ದೇಶದ ಏಕತೆ, ಭದ್ರತೆ ಹಾಗೂ ಸಮಗ್ರತೆ ಯನ್ನುಳಿಸಲು ಕೋಟ ಗೆಲುವಿಗೆ ಕಟಿಬದ್ದರಾಗಿ: ಯಶ್ಪಾಲ್ ಸುವರ್ಣ ಕರೆ

ಉಡುಪಿ: ಈ ಬಾರಿಯ ಲೋಕಸಭಾ ಚುನಾವಣೆ ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸಲಿದ್ದು ದೇಶವನ್ನು ಸಮೃದ್ಧ, ವಿಕಸಿತ ಹಾಗೂ  ವಿಶ್ವಗುರುವಾಗಿಸಲಿದೆ. ಪ್ರಜ್ಞಾವಂತ ಮತದಾರರು ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿಯಾಗಿಸಿ ದೇಶದ ಏಕತೆ, ಭದ್ರತೆ ಮತ್ತು ಸಮಗ್ರತೆಗೆ ಒತ್ತು ನೀಡುವ ವಿಶ್ವಾಸವಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದರು. ಪಂದುಬೆಟ್ಟು ಪರಿಸರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದೇಶ ಮೊದಲು ಎಂಬ ಉದಾತ್ತ ಚಿಂತನೆಯ ಜತೆಗೆ ಜನಪರ ಯೋಜನೆಗಳ ಜಾರಿ ಮೂಲಕ ಭಾರತವನ್ನು ಪ್ರಧಾನಿ ಮೋದಿ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಮೋದಿ […]

ಮಲ್ಪೆ ಬೀಚ್ ನಲ್ಲಿ ಮುಳುಗಿದ ಪ್ರವಾಸಿಗರು: ಓರ್ವ ಸಾವು, ಇಬ್ಬರ ರಕ್ಷಣೆ

ಉಡುಪಿ: ಮಲ್ಪೆ ಬೀಚ್‌ನಲ್ಲಿ ಅಲೆಗಳ ಸೆಳೆತಕ್ಕೆ ಸಿಲುಕಿದ್ದ ಮೂವರು ಪ್ರವಾಸಿಗರ ಪೈಕಿ ಇಬ್ಬರನ್ನು ರಕ್ಷಣೆ ಮಾಡಲಾಗಿದ್ದು ಓರ್ವ ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆಯ ದಾಬೆ ಬೇಲೂರು ನಿವಾಸಿ ಗಿರೀಶ್ ಮೃತ ವ್ಯಕ್ತಿ. ಹಾಸನ ಜಿಲ್ಲೆಯಿಂದ ಪ್ರವಾಸಕ್ಕೆ ಬಂದಿದ್ದ 20 ಜನರ ತಂಡ ಮಲ್ಪೆ ಬೀಚ್‌ನಲ್ಲಿ ಈಜಾಡುವಾಗ ಮೂವರು ಅಲೆಗಳ ಸೆಳೆತಕ್ಕೆ ಸಿಲುಕಿದ್ದರು. ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದ ರಕ್ಷಣಾ ಸಿಬ್ಬಂದಿ ಮೂವರನ್ನು ದಡಕ್ಕೆ ಎಳೆದು ತಂದಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಗಿರೀಶ್ ಆಸ್ಪತ್ರೆಗೆ ಸಾಗಿಸುವ […]

