ಉಡುಪಿ: ಜುವೆಲ್ಲರಿ ವರ್ಕ್‌ಶಾಪ್‌ ಗೆ ನುಗ್ಗಿ ಅಪಾರ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ; ಸಿಸಿಟಿವಿಯಲ್ಲಿ ಬಯಲಾಯಿತು ಕಳ್ಳರ ಕೃತ್ಯ

ಉಡುಪಿ: ಉಡುಪಿ ನಗರದ ಚಿತ್ತರಂಜನ್ ಸರ್ಕಲ್‌ನ ಮಾರುತಿ ವೀಥಿಕಾ ಬಳಿ ಜುವ್ಯೆಲ್ಲರಿ ವರ್ಕ್‌ಶಾಪ್‌ಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದನ್ನು ಕಳ್ಳತನಗೈದು ಪರಾರಿಯಾಗಿದ್ದಾರೆ. ಕಳ್ಳತನ‌ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವರ್ಕ್‌ಶಾಪ್‌ನ ಒಳಗೆ ಅಳವಡಿಸಲಾದ ಸಿಸಿಟಿವಿಯಲ್ಲಿ ಈ ಕೃತ್ಯದಲ್ಲಿ ಇಬ್ಬರು ಮುಸುಕುಧಾರಿಗಳು ಇರುವುದು ಕಂಡುಬಂದಿದೆ. ಅದರಲ್ಲಿ ಒಬ್ಬಾತ ಮೊದಲಿಗೆ ಒಳಗೆ ಬಂದು ಒಳಗಿನ ಎರಡು ಸಿಸಿಟಿವಿ ಕ್ಯಾಮೆರಾಗಳಿಗೆ ಸ್ಪ್ರೇ ಹಾಕಿ ದೃಶ್ಯ ಕಾಣದಂತೆ ಮಾಡಿರುವುದು ಸೆರೆಯಾಗಿದೆ. ಕಳ್ಳರು ಕಾರು ಮತ್ತು ಬೈಕಿನಲ್ಲಿ ಬಂದು […]

ಮಂಗಳೂರಿನಲ್ಲಿ ಅನಾವರಣಗೊಳ್ಳಲಿದೆ ರೋಹನ್ ಕಾರ್ಪೊರೇಷನ್’ನ ಮಹತ್ವಾಕಾಂಕ್ಷಿ ಯೋಜನೆ “ರೋಹನ್ ಮರೀನಾ ಒನ್”

ಮಂಗಳೂರು: ಮೂರು ದಶಕಗಳ ಅನುಭವ ಹೊಂದಿರುವ ಭಾರತದ ಅತ್ಯಂತ ವಿಶ್ವಾಸಾರ್ಹ ರಿಯಲ್ ಎಸ್ಟೇಟ್ ಡೆವಲಪರ್‌ಗಳಲ್ಲಿ ಒಂದಾದ ಮಂಗಳೂರಿನ ರೋಹನ್ ಕಾರ್ಪೊರೇಷನ್, ತನ್ನ ಮಹತ್ವಾಕಾಂಕ್ಷಿ ಯೋಜನೆ – ರೋಹನ್ ಮರೀನಾ ಒನ್ ಅನ್ನು ಹೆಮ್ಮೆಯಿಂದ ಪರಿಚಯಿಸುತ್ತಿದೆ. ಭಾರತದ ರಿಯಲ್‌ ಎಸ್ಟೇಟ್‌ ಇತಿಹಾಸದಲ್ಲೇ ಒಂದು ವಿನೂತನ ಪ್ರಯೋಗವಾಗಿರುವ ರೋಹನ್ ಮರೀನಾ ಒನ್, ಅರಬ್ಬಿ ಸಮುದ್ರದ ಸುಂದರ ಕಡಲತೀರದ ದೃಶ್ಯವು ಪ್ರತಿಯೊಂದು ಅಪಾರ್ಟ್‌ಮೆಂಟ್ಗೂ ಕಾಣಿಸುವಂತೆ ಇರುವ ಉತ್ಕೃಷ್ಟ ವಸತಿ ಯೋಜನೆಯಾಗಿದೆ. ಮಂಗಳೂರಿನ ಸುರತ್ಕಲ್‌ NITK ಬೀಚ್ ರಸ್ತೆಯಲ್ಲಿರುವ ರೋಹನ್ ಮರೀನಾ ಒನ್, […]

