ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಧಾನ ಕಚೇರಿ ಕಟ್ಟಡ “ಸಮೃದ್ಧಿ” ಉದ್ಘಾಟನೆ.

ಉಡುಪಿ: ಕೊಡವೂರು ಶಾಲಾ ಬಳಿ ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಪ್ರಧಾನ ಕಛೇರಿ ಕಟ್ಟಡ “ಸಮೃದ್ಧಿ” ಇದರ ಉದ್ಘಾಟನಾ ಸಮಾರಂಭವು ಡಿಸೆಂಬರ್ 7 ರಂದು ನಡೆಯಿತು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಇವತ್ತು ವಾಣಿಜ್ಯ ಬ್ಯಾಂಕುಗಳ ತವರೂರು ಎನ್ನಲಾಗುತ್ತಿದೆ. ಆದರೆ ಅವರಿಗಿಂತಲೂ ಅತ್ಯುತ್ತಮ ಸೇವೆಯನ್ನು ಸಹಕಾರಿ ಸಂಘಗಳು ನೀಡುತ್ತಿದೆ. ನಾರಾಯಣ ಬಲ್ಲಾಳ್ ಅವರು ಸಹಕಾರ ಸಂಘಕ್ಕೆ ವಿಶೇಷವಾದ ಕೊಡುಗೆಗಳನ್ನು […]

ಉಡುಪಿ: ಡಿಸೆಂಬರ್ 15 ರಿಂದ 19 ರ ವರೆಗೆ ಅಣಬೆ ಮತ್ತು ಜೇನು ಕೃಷಿ ತರಬೇತಿ

ಉಡುಪಿ: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಆತ್ಮ ಯೋಜನೆಯಡಿ ಯುವ ರೈತ ಮತ್ತು ಯುವ ರೈತ ಮಹಿಳೆಯರಿಗೆ ಡಿಸೆಂಬರ್ 15 ರಿಂದ 19 ರ ವರೆಗೆ ಐದು ದಿನಗಳ ಕಾಲ ಅಣಬೆ ಹಾಗೂ ಜೇನು ಕೃಷಿ ಕುರಿತು ತರಬೇತಿ ಕಾರ್ಯಕ್ರಮವನ್ನು ಕುಂದಾಪುರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಡಿ. 12 ರ ಒಳಗಾಗಿ ಮೇಲ್ಕಂಡ ಕಚೇರಿಗೆ ಆಧಾರ್, ಪಹಣೀ ಪತ್ರ, ಬ್ಯಾಂಕ್ ಖಾತೆ ಪ್ರತಿ ಮತ್ತು ಭಾವಚಿತ್ರ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು […]

ಮಣಿಪಾಲ ಅಸಿಸ್ಟೆಡ್ ರಿಪ್ರೊಡಕ್ಷನ್ ಸೆಂಟರ್’ನಲ್ಲಿ( ಮಾರ್ಕ್) 16 ತಿಂಗಳೊಳಗೆ 100 ಯಶಸ್ವಿ ಗರ್ಭಧಾರಣೆ.

ಮಣಿಪಾಲ, ಡಿ.6: ಮಣಿಪಾಲ: ಡಾ. ರಾಮದಾಸ್ ಎಂ ಪೈ ಬ್ಲಾಕ್‌ನಲ್ಲಿ ಹೊಸದಾಗಿ ತೆರೆಯಲಾದ ಮಣಿಪಾಲ ಅಸಿಸ್ಟೆಡ್ ರಿಪ್ರೊಡಕ್ಷನ್ ಸೆಂಟರ್ (MARC) ನಲ್ಲಿರುವ ಫಲವತ್ತತೆ ಘಟಕವು ಸೇವೆಗಳನ್ನು ಪ್ರಾರಂಭಿಸಿದ ಕೇವಲ 16 ತಿಂಗಳೊಳಗೆ 100 ನೇ ಯಶಸ್ವಿ ಗರ್ಭಧಾರಣೆಯನ್ನು ದಾಖಲಿಸುವ ಮೂಲಕ ಪ್ರಮುಖ ಮೈಲಿಗಲ್ಲು ಸಾಧಿಸಿದೆ. ಮಾರ್ಕ್ ಹಲವು ವರ್ಷಗಳಿಂದ ಕಸ್ತೂರ್ಬಾ ಆಸ್ಪತ್ರೆಯ ಅವಿಭಾಜ್ಯ ಅಂಗವಾಗಿದೆ, ಇದು ಗುಣಮಟ್ಟದ ವೈದ್ಯಕೀಯ ಫಲಿತಾಂಶಗಳು ಮತ್ತು ರೋಗಿಗಳ ಆಳವಾದ ನಂಬಿಕೆಗೆ ಹೆಸರುವಾಸಿಯಾಗಿದೆ. ಡಾ. ರಾಮದಾಸ್ ಎಂ. ಪೈ ಬ್ಲಾಕ್‌ನಲ್ಲಿರುವ ವಿಶೇಷ ಘಟಕವನ್ನು […]

ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘ: ನಾಳೆ (ಡಿ. 7) ಪ್ರಧಾನ ಕಚೇರಿಯ ಹವಾನಿಯಂತ್ರಿತ “ಸಮೃದ್ಧಿ” ಕಟ್ಟಡ ಉದ್ಘಾಟನಾ ಸಮಾರಂಭ.

ಉಡುಪಿ: ಕೊಡವೂರು ಶಾಲಾ ಬಳಿ ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಪ್ರಧಾನ ಕಛೇರಿ ಕಟ್ಟಡ “ಸಮೃದ್ಧಿ” ಇದರ ಉದ್ಘಾಟನಾ ಸಮಾರಂಭವು ಡಿಸೆಂಬರ್ 7ರಂದು ಬೆಳಿಗ್ಗೆ 10ಕ್ಕೆ ಜರಗಲಿದೆ. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್ ನೂತನ ಕಟ್ಟಡ, ಆಡಳಿತ ಮಂಡಳಿ ಸಭಾಂಗಣವನ್ನು ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ದೀಪ ಪ್ರಜ್ವಲಿಸಲಿದ್ದು, ಶಾಸಕ ಯಶ್‌ಪಾಲ್ ಎ. ಸುವರ್ಣ ಸಭಾ ಕಾರ್ಯಕ್ರಮ […]

ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಉಡುಪಿ ಪೊಲೀಸ್ ಇಲಾಖೆಗೆ ಹೊಸ ಜೀಪ್ ಹಸ್ತಾಂತರ

ಉಡುಪಿ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಡುಪಿ ಜಿಲ್ಲಾ ಪೊಲೀಸರಿಗೆ ಬೋಲೇರೋ ವಾಹನವನ್ನು ಕೊಡುಗೆಯಾಗಿ ಹಸ್ತಾಂತರ ಮಾಡಿದೆ. ಉಡುಪಿ ಎಸ್‌ಪಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಬ್ಯಾಂಕ್ ನ ಅಧ್ಯಕ್ಷರಾದ ಡಾ. ಎಂ. ಎನ್ ರಾಜೇಂದ್ರ ಕುಮಾರ್ ಹೊಸ ವಾಹನಕ್ಕೆ ಹಸಿರು ನಿಶಾನೆ ತೋರಿ, ಎಸ್ ಪಿ ಹರಿರಾಮ್ ಶಂಕರ್ ಅವರಿಗೆ ಕೀಲಿ ಕೈ ಹಸ್ತಾಂತರ ಮಾಡಿದರು.ಪೊಲೀಸ್ ಇಲಾಖೆ ಹಲವಾರು ವಾಹನಗಳು 15 ವರ್ಷವನ್ನು ಪೂರೈಸಿದ್ದು, ಕೆಲ ವಾಹನಗಳು ದುರಸ್ತಿಯಲ್ಲಿ ಇರುವುದರಿಂದ ಇಲಾಖೆಗೆ ಕರ್ತವ್ಯ ನಿರ್ವಹಿಸಲು […]