ಶಾಲಾ ಕಾಲೇಜುಗಳಲ್ಲಿ ಯಕ್ಷಗಾನ ಕಲಿಕೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಕಲೆಯ ಉಳಿವು ಸಾಧ್ಯ: ಡಾ.ಶಿವರಾಮ್ ಶೆಟ್ಟಿ ತಲ್ಲೂರು

ಮಂಗಳೂರು: ಯಕ್ಷಗಾನ ಕಲೆಯಲ್ಲಿ ಅದ್ಭುತ ಶಕ್ತಿಯಿದೆ. ಯಕ್ಷಗಾನ ಕಲಿಯುವ ಮಕ್ಕಳು ಗುರುಹಿರಿಯರಿಗೆ ಗೌರವ ಕೊಡುತ್ತಾರೆ. ನವರಸಗಳನ್ನು ಮೇಳೈಸಿರುವ ಈ ಕಲೆಯನ್ನು ಶಾಲಾ ಕಾಲೇಜುಗಳಲ್ಲಿ ಕಲಿಸುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಭವಿಷ್ಯದಲ್ಲಿ ಯಕ್ಷಗಾನ ಕಲೆಯ ಉಳಿವು ಬೆಳವಣಿಗೆಗೂ ಸಾಕಾರವಾಗುತ್ತದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಭಾನುವಾರ ಮಂಗಳೂರಿನ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೃಷ್ಣಾಪುರ -ಕಾಟಿಪಳ್ಳ, ಯುವಕ ಮಂಡಲ ಕೃಷ್ಣಾಪುರ ಕೇಂದ್ರ […]

ಶ್ರೀ ಶಾರದ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್: ಡಿಪ್ಲೊಮಾ ಇನ್ ಮಾಂಟೆಸ್ಸರಿ ಚೆಲ್ಡ್ ಎಜ್ಯುಕೇಶನ್ ತರಬೇತಿಯ ಪ್ರಮಾಣ ಪತ್ರ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ

ಮಣಿಪಾಲ: ಮಣಿಪಾಲ ಶ್ರೀ ಶಾರದ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಮಾಂಟೆಸ್ಸರಿ/ನರ್ಸರಿ ಟೀಚರ್ ಟ್ರೈನಿಂಗ್ (ಆ.ಒಇಜ) ಶಿಕ್ಷಕಿಯರಿಗೆ 2022-23 ಸಾಲಿನ ವಿದ್ಯಾರ್ಥಿ ಶಿಕ್ಷಕಿಯರಿಗೆ ಡಿಪ್ಲೊಮಾ ಪ್ರಮಾಣ ಪತ್ರ ವಿತರಣೆ ಮತ್ತು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ ಶಿಕ್ಷಕಿಯರಿಗೆ ಪುರಸ್ಕಾರ ಸಮಾರಂಭವು ಕ್ರಿಸ್ಟಲ್ ಬಿಜ್ಹ್ ಹಬ್‍ನಲ್ಲಿ, ಶ್ರೀಮತಿ ಚಂದ್ರಕಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.  ಮುಖ್ಯ ಅತಿಥಿಗಳಾಗಿ ಅಜ್ಜರ್‍ಕಾಡು ಇಶ್ನಾ ಪ್ಲೇ ಸ್ಕೂಲ್’ನ ಸಹ-ಸ್ಥಾಪಕರಾದ ಶ್ರೀಮತಿ ಶಿಲ್ಪಾ ಆರ್. ಶೆಟ್ಟಿ ಮಾತನಾಡಿ, ಶಿಕ್ಷಕಿಯರು ತಾಳ್ಮೆಯು ಶಿಕ್ಷಕಿಯರಿಗೆ ಇರಲೇ ಬೇಕಾದ ಅನಿವಾರ್ಯ ಗುಣ. […]