ಅಂಬಾಗಿಲು ನ್ಯಾಚುರಲ್ ಗ್ರಾನೈಟ್ ಎಂಡ್ ಟೈಲ್ಸ್ ಶೋರೂಂ ದಶಮಾನೋತ್ಸವ

ಉಡುಪಿ: ಅಂಬಾಗಿಲಿನಲ್ಲಿರುವ ನ್ಯಾಚುರಲ್ ಗ್ರಾನೈಟ್ ಎಂಡ್ ಟೈಲ್ಸ್ ಶೋರೂಂನ ದಶಮಾನೋತ್ಸವ ಕಾರ್ಯಕ್ರಮ ಬುಧವಾರ ನಡೆಯಿತು. ಮಾಂಡವಿ ರಿಯಲ್ ಎಸ್ಟೇಟ್ ಎಂಡ್ ಡೆವೆಲಪರ್ಸ್ ನ ಎಂಡಿ, ಡಾ.ಜೆರಿ ವಿನ್ಸೆಂಟ್ ಡಯಾಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಮನೆ ಕಟ್ಟುವವರು ಇತರರ ಮನೆಗಳಿಗಿಂತ ತಮ್ಮ ಮನೆ ಭಿನ್ನವಾಗಿರಬೇಕೆಂದು ಯೋಚಿಸುತ್ತಾರೆ. ಅದಕ್ಕೆ ಪೂರಕವಾಗಿ ಗುಣಮಟ್ಟದ ಕಟ್ಟಡ ನಿರ್ಮಾಣ ಸಾಮಾಗ್ರಿ ಒಂದೇ ಸೂರಿನಡಿ ದೊರೆಯುವ ಶೋರೂಂ ಆಯ್ಕೆ ಮಾಡುತ್ತಾರೆ. ಎಲ್ಲ ಬಗೆಯ ಸಾಮಾಗ್ರಿಗಳ ವಿತರಣೆಯೊಂದಿಗೆ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾದ ಈ ಮಳಿಗೆಯು ಅಭಿವೃದ್ದಿ […]

ಮಲ್ಪೆ: ಏ.24 ರಂದು ಉಡುಪಿಗೆ ಯೋಗಿ ಆದಿತ್ಯನಾಥ್

ಮಲ್ಪೆ: ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ(Kota Shrinivas Poojari) ಪರವಾಗಿ ಹಿಂದುತ್ವದ ಬೆಂಕಿ ಚೆಂಡು ಎಂದೇ ಪ್ರಖ್ಯಾತರಾದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಏ.24 ರಂದು ಸಂಜೆ 4 ಗಂಟೆಗೆ ಮಲ್ಪೆ ಸೀವಾಕ್ ಬಳಿ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ. ಇದಕ್ಕೂ ಮುನ್ನ ತಮಿಳುನಾಡು ಬಿಜೆಪಿ ಮುಖಂಡ ಅಣ್ಣಾಮಲೈ ಏ. 22ರಂದು ಉಡುಪಿ ಹಾಗೂ ಮಂಗಳೂರಿನಲ್ಲಿ ಪ್ರಚಾರ ನಡೆಸಲಿದ್ದಾರೆ. ಎಂದರು.

ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ನಾಳೆ ಅಷ್ಟಪವಿತ್ರ ನಾಗಮಂಡಲೋತ್ಸವ.

ಬ್ರಹ್ಮಾವರ: ಶ್ರೀ ಕ್ಷೇತ್ರ ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಪಂಚಮೀಕಾನು ನಾಗ ಸನ್ನಿಧಿಯಲ್ಲಿ ಎ.18 ಗುರುವಾರ ಅಷ್ಟಪವಿತ್ರ ನಾಗಮಂಡಲೋತ್ಸವ ನಡೆಯಲಿದೆ. ನಾಳೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು: ಸಂಜೆ 6-15ರಿಂದ: ಪುಣ್ಯಾಹ ಸರ್ಪಸೂಕ್ತ ಹೋಮ, ಪುರುಷಸೂಕ್ತ ಹೋಮ, ಪಾರಾಯಣ. ಬೆಳಿಗ್ಗೆ 7-30ರಿಂದ: ಕಲಶಾಭಿಷೇಕ ಪ್ರಾರಂಭ. ಬೆಳಿಗ್ಗೆ 9-00ರಿಂದ: ಬ್ರಹ್ಮಕಲಶಾಭಿಷೇಕ ಪೂಜೆ, ದಾನಾದಿಗಳು, ದಶದಾನ, ವಟುಆರಾಧನೆ, ಬ್ರಾಹ್ಮಣ ಆರಾಧನೆ, ಕನ್ನಿಕಾ ಪೂಜೆ, ಸುವಾಸಿನಿ ಪೂಜೆ, ದಂಪತಿ ಪೂಜೆ, ಆಚಾರ್ಯ ಪೂಜೆ, ಮಹಾಪೂಜಾ, ಸಂದರ್ಶನ, ಫಲ್ಲಪೂಜೆ ಹಾಗೂ ಮಧ್ಯಾಹ್ನ 12.30ಕ್ಕೆ […]