ಸಂಚಾರಿ ಪೋಲೀಸ್ ಮತ್ತು ಚಾಲಕರಿಗೆ ತುರ್ತು ಪರಿಸ್ಥಿತಿ ಪ್ರಥಮ ಪ್ರತಿಕ್ರಿಯೆ ತರಬೇತಿ ಕಾರ್ಯಾಗಾರ

ಮಣಿಪಾಲ: ಉಡುಪಿ ಜಿಲ್ಲಾ ಪೊಲೀಸ್, ಸೆಂಟರ್ ಫಾರ್ ಕ್ಲಿನಿಕಲ್ ಮತ್ತು ಇನ್ನೋವೇಟಿವ್ ಫೋರೆನ್ಸಿಕ್ಸ್ (CCIF) ಮತ್ತು ಕೆಎಂಸಿ ಮಣಿಪಾಲದ ತುರ್ತು ವೈದ್ಯಕೀಯ ವಿಭಾಗದ ಸಹಯೋಗದೊಂದಿಗೆ ಟ್ರಾಫಿಕ್ ಪೊಲೀಸ್ ಮತ್ತು ಚಾಲಕರಿಗೆ ಪ್ರಥಮ ಪ್ರತಿಕ್ರಿಯೆ ನೀಡುವುದರ ಬಗ್ಗೆ ತರಬೇತಿ ಕಾರ್ಯಾಗಾರವನ್ನು ಮೇ . 30 ರಂದು ಡಾ. ಟಿಎಂಎ ಪೈ ಹಾಲ್ ನಲ್ಲಿ ಆಯೋಜಿಸಲಾಯಿತು. ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹಾಕೆ ಅಕ್ಷಯ್ ಮಚ್ಚಿಂದ್ರ ಭಾಗವಹಿಸಿ ಮಾತನಾಡಿ, ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ಮತ್ತು ತುರ್ತು ಸಂದರ್ಭಗಳಲ್ಲಿ […]

75 ದಿನಗಳ ದಾಖಲೆ ಅವಧಿಯಲ್ಲಿ ರನ್ ವೇ ರಿ-ಕಾರ್ಪೆಟಿಂಗ್ ಪೂರ್ಣಗೊಳಿಸಿದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ!

ಮಂಗಳೂರು: ಜನವರಿ 27 ರಂದು 2.45 ಕಿಮೀ ಉದ್ದದ ರನ್‌ವೇ 06-24 ರ ರಿ-ಕಾರ್ಪೆಟಿಂಗ್ ಕಾಮಗಾರಿಯನ್ನು ಆರಂಭಿಸಿದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಮೇ 28 ರಂದು ತನ್ನ ವೇಳಾಪಟ್ಟಿಗಿಂತ ಮುಂಚಿತವಾಗಿ ಕೆಲಸವನ್ನು ಪೂರ್ಣಗೊಳಿಸಿದೆ. ಇದರೊಂದಿಗೆ ಜೂನ್ 1 ರಿಂದ ಹಳೆಯ ವೇಳಾಪಟ್ಟಿಗನುಗುಣವಾಗಿ ವಿಮಾನ ಸಂಚಾರ ನಡೆಯಲಿದೆ. ವಿಮಾನ ನಿಲ್ದಾಣದ ರನ್‌ವೇಗಳನ್ನು ನಿಖರವಾದ, ಅಂತರಾಷ್ಟ್ರೀಯವಾಗಿ ಕಡ್ಡಾಯವಾದ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಿಸಲಾಗುತ್ತದೆ. ಆದರೆ ಆಗಾಗ್ಗೆ ಲ್ಯಾಂಡಿಂಗ್ ಮತ್ತು ಟೇಕ್-ಆಫ್ ಆಗುವ ವಿಮಾನಗಳು ರನ್ ವೇಗಳ ಸವೆತಕ್ಕೆ ಕಾರಣವಾಗುತ್ತವೆ. ಮಳೆ […]