ಮಣಿಪುರ: ಬಾವಿಗೆ ಬಿದ್ದ ಚಿರತೆ ಮರಿಯ ರಕ್ಷಣೆ

ಉಡುಪಿ: ಬಾವಿಗೆ ಬಿದ್ದ ಚಿರತೆ ಮರಿಯನ್ನು ರಕ್ಷಿಸಿರುವ ಘಟನೆ ಮಣಿಪುರ ಗ್ರಾಮದ ಸಿ.ಎಸ್.ಐ.ಚರ್ಚ್ ಬಳಿ ಮಂಗಳವಾರ ನಡೆದಿದೆ. ಮಣಿಪುರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜೋನ್ ಸಿಕ್ವೆರಾ ಅವರ ಸಹೋದರ ಜೇಕಬ್ ಸಿಕ್ಕೇರಾ ಅವರ ಮನೆಯ ತೋಟದ ಬಾವಿಯಲ್ಲಿ ಚಿರತೆ ಮರಿಯೊಂದು ಬಾವಿಗೆ ಬಿದ್ದಿದ್ದು, ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಅದರಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಚಿರತೆಯನ್ನು ಬಾವಿಯಿಂದ ರಕ್ಷಿಸಿ ಸೋಮೇಶ್ವರ ಅಭಯಾರಣ್ಯಕ್ಕೆ ಕೊಂಡೊಯ್ಯದ್ದು ಬಿಟ್ಟಿದ್ದಾರೆ.ಜೇಕಬ್ ಸಿಕ್ಕೇರ ಅವರ ತೋಟದ […]

ಉಡುಪಿ: ಉದ್ಯಾವರದಲ್ಲಿ ಬೈಕ್-ಟ್ಯಾಂಕರ್ ನಡುವೆ ಅಪಘಾತ; ಸವಾರ ಮೃತ್ಯು

ಉಡುಪಿ: ರಾಷ್ಟ್ರೀಯ ಹೆದ್ದಾರಿ ಉದ್ಯಾವರ ಸಮೀಪದ ಬಲೈಪಾದೆ ಜಂಕ್ಷನ್‌ನಲ್ಲಿ ಟ್ಯಾಂಕರ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಮೃತಪಟ್ಟವರನ್ನು ಬ್ರಹ್ಮಾವರ ತಾಲೂಕಿನ ಉಪ್ಪಿನಕೋಟೆ ನಿವಾಸಿ ಸುರೇಶ್ (43) ಎಂದು ಗುರುತಿಸಲಾಗಿದೆ. ಸುರೇಶ್ ಅವರು ಬ್ರಹ್ಮಾವರದಲ್ಲಿ ಬ್ರಹ್ಮಾವರ ವರ್ಕ್ ಶಾಪ್‌ ಅಂಗಡಿಯನ್ನು ನಡೆಸುತ್ತಿದ್ದರು. ಇವರು ಕೆಲಸ ಮುಗಿಸಿ ಉದ್ಯಾವರದಿಂದ ಹಿಂತಿರುಗುತ್ತಿದ್ದಾಗ, ಕಟಪಾಡಿಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಟ್ಯಾಂಕರ್ ಅವರ ಬೈಕ್‌ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ, ಅವರು ತಮ್ಮ ಬೈಕ್‌ನೊಂದಿಗೆ […]

ಮುಂಡ್ಕೂರಿನಲ್ಲಿ ಅಡಿಕೆ ಕಳವು ಪ್ರಕರಣ: 12 ಮಂದಿ ಅಪ್ರಾಪ್ತ ಬಾಲಕರ ಬಂಧನ.

ಕಾರ್ಕಳ: ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಮುಂಡ್ಯೂರಿನಲ್ಲಿ ಕಳೆದ ತಿಂಗಳು ನಡೆದ ಅಡಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿ 12 ಮಂದಿ ಅಪ್ರಾಪ್ತ ವಯಸ್ಸಿನ ಬಾಲಕರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆ.23ರಂದು ಮುಂಡೂರು ತೋಟದ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಅಡಿಕೆ ಕಳವಾದ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಸೆ.8ರಂದು 12 ಮಂದಿ ಬಾಲಕರನ್ನು ಬಂಧಿಸಿ, 5ಲಕ್ಷ ರೂ. ಮೌಲ್ಯದ 1100 ಕೆಜಿ ಅಡಿಕೆಯನ್ನು ವಶ ಪಡಿಸಿಕೊಂಡಿದ್ದಾರೆ. […]