ಪೆರ್ಡೂರು ಬಂಟರ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

ಉಡುಪಿ: ಪೆರ್ಡೂರು ಬಂಟರ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ವಾರ್ಷಿಕ ಸಾಮಾನ್ಯ ಸಭೆಯು ಸೆ.22ರಂದು ಮಂಗಳವಾರ ಬೆಳಗ್ಗೆ 11 ಗಂಟೆಗೆ ಪೆರ್ಡೂರಿನ ಬಂಟರ ಸಮುದಾಯ ಭವನದಲ್ಲಿ ನಡೆಯಿತು. ಸಹಕಾರಿ ಸಂಘದ ಅಧ್ಯಕ್ಷರಾದ ಶಾಂತಾರಾಮ ಸೂಡ ಕೆ. ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ಸಂಘದ ನಿರ್ದೇಶಕರಾದ ರಾಜ್ ಕುಮಾರ್ ಶೆಟ್ಟಿಯವರು ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧೀರಜ್ ಶೆಟ್ಟಿ ಅವರು ಸಂಘದ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಸಭೆಯಲ್ಲಿ ಮಂಡಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷರಾದ ಶಾಂತಾರಾಮ ಸೂಡ […]
ಬ್ಯೂಟಿ & ವೆಲ್ನೆಸ್ ಕ್ಷೇತ್ರದಲ್ಲಿ ಬದುಕು ರೂಪಿಸಿಕೊಳ್ಳಲು ಇಲ್ಲಿದೆ ಚಾನ್ಸ್! ಮಣಿಪಾಲ MSDC- Orane International ವತಿಯಿಂದ ಲಭ್ಯವಿದೆ ಈ ಕೋರ್ಸ್ ಗಳು!

ಮಣಿಪಾಲ: ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ಹಾಗೂ Orane International ವತಿಯಿಂದ ಬ್ಯೂಟಿ ಮತ್ತು ವೆಲ್ನೆಸ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಆಸಕ್ತರಿಗೆ ವಿವಿಧ ಕೋರ್ಸ್ಗಳನ್ನು ಪರಿಚಯಿಸಲಾಗಿದೆ. ಡಿಪ್ಲೊಮಾ ಇನ್ ನೇಲ್ ಟೆಕ್ನಿಷಿಯನ್ ಕಾರ್ಯಕ್ರಮಕ್ಕೆ ದಾಖಲಾತಿ ನಡೆಯುತ್ತಿದ್ದು, ಇದರೊಂದಿಗೆ ಮ್ಯಾನಿಕ್ಯೂರ್ ಮತ್ತು ಪೆಡಿಕ್ಯೂರ್ನಲ್ಲಿ ಉಚಿತ ಪ್ರಮಾಣಪತ್ರ ಕೋರ್ಸ್ ಪಡೆಯುವ ಅವಕಾಶವಿದೆ. ಇದರ ಜೊತೆಗೆ ಕಾಸ್ಮೆಟಾಲಜಿ ಕೋರ್ಸ್ಗಳ ಶುಲ್ಕದಲ್ಲಿ ಶೇ.25ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಈ ಆಫರ್ ಸೆಪ್ಟೆಂಬರ್ 30ರವರೆಗೆ ಅನ್ವಯವಾಗಲಿದೆ. ಆಸಕ್ತರು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ವಾಕ್ಇನ್ […]
ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಅಮಾನವೀಯ ಕೊಲೆ: ಪತ್ನಿ, ಪುತ್ರ ನಾಪತ್ತೆ; ತಡವಾಗಿ ಬೆಳಕಿಗೆ ಬಂದ ಪ್ರಕರಣ

