ಪರಿಸರಕ್ಕೆ ನೀರುಣಿಸುತ್ತಿದ್ದ ಟ್ಯಾಂಕ್ ಇದಾಗಿತ್ತು. ಇದು ಶಿಥಿಲಗೊಂಡಿದ್ದರಿಂದ ಹೊಸ ಟ್ಯಾಂಕ್ ನಿರ್ಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಕಲ ಮುಂಜಾಗ್ರತಾ ಕ್ರಮಗಳೊಂದಿಗೆ ಓವರ್ ಹೆಡ್ ಟ್ಯಾಂಕ್ ಅನ್ನು ಧರಾಶಾಹಿ ಮಾಡಲಾಯಿತು.

ಹೆಬ್ರಿ:ನಮ್ರತಾ ಹೋಂ ಇಂಡಸ್ಟ್ರಿಯಲ್ಲಿ ಸ್ನಾಕ್ಸ್ ತಯಾರಿಕಾ ಘಟಕಕ್ಕೆ ಪುರುಷರು ಬೇಕಾಗಿದ್ದಾರೆ.

ಸಂತೆಕಟ್ಟೆ:ಸಂತೆಕಟ್ಟೆ ಹೆಬ್ರಿಯಲ್ಲಿರುವ ಸ್ನ್ಯಾಕ್ಸ್ ತಯಾರಿಕಾ ಘಟಕದಲ್ಲಿ ವಿವಿಧ ಹುದ್ದೆಗಳಿಗೆ ಪುರುಷ ಅಭ್ಯರ್ಥಿಗಳ ನೇಮಕಾತಿ ನಡೆಯುತ್ತಿದೆ. ಹುದ್ದೆಗಳು:🔹ಸ್ನ್ಯಾಕ್ಸ್ ಫ್ರೈಯಿಂಗ್ ವರ್ಕರ್ಸ್🔹ಹಿಟ್ಟು ಮಿಶ್ರಕ ಸಿಬ್ಬಂದಿ🔹ಸ್ನ್ಯಾಕ್ಸ್ ಮೆಷಿನ್ ಆಪರೇಟರ್‌ಗಳು ಕೆಲಸದ ತರಬೇತಿ ನೀಡಲಾಗುತ್ತದೆ.ವೇತನ: ₹14,000 ರಿಂದ ₹16,000 ವರೆಗೆ.ಉಚಿತ ಊಟ, ESI ಮತ್ತು ವಸತಿ ಸೌಲಭ್ಯ ನೀಡಲಾಗುತ್ತದೆ.ಆಸಕ್ತಿ ಇದ್ದವರು ಸಂಪರ್ಕಿಸಿ.📞 ಸಂಪರ್ಕ ಸಂಖ್ಯೆ: 9035520352

ವೆಂಕಟರಮಣ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇ 100 ಫಲಿತಾಂಶದೊಂದಿಗೆ ರಾಜ್ಯ ಮಟ್ಟದಲ್ಲಿ 10 ರ್‍ಯಾಂಕ್ ಗಳು.

ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 10 ರ್‍ಯಾಂಕ್ ಪಡೆಯುವುದರ ಮೂಲಕ ಶೇ 100 ಫಲಿತಾಂಶ ದಾಖಲಿಸಿದೆ. ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿನಿ ಸುಮಿತ್ರಾ ಭಟ್ (593 ) ರಾಜ್ಯಕ್ಕೆ 7ನೇ ರ್‍ಯಾಂಕ್, ಸನ್ನಿದಿ ಎಮ್ (592) 8 ನೇ ರ್‍ಯಾಂಕ್, ಕೀರ್ತನಾ, ರಂಜಿತಾ (591) 9 ನೇ ರ್‍ಯಾಂಕ್, ಅನನ್ಯ, ಚೈತ್ರಾ, ನಿಶಾ, ಸಾತ್ವಿಕ್( 590) 10 ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗ ದಲ್ಲಿ ವಿ. ದಿವೀಶ್ […]