ಕೊಂಡಾಡಿ-ಕೊಟ್ನಕಟ್ಟೆಯಲ್ಲಿ ಅ. 21ರಂದು ‘ಶ್ರೀ ರಾಮ್ ಟೈಗರ್ಸ್’ ರೀಲ್ಸ್ ಸ್ಪರ್ಧೆ: ರೀಲ್ಸ್ ಮಾಡಿ ಗೆಲ್ಲಬಹುದು ನಗದು ಬಹುಮಾನ!

ಹಿರಿಯಡ್ಕ: ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಶ್ರೀ ರಾಮ್ ಟೈಗರ್ಸ್ ಕೊಣ್ದಾಡಿ-ಕೊಟ್ನಕಟ್ಟೆ ವತಿಯಿಂದ, ಶ್ರೀ ಕಾಳಿಕಾಂಬಾ ಈವೆಂಟ್ ಡೆಕೋರೇಷನ್ ಸಹಯೋಗದಲ್ಲಿ ಅಕ್ಟೋಬರ್ 21ರಂದು ರೀಲ್ಸ್ ಸ್ಪರ್ಧೆ ಆಯೋಜಿಸಲಾಗಿದೆ.ಸ್ಪರ್ಧೆಯಲ್ಲಿ ಭಾಗವಹಿಸುವವರು ಗರಿಷ್ಠ 90 ಸೆಕೆಂಡುಗಳ ರೀಲ್ಸ್ ವಿಡಿಯೊ ತಯಾರಿಸಬೇಕು. ಮೊಬೈಲ್ ಫೋನ್ ಅಥವಾ ವೃತ್ತಿಪರ ಕ್ಯಾಮೆರಾ ಬಳಸಿ ವಿಡಿಯೊ ಚಿತ್ರೀಕರಿಸಬಹುದು. ಸ್ಪರ್ಧಿಗಳು ತಮ್ಮ ರೀಲ್ಸ್ ಅನ್ನು @s.r.t_kondaadi_kotnakatte ಇನ್ಸ್ಟಾಗ್ರಾಂ ಖಾತೆಯೊಂದಿಗೆ ಕೊಲ್ಯಾಬ್ ಮಾಡುವುದು ಹಾಗೂ ಆ ಖಾತೆಯನ್ನು ಫಾಲೋ ಮಾಡುವುದು ಕಡ್ಡಾಯವಾಗಿದೆ. ಪ್ರತಿ ಸ್ಪರ್ಧಿಗೆ ಒಂದು ರೀಲ್ಸ್ […]

ಕುಂದಾಪುರ: ಕಾರು- ಸ್ಕೂಟರ್ ನಡುವೆ ಅಪಘಾತ; ಸವಾರ ಮೃತ್ಯು

ಕುಂದಾಪುರ: ಕಾರು ಮತ್ತು ದ್ವಿಚಕ್ರ ವಾಹನ ಮುಖಾಮುಖಿ ಢಿಕ್ಕಿಯಾಗಿ ಸ್ಕೂಟರ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮುಳ್ಳಿಕಟ್ಟೆ ಸಮೀಪದ ಅರಾಟೆ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ಸಂಭವಿಸಿದೆ. ಕುಂದಾಪುರ ನಗರದ ಭಂಡಾರ್‌ಕಾರ್ಸ್ ರಸ್ತೆ ನಿವಾಸಿ ಅಜಿತ್ ಪೌಲ್ ಲೂಯಿಸ್ (55) ಮೃತ ವ್ಯಕ್ತಿ. ಗಂಭೀರ ಗಾಯಗೊಂಡಿದ್ದ ಅವರನ್ನು ಎಂ.ಎಚ್.ಐ ತುರ್ತು ಆಪತ್ಪಾಂಧವ ಆಂಬುಲೆನ್ಸ್‌ ಚಾಲಕ ಇಬ್ರಾಹಿಂ ಗಂಗೊಳ್ಳಿ ಹಾಗೂ ಅಬ್ರಾರ್ ಗಂಗೊಳ್ಳಿಯವರು ಕುಂದಾಪುರದ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಅಜಿತ್ ಅವರು ಮೃತಪಟ್ಟಿದ್ದಾಗಿ ವೈದ್ಯರು […]

