ಶಿರ್ವ, ಅ. 31: ಕುತ್ಯಾರು ಪಾದೂರು -ಕಳತ್ತೂರು ಗ್ರಾಮಾಧಿಪತಿ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧ್ವಜಸ್ತಂಭ ನಿರ್ಮಾಣಕ್ಕೆ ನೂತನ ಸಾಗುವಾನಿ ಧ್ವಜಮರ (ಕೊಡಿಮರ) ಸಮರ್ಪಣೆ ಕಾರ್ಯ ಕ್ರಮವು ಅ. 30ರಂದು ನಡೆಯಿತು.
ಕಾರ್ಕಳ ತಾಲೂಕಿನ ಮಿಯ್ಯಾರಿನಿಂದ ತಂದ ಸುಮಾರು 48 ಅಡಿ ಉದ್ದದ ಮರವನ್ನು ಕಳತ್ತೂರು ಶಾಂತಿಗುಡ್ಡೆ ಸರ್ಕಲ್ನಿಂದ ಕಳತ್ತೂರು ದೇವಸ್ಥಾನದವರೆಗೆ ಚೆಂಡೆ, ವಾದ್ಯಘೋಷ ಮತ್ತು ಕುಣಿತ ಭಜನೆಯೊಂದಿಗೆ ಮೆರವಣಿಗೆಯಲ್ಲಿ ತಂದು ಸಮರ್ಪಿಸಲಾಯಿತು.
ಮೆರವಣಿಗೆಗೆ ದೇವಸ್ಥಾನ ಹಾಗೂ ಎಲ್ಲೂರು ಸೀಮೆಯ ಪ್ರಧಾನ ತಂತ್ರಿಗಳಾದ ವೇ.ಮೂ. ಕುತ್ಯಾರು ಕೇಂಜ ಶ್ರೀಧರ ತಂತ್ರಿ ಪ್ರಾರ್ಥನೆ ಸಲ್ಲಿಸಿ ಕಾಯಿ ಒಡೆಯುವುದರ ಮೂಲಕ ಚಾಲನೆ ನೀಡಿದರು.
ಮಂಗಳೂರಿನ ಶ್ರೀ ಗಣೇಶ್ ಶಿಪ್ಪಿಂಗ್ ಕಂಪೆನಿಯ ಟ್ರಕ್ನಲ್ಲಿಟ್ಟು ಧ್ವಜಮರವನ್ನು ಪುಷ್ಪಾಲಂಕಾರಗೊಳಿಸಲಾಗಿತ್ತು. ನೂತನ ಧ್ವಜಮರದೊಂದಿಗೆ ಅದಕ್ಕೆ ತಾಮ್ರದ ಕವಚ, ಶಿಲಾಮಯ ಧ್ವಜಸ್ತಂಭ ಕಟ್ಟೆರಚಿಸಿ ಧ್ವಜಸ್ತಂಭ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ನಡೆಸಲು ಸಂಕಲ್ಪಿಸಲಾಗಿದೆ.
ಕಾವು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ದೇಗುಲದ ಅರ್ಚಕ ವೇ.ಮೂ. ಕೇಶವ ತಂತ್ರಿ ಕಳತ್ತೂರು, ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಂಗನಾಥ ಭಟ್ ಕುತ್ಯಾರು,ಸದಸ್ಯರಾದ ಶ್ರೀಕಾಂತ ತಂತ್ರಿ ಕಳತ್ತೂರು, ಜಯಕೃಷ್ಣ ಆಳ್ವ ಪಾದೂರು, ರಾಜೇಶ್ ಕುಲಾಲ್ ಬೊಬ್ಬೆಟ್ಟು, ದಿವಾಕರ ಡಿ. ಶೆಟ್ಟಿ ಕಳತ್ತೂರು, ಗಣೇಶ್ ನಾಯ್ಕ,ದಿವಾಕರ ಬಿ. ಶೆಟ್ಟಿ ಕಳತ್ತೂರು, ಮಮತಾ ಆಚಾರ್ಯ, ಕುತ್ಯಾರು,ಮಮತಾ ತಂತ್ರಿ ಪಾದೂರು ಕಳತ್ತೂರು ನಡಿಗುತ್ತು ಗಣೇಶ್ ಎಸ್ ಶೆಟ್ಟಿ ಮುಂಬೈ,ಕಳತ್ತೂರು ಬರೆಬೆಟ್ಟು ಗುತ್ತು ರವೀಂದ್ರ ಶೆಟ್ಟಿ ಮುಂಬೈ,ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಅರುಣ್ ಶೆಟ್ಟಿ ಕಳತ್ತೂರು,ದೇವಾಲಯದ ಪ್ರಬoಧಕ ಕೃಷ್ಣ ಮೂರ್ತಿ ಭಟ್,ಪ್ರಮುಖರಾದ ಕುತ್ಯಾರು ಜಿನೇಶ್ ಬಲ್ಲಾಳ್ ಸತೀಶ್ ಶೆಟ್ಟಿ ಗುರ್ಮೆ ಪಯ್ಯಾರು ಶಿವರಾಮ ಶೆಟ್ಟಿ ಕಳತ್ತೂರು,ರಂಗನಾಥ ಶೆಟ್ಟಿ ಗಣೇಶ್ ಶೆಟ್ಟಿ ಪಯ್ಯಾರು , ಜಗದೀಶ್ ಅರಸ ಬಂಟರಸಂಘದ ಅಧ್ಯಕ್ಷ ಕುತ್ಯಾರು ಸಾಯಿನಾಥ ಶೆಟ್ಟಿ ಶಿರ್ವ ಸಿಎ ಬ್ಯಾಂಕಿನ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ ಉಪಾಧ್ಯಕ್ಷ ವೀರೇಂದ್ರ ಪಾಟ್ಕರ್ ಕೊಲ್ಲ ಬೆಟ್ಟು, ರಾಜೇಶ್ ಶೆಟ್ಟಿ, ಶಬರಿ, ಪ್ರದೀಪ್ ಶೆಟ್ಟಿ, ನವೀನ್ ಶೆಟ್ಟಿ,ವಸಂತ ಶೆಟ್ಟಿ ಪ್ರಭಾಕರ ಶೆಟ್ಟಿ ಸಹನಾ ತಂತ್ರಿ ರಾಘವೇಂದ್ರ ಭಟ್, ಜನಾರ್ಧನ ಆಚಾರ್ಯ, ಸ್ಥಳವಂದಿಗರು ಸಿಬ್ಬಂದಿ ಭಜನ ಮಂಡಳಿಯ ಸದಸ್ಯರು, ಮಹಿಳಾ ಸ್ವಸಹಾಯ ಸಂಘದ ಸದಸ್ಯರು,ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.