ಉತ್ತಮ ಸಾಧನೆ ಮಾಡಿರುವ ಶಾಲೆಗಳಿಂದ ಪ್ರತಿಷ್ಠಿತ ಶಾಲೆ ಮಾನ್ಯತೆಗಾಗಿ ಅರ್ಜಿ ಆಹ್ವಾನ

ಉಡುಪಿ : ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅರ್ಥಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮುಂಬರಲು ಸಹಾಯವಾಗುವಂತೆ ಜಿಲ್ಲೆಯಲ್ಲಿನ ಪ್ರತಿಷ್ಟಿತ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶ ಕಲ್ಪಿಸಿ ಪಿಯುಸಿ ವ್ಯಾಸಂಗದವರೆಗೆ ಶಿಕ್ಷಣ ಕಲ್ಪಿಸಲು ಸರಕಾರದಿಂದ ಯೋಜನೆಯನ್ನು ರೂಪಿಸಲಾಗಿದೆ. ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಶಾಲೆ ಮತ್ತು ಕಾಲೇಜುಗಳಲ್ಲಿ ಉತ್ತಮ ಮೂಲಭೂತ ಸೌಕರ್ಯ, ಭೋದನೆ, ಗ್ರಂಥಾಲಯ, ಪ್ರಯೋಗಾಲಯ ,ಕ್ರೀಡಾ ಚಟುವಟಿಕೆ, ಕಳೆದ 3 ವರ್ಷಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಶೇ 100 ಫಲಿತಾಂಶ ಹೊಂದಿರುವ ಶಾಲೆಗಳನ್ನು ಪ್ರತಿಷ್ಠಿತ […]

ಉಡುಪಿ: ಜೂನ್ 7 ರಂದು ಅಂಚೆ ಅದಾಲತ್

ಉಡುಪಿ : ಉಡುಪಿ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಜೂನ್ 7 ರಂದು ಅಂಚೆ ಅದಾಲತ್ ನಡೆಯಲಿದ್ದು, ಅಂಚೆ ಗ್ರಾಹಕರು ತಮ್ಮ ದೂರು ಮತ್ತು ಸಲಹೆಗಳನ್ನು ಜೂನ್ 5 ರೊಳಗೆ ಅಧೀಕ್ಷಕರ ಕಚೇರಿಗೆ ಸಲ್ಲಿಸಬಹುದು ಅಥವಾ ಅಂಚೆ ಅದಾಲತ್ ನಡೆಯುವ ದಿನದಂದು ಹಾಜರಿದ್ದು ಚರ್ಚಿಸಿ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಎಂದು ಉಡುಪಿ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಂಚು ಕಾರ್ಮಿಕರ ಬೇಡಿಕೆ ಈಡೇರಿಕೆಗಾಗಿ ಸಿಐಟಿಯು ಧ್ವಜಾರೋಹಣ

ಕುಂದಾಪುರ: ಇಲ್ಲಿನ ಹಂಚು ಕಾರ್ಮಿಕರ ಭವನದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಕೆ ಶಂಕರ್ ಧ್ವಜಾರೋಹಣ ನೆರವೇರಿಸಿದರು. ಕುಂದಾಪುರದ ಎಲ್ಲಾ ಹತ್ತು ಹಂಚು ಕಾರ್ಖಾನೆಗಳಲ್ಲಿ ಕೆಲಸಕ್ಕೂ ಮುನ್ನ ಕಾರ್ಖಾನೆ ಎದುರುಗಡೆ ಧ್ವಜಾರೋಹಣ ಮಾಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಘೋಷಣೆ ಮೊಳಗಿಸಿದರು. ಸಿಐಟಿಯು ಮುಖಂಡ ಎಚ್ ನರಸಿಂಹ, ಮಹಾಬಲ ವಡೇರಹೋಬಳಿ, ಬಲ್ಕೀಸ್, ರಾಜು ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು. ಬೈಂದೂರು ಸಿಐಟಿಯು ಕಚೇರಿಯಲ್ಲಿ ಸಿಐಟಿಯು ಧ್ವಜಾರೋಹಣ ಶ್ರೀಧರ ಉಪ್ಪುಂದ ನೆರವೇರಿಸಿದರು. ಸಿಐಟಿಯು ಸಂಚಾಲಕ ರೊನಾಲ್ಡ್ ರಾಜೇಶ್ ಕ್ವಾಡ್ರಸ್ ಹಾಜರಿದ್ದರು.