ವೈದ್ಯಕೀಯ ವೃತ್ತಿ ಮಾನವೀಯ ಸೇವೆಯ ಮಹತ್ತರ ಹೊಣೆಗಾರಿಕೆ: ಡಾ. ಶಾಂತರಾಮ ಶೆಟ್ಟಿ

ಮೂಡುಬಿದಿರೆ: ವೈದ್ಯಕೀಯ ವೃತ್ತಿ ಕೇವಲ ಉದ್ಯೋಗವಲ್ಲ. ಅದು ಮಾನವ ಜೀವವನ್ನು ಉಳಿಸುವ ಮಹತ್ತರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ರೋಗಿಗಳ ಬಗ್ಗೆ ಕರುಣೆ, ಸಹಾನುಭೂತಿ ಹಾಗೂ ಸೇವಾ ಮನೋಭಾವ ಬೆಳೆಸಿಕೊಂಡು, ಶಿಸ್ತು ಮತ್ತು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಪ್ರೊ. ಡಾ. ಎಂ. ಶಾಂತರಾಮ ಶೆಟ್ಟಿ ಹೇಳಿದರು. ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆ್ಯಂಡ್ ರಿಸರ್ಚ್ ಸೆಂಟರ್, ಡಾ ವಿಎಸ್ ಆಚರ‍್ಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ, ‘ಆಳ್ವಾಸ್ ಆರೋಹಣ 2026’ ಪ್ರಥಮ ಬ್ಯಾಚಿನ […]

ಎನ್‌ಡಿಎ ಪರೀಕ್ಷೆಯಲ್ಲಿ ಆಳ್ವಾಸ್‌ನ 10 ವಿದ್ಯಾರ್ಥಿಗಳು ಉತ್ತೀರ್ಣ

ಮೂಡುಬಿದಿರೆ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಮತ್ತು ನೌಕಾ ಅಕಾಡೆಮಿ (ಎನ್‌ಎ) ಪ್ರವೇಶ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ 10 ವಿದ್ಯಾರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಾದ ಪ್ರಣವ್ ಜಜ್ಜು, ವಿನಯ್ ಟಿ., ಓಂಕಾರ್ ರಾಜೇಶ್, ಅದ್ವೈತ್ ವಿಕ್ರಾಂತ್ ಶಿಂಧೆ, ವಿವೇಕ್ ಎ., ಅಮೋಘ್ ಎನ್. ಬಿ., ಎಂ. ಯೂಸುಫ್ ಎನ್. ಎಸ್., ಸಾಯೀಶ್ ಪಿ. ಟಿ., ಪ್ರಹ್ಲಾದ್ ಡಿ. ಡಿ. ಹಾಗೂ ಸಂಹಿತ್ ವಿ. ಆರ್. ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಎನ್‌ಡಿಎ […]

ಉಡುಪಿ: ಮಾನಸಿಕ ಅಸ್ವಸ್ಥ ನಾಪತ್ತೆ

ಉಡುಪಿ: ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಕುಂಜಿಬೆಟ್ಟು ಜನತಾಕಾಲನಿ ನಿವಾಸಿಯಾದ ಆರ್. ರಾಜು (68) ಎಂಬ ವ್ಯಕ್ತಿಯು ಮಾನಸಿಕ ಅಸ್ವಸ್ಥರಾಗಿದ್ದು, ಪತ್ನಿಯ ಮರಣ ನಂತರ ಸರಿಯಾಗಿ ಮನೆಗೆ ಬಾರದೆ ಸಂಬoಧಿಕರ ಮನೆಯಲ್ಲಿ ಉಳಿದುಕೊಂಡು 2-3 ತಿಂಗಳಿಗೊಮ್ಮೆ ಮನೆಗೆ ಬಂದು ಹೋಗುತ್ತಿದ್ದು, ಸುಮಾರು ಒಂದೂವರೆ ವರ್ಷಗಳಿಂದ ಮನೆಗೂ ಬಾರದೇ ಸಂಬಧಿಕರ ಮನೆಗೂ ಹೋಗದೇ ನಾಪತ್ತೆಯಾಗಿರುತ್ತಾರೆ. 5 ಅಡಿ 3 ಇಂಚು ಎತ್ತರ, ಸಾಧಾರಣ ಮೈಕಟ್ಟು, ಉದ್ದಮುಖ ಹೊಂದಿರುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಣಿಪಾಲ ಪೊಲೀಸ್ ಠಾಣೆಯ ಪಿ.ಎಸ್.ಐ […]