ನೇಪಾಳ ಪ್ರತಿಭಟನೆ; ಸಂಕಷ್ಟಕ್ಕೆ ಸಿಲುಕಿರುವ ಪ್ರತಿಯೊಬ್ಬ ಕನ್ನಡಿಗನ ರಕ್ಷಣೆ: ಸಿಎಂ

ಬೆಂಗಳೂರು: ನೇಪಾಳದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಘಟನೆ ಬೆನ್ನಲ್ಲೇ ಸಂಕಷ್ಟಕ್ಕೆ ಸಿಲುಕಿರುವ ಪ್ರತಿಯೊಬ್ಬ ಕನ್ನಡಿಗನ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ. ನೇಪಾಳ ಪರಿಸ್ಥಿತಿ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ನೇಪಾಳದಲ್ಲಿ ವಿದ್ಯಾರ್ಥಿ-ಯುವಜನರ ಕ್ಷಿಪ್ರ ಬೃಹತ್ ಪ್ರತಿಭಟನೆ ಕಾರಣಕ್ಕೆ ದೇಶಾದ್ಯಂತ ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿದೆ. ಪರಿಣಾಮವಾಗಿ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಸಿಲುಕಿರುವ 39 ಮಂದಿ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆ […]
ಗಂಗೂಬಾಯಿ ಹಾನಗಲ್ ವಿವಿಯ ಜೂನಿಯರ್ ವಿಭಾಗದ ಪರೀಕ್ಷೆ: ಕಾರ್ಕಳದ ಅದಿತ್ರಿಯ ಸಿಂಧು ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆ.

ಕಾರ್ಕಳ: ಅದಿತ್ರಿಯ ಸಿಂಧು ಇವರು ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯ ನಡೆಸಿದ ಈ ವರ್ಷದ ಭರತನ್ಯಾಟ ಜ್ಯೂನಿಯರ್ ಪರಿಕ್ಷೆಯಲ್ಲಿ ಶೇಕಡಾ 94% ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಮದಿರುತ್ತಾರೆ. ಕಾರ್ಕಳದ ಶ್ರೀಮತಿ ಸುರೇಖ ಮತ್ತು ದಿನೇಶ್ ಆಚಾರ್ಯರವರ ಸುಪುತ್ರಿ, ಮೂಡಬಿದ್ರೆಯ ಸುಖದಾ ಬರ್ವೆಯವರ ಶಿಷ್ಯೆಯಾಗಿದ್ದು, ಕಾರ್ಕಳ ವರ್ಧಮಾನ ಶಿಕ್ಷಣ ಸಂಸ್ಥೆಯ 5ನೇತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಕಾರ್ಕಳ: ಸೆ.13 ರಂದು ಉಚಿತ ಶ್ರವಣ ಶಕ್ತಿ ತಪಾಸಣೆ ಶಿಬಿರ.

ಉಡುಪಿ: ಕಾರ್ಕಳ ಖಾಸಗಿ ಬಸ್ ನಿಲ್ದಾಣದ ಸಮೀಪ ಮಣ್ಣ ಗೋಪುರದ ಎದುರಿನ ಸವರಿನ್ ಬಿಲ್ಡಿಂಗ್‌ನ ಮೊದಲ ಮಹಡಿಯಲ್ಲಿ ಸ್ವಸ್ತಿಕ್ ಹಿಯರಿಂಗ್ ಏಯ್ಡ್ ಕ್ಲಿನಿಕ್‌ನಲ್ಲಿ ಸೆ.13ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕಿವಿ ಕೇಳಿಸದ ಸಮಸ್ಯೆ ಇದ್ದವರಿಗೆ ಉಚಿತ ಸಂದರ್ಶನ ಹಾಗೂ ಉಚಿತ ಶ್ರವಣ ಶಕ್ತಿ ತಪಾಸಣೆ ಹಾಗೂ ಉಚಿತ ಸಲಹೆ ನೀಡಲಾಗುವುದು. ಇಲ್ಲಿ ರಿಯಾಯಿತಿ ದರದಲ್ಲಿ ಶ್ರವಣ ಸಾಧನಗಳು ಲಭ್ಯವಿದೆ. ಈ ಶ್ರವಣ ಸಾಧನಗಳಲ್ಲಿ ಕ್ಲಿಯರ್ ಕೇಳಿಸುವ ತಂತ್ರಜ್ಞಾನವಿದ್ದು, 2ವರ್ಷ ಬ್ರ್ಯಾಂಡ್ ವಾರಂಟಿ ಇರುತ್ತದೆ. ಹಳೆಯ ಶ್ರವಣ […]
ಭ್ರೂಣ ಲಿಂಗ ಪತ್ತೆ ವಿರೋಧಿ ಕಾಯ್ದೆಯ ಗಡುವು ವಿಸ್ತರಿಸಿ ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ: ‘ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ತಂತ್ರವಿಧಾನಗಳ (ಪಿಸಿ–ಪಿಎನ್‌ಡಿಟಿ) ಕಾಯ್ದೆ ಮತ್ತು ಸಂಬಂಧಿತ ನಿಯಮಗಳ ಪರಿಣಾಮಕಾರಿ ಅನುಷ್ಠಾನ ಕೋರಿ ಸಲ್ಲಿಯಾಗಿದ್ದ ಅರ್ಜಿಗೆ ಪ್ರತಿಕ್ರಿಯೆ ನೀಡಲು ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಮತ್ತೆ ನಾಲ್ಕು ವಾರ ಕಾಲಾವಕಾಶ ನೀಡಿದೆ.ಐದು ರಾಜ್ಯಗಳು ತಮ್ಮ ನಿಲುವು ಸ್ಪಷ್ಟಪಡಿಸದ ಕಾರಣ ಸುಪ್ರೀಂ ಕೋರ್ಟ್ ಮಂಗಳವಾರ ಮತ್ತೆ ಗಡುವು ವಿಸ್ತರಿಸಿದೆ. ಈ ಕುರಿತಂತೆ ಪ್ರತಿಕ್ರಿಯೆ ಸಲ್ಲಿಸಲು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಪಿಸಿಪಿಎನ್‌ಡಿಟಿ ಕಾಯ್ದೆಯು ಭ್ರೂಣದ ಲಿಂಗ ಪತ್ತೆಗಾಗಿ […]
ಬುರ್ಖಾ ಹಾಕಿ ತನಿಖೆ ನಡೆಸುವ ಬದಲು ರಾಜಧರ್ಮ ಪಾಲನೆ ಮಾಡಿ:ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ವಿ ಸುನಿಲ್ ಕುಮಾರ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುರ್ಖಾ ಹಾಕಿಕೊಂಡು ತನಿಖೆ ನಡೆಸುವ ಬದಲು ರಾಜಧರ್ಮ ಪಾಲನೆ ಮಾಡಲಿ ಎಂದು ಟೀಕಿಸಿರುವ ಮಾಜಿ ಸಚಿವ ವಿ.ಸುನಿಲ್ ಕುಮಾರ್, ಕಾಂಗ್ರೆಸ್ ಸರಕಾರ ಬಂದ ಅನಂತರ ಮಂಡ್ಯ ಜಿಲ್ಲೆ ಜೆಹಾದಿ ಚಟುವಟಿಕೆಗಳ ಪ್ರಯೋಗ ಶಾಲೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಗಣೇಶ ವಿಸರ್ಜನೆ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಇದರಿಂದಾಗಿ ಈ ಸರಕಾರದ ಆದ್ಯತೆ ಏನೆಂಬುದು ಸ್ಪಷ್ಟವಾಗಿದೆ. […]