ಉಡುಪಿ: ಉಡುಪಿ ಮೂಲದ ವ್ಯಕ್ತಿಯೊಬ್ಬರನ್ನು ಶಾರ್ಜಾದಲ್ಲಿ ಅಮಾನವೀಯವಾಗಿ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಉಡುಪಿ ಮೂಲದ ಪ್ರಕಾಶ್ ಕುಂದರ್ ಹತ್ಯೆಯಾದ ವ್ಯಕ್ತಿಯಾಗಿದ್ದು, ಕಳೆದ ಜುಲೈ ತಿಂಗಳಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.ಪ್ರಕಾಶ್ ಅವರು ಪತ್ನಿ ಟೀನಾ ಹಾಗೂ ಅಪ್ರಾಪ್ತ ಪುತ್ರನೊಂದಿಗೆ ಶಾರ್ಜಾದಲ್ಲಿ ನೆಲೆಸಿದ್ದರು. ಶಾರ್ಜಾ ಏರ್ಪೋರ್ಟ್ನಲ್ಲಿ ಕೆಲಸ ಮಾಡುತ್ತಿದ್ದ ಅವರು, ಜುಲೈ 20ರ ಸುಮಾರಿಗೆ ಸಹೋದರ ಪ್ರಶಾಂತ್ ಕುಂದರ್ ಅವರನ್ನು ಸಂಪರ್ಕಿಸಲು ಯತ್ನಿಸಿದ್ದರು. ಸಾಮಾನ್ಯವಾಗಿ ವಾಯ್ಸ್ ಮೆಸೇಜ್ ಮೂಲಕ ಪ್ರತಿಕ್ರಿಯಿಸುತ್ತಿದ್ದ ಪ್ರಕಾಶ್, ಈ ಬಾರಿ […]
ಅ.04:ಏಂಜೆಲ್ ಝುಂಬಾ ಫಿಟ್ನೆಸ್ ವತಿಯಿಂದ ಪವರ್ ಜಾಮ್ ಝುಂಬಾ ಮಾಸ್ಟರ್ ಕ್ಲಾಸ್

ಉಡುಪಿ: ಏಂಜೆಲ್ ಝುಂಬಾ ಮತ್ತು ಫಿಟ್ನೆಸ್ ಸ್ಟುಡಿಯೋ ವತಿಯಿಂದ “ಪವರ್ ಜಾಮ್ ಝುಂಬಾ ಮಾಸ್ಟರ್ ಕ್ಲಾಸ್ ” 04TH,ಅಕ್ಟೋಬರ್ 2026ರಂದು ಸಂಜೆ 06:00 – 08;30 ವರೆಗೆ ಮಣಿಪಾಲದ ಸಿಟಿ ಅರೇನಾ ದಲ್ಲಿ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ಝುಂಬಾ ಮಾಸ್ಟರ್ ಕ್ಲಾಸ್ zin ವಿಲ್ಮಾ ಬ್ರಿಟ್ಟೋ ಗೋವಾ ,Zin ಕರಿಷ್ಮಾ ಪುಣೆ ಇವರು ವಿಶೇಷ ಅತಿಥಿಯಾಗಿ ಕ್ಲಾಸ್ ನಡೆಸಿಕೊಡಲಿದ್ದಾರೆ. ಫಿಟ್ನೆಸ್ ಹಾಗೂ ನೃತ್ಯ ಪ್ರಿಯರಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಎಲ್ಲರೂ ಭಾಗವಹಿಸಲು ಆಹ್ವಾನಿಸಲಾಗಿದೆ. ಝುಂಬಾ ಮಾಸ್ಟರ್ ಕ್ಲಾಸ್ ಪ್ರವೇಶ […]
ನೂತನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ) : ವಾರ್ಷಿಕ ಮಹಾಸಭೆ

ಉಡುಪಿ : ನೂತನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ) ,2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ 19-09-2026 ರಂದು ಶ್ರೀಮತಿ. ಸುಮಿತ್ರ .ಆರ್ ಇವರ ಸಭಾಧ್ಯಕ್ಷತೆಯಲ್ಲಿ ಪುರಭವನದ ಮಿನಿಹಾಲ್ ನಲ್ಲಿ ಜರಗಿತು.2025-26ನೇ ಸಾಲಿನಲ್ಲಿ ಸಂಘವು 125 ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು, ವರದಿ ವರ್ಷಾಂತ್ಯಕ್ಕೆ 56 ಲಕ್ಷ ಪಾಲು ಬಂಡವಾಳ, ೩೪ ಕೋಟಿ 79ಲಕ್ಷ ಠೇವಣಿಯೊಂದಿಗೆ 26 ಕೋಟಿ 88ಲಕ್ಷ ಹೊರಬಾಕಿ ಸಾಲ ಇರುತ್ತದೆ. ವರ್ಷಾಂತ್ಯಕ್ಕೆ 48,39,072.೦8 ಲಾಭ ಹೊಂದಿದ್ದು, ಸದಸ್ಯರಿಗೆ 13% ಪಾಲು ಮುನಾಫೆ ಘೋಷಣೆ […]