ಹಬ್ಬದ ಸಂಭ್ರಮಕ್ಕೆ ಸಿಹಿಯ ಸಾಥ್ ಇದ್ದರೆ ಅದರ ಖುಷಿಯೇ ಬೇರೆ. ಅದರಲ್ಲೂ ಶುದ್ಧ ತುಪ್ಪದ ಘಮ, ಡ್ರೈಫ್ರೂಟ್ಸ್ನ ಸಮೃದ್ಧ ರುಚಿ ಬೆರೆತ ಸಿಹಿತಿಂಡಿಗಳ ಸವಿಯಂತೂ ಮರೆಯಲಾಗದು. ಇಂತಹ ಬಾಯಲ್ಲಿ ನೀರೂರಿಸುವ ಬಗೆಬಗೆಯ ಸಿಹಿತಿಂಡಿಗಳ ವಿಶೇಷ ಸಂಗ್ರಹ ಬ್ರಹ್ಮಾವರದ ಲಕ್ಷ್ಮೀ ವೆಂಕಟೇಶ್ವರ ಸ್ವೀಟ್ಸ್, ಕೇಕ್ಸ್ ಮತ್ತು ಬೇಕರಿಯಲ್ಲಿ ಈ ದೀಪಾವಳಿಗಾಗಿ ಸಿದ್ಧವಾಗಿದೆ.
ಸಿಹಿಪ್ರಿಯರಿಗಾಗಿ ರುಚಿಯ ಲೋಕ!
ಸಾಂಪ್ರದಾಯಿಕ ಸಿಹಿತಿಂಡಿಗಳಿಂದ ಹಿಡಿದು ಆಕರ್ಷಕ ವಿನ್ಯಾಸದ ವಿಶೇಷ ಸಿಹಿ ತಿನಿಸುಗಳವರೆಗೆ ಇಲ್ಲಿ ವೈವಿಧ್ಯಮಯ ಆಯ್ಕೆಗಳಿವೆ. ಶುದ್ಧ ತುಪ್ಪ ಹಾಗೂ ಗುಣಮಟ್ಟದ ಡ್ರೈಫ್ರೂಟ್ಸ್ ಬಳಸಿ ತಯಾರಿಸಿದ ಸಿಹಿತಿಂಡಿಗಳು ತಮ್ಮ ವಿಶಿಷ್ಟ ರುಚಿ ಮತ್ತು ಪರಿಮಳದಿಂದ ಗ್ರಾಹಕರನ್ನು ಆಕರ್ಷಿಸುತ್ತವೆ.
ದೀಪಾವಳಿಯ ಸಂಭ್ರಮದಲ್ಲಿ ಸಿಹಿ ಹಂಚುವ ಸಂಪ್ರದಾಯಕ್ಕೆ ಮತ್ತಷ್ಟು ಮೆರುಗು ನೀಡಲು ನಿಮ್ಮ ನೆಚ್ಚಿನ ಸಿಹಿತಿಂಡಿಗಳನ್ನು ಇಲ್ಲಿಂದ ಆಯ್ಕೆ ಮಾಡಿಕೊಳ್ಳಬಹುದು. ಕುಟುಂಬದವರೊಂದಿಗೆ ಸವಿಯಲು, ಸ್ನೇಹಿತರು ಹಾಗೂ ಬಂಧುಗಳಿಗೆ ಉಡುಗೊರೆಯಾಗಿ ನೀಡಲು ಇಲ್ಲಿ ಬಗೆಬಗೆಯ ಸಿಹಿತಿಂಡಿಗಳು ಲಭ್ಯ.
ಈ ದೀಪಾವಳಿಯ ಬೆಳಕಿನೊಂದಿಗೆ ಸಿಹಿಯ ಸಂಭ್ರಮವನ್ನೂ ಮನೆಮಾಡಿಸಿಕೊಳ್ಳಿ. ರುಚಿ ಮತ್ತು ಗುಣಮಟ್ಟದ ಸಿಹಿತಿಂಡಿಗಳಿಗಾಗಿ ಇಂದೇ ಬ್ರಹ್ಮಾವರದ ಲಕ್ಷ್ಮೀ ವೆಂಕಟೇಶ್ವರ ಸ್ವೀಟ್ಸ್ಗೆ ಭೇಟಿ ನೀಡಿ. ಸಂಪರ್ಕಿಸಿ: 9900002961, 9900002962, 7259357053