ಹಿರಿಯಡಕ: ಕಾಜಾರಗುತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿ ಉದ್ಘಾಟನೆ

ಹಿರಿಯಡಕ: ಕಾಜಾರಗುತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದರ ನೂತನ ಕೊಠಡಿಯ ಉದ್ಘಾಟನೆಯನ್ನು ಇಂದು(ಸೆ.11) ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು. ಶಾಸಕರು ಮಾತನಾಡಿ ಇಂದಿನ ದಿನಗಳಲ್ಲಿ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಮುಚ್ಚುವ ಸ್ಥಿತಿಗೆ ತಲುಪಿದೆ. ಇಂತಹ ಸಂದರ್ಭದಲ್ಲಿ ಕಾಜಾರಗುತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 200 ಕ್ಕೂ ಅಧಿಕ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವುದು ಶ್ಲಾಘನೀಯ ಇಂತಹ ಶಾಲೆಗಳ ಅಭಿವೃದ್ಧಿಗೆ ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದು ಹೇಳಿದರು ಹಾಗೂ ಶಾಲೆಗೆ ಬೇಕಾದ ಸಂಪೂರ್ಣ […]

ವ್ಯಾಪಾರ ಮತ್ತು ಭದ್ರತಾ ಸಂಬಂಧಗಳನ್ನು ವಿಸ್ತರಿಸಲು ಭಾರತ ಮತ್ತು ಸೌದಿ ಅರೇಬಿಯಾ ಒಪ್ಪಿಗೆ

ನವದೆಹಲಿ: ಭಾರತ ಮತ್ತು ಸೌದಿ ಅರೇಬಿಯಾ ಸೋಮವಾರ ವ್ಯಾಪಾರ ಮತ್ತು ಭದ್ರತಾ ಸಂಬಂಧಗಳನ್ನು ವಿಸ್ತರಿಸಲು ಒಪ್ಪಿಕೊಂಡಿವೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ನವದೆಹಲಿಯಲ್ಲಿ ಭೇಟಿಯಾಗಿದ್ದಾರೆ ಮತ್ತು ಭಾರತ-ಸೌದಿ ಅರೇಬಿಯಾ ಸ್ಟ್ರಾಟೆಜಿಕ್ ಪಾಲುದಾರಿಕೆ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿದ್ದಾರೆ. ಇಂಧನ ಭದ್ರತೆ, ವ್ಯಾಪಾರ, ರಕ್ಷಣೆಯಲ್ಲಿ ಹೂಡಿಕೆ, ಆರೋಗ್ಯ ರಕ್ಷಣೆ ಮತ್ತು ಆಹಾರ ಭದ್ರತೆಯವರೆಗಿನ ವಿಷಯಗಳ ಕುರಿತು ಉಭಯ ನಾಯಕರು ಚರ್ಚಿಸಿದರು ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ […]

ಡಾ. ಟಿಎಂಎ ಪೈ ಆಸ್ಪತ್ರೆಯಲ್ಲಿ ಖ್ಯಾತ ಹೃದ್ರೋಗ ತಜ್ಞ ಡಾ. ಪದ್ಮನಾಭ್ ಕಾಮತ್ ಸಮಾಲೋಚನೆಗೆ ಲಭ್ಯ

ಉಡುಪಿ:ಕೆಎಂಸಿ ಮಂಗಳೂರಿನ ಹೆಸರಾಂತ ಹೃದ್ರೋಗ ತಜ್ಞ ಡಾ. ಪದ್ಮನಾಭ್ ಕಾಮತ್ ಅವರು ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯಲ್ಲಿ ಬುಧವಾರ,  ಸೆಪ್ಟೆಂಬರ್ 20 ರಿಂದ ವಿಶೇಷ ಹೃದ್ರೋಗ ಸಮಾಲೋಚನೆಗಳನ್ನು ಒದಗಿಸಲಿದ್ದಾರೆ. ಅವರು ಪ್ರತಿ ತಿಂಗಳ ಮೂರನೇ ಬುಧವಾರದಂದು ಬೆಳಿಗ್ಗೆ 9.30 ರಿಂದ 12.30 ರವರೆಗೆ ಸಮಾಲೋಚನೆಗೆ ಲಭ್ಯವಿರುತ್ತಾರೆ. ಈ ವ್ಯವಸ್ಥೆಯು ಉಡುಪಿಯ ಸಮುದಾಯಕ್ಕೆ ಡಾ. ಕಾಮತ್ ಅವರ ತಜ್ಞ ಹೃದ್ರೋಗ ಆರೈಕೆಯನ್ನು ಪಡೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಹೃದಯ ಹಾಗೂ ರಕ್ತನಾಳದ ಆರೋಗ್ಯದ ಪ್ರಾಮುಖ್ಯತೆಯನ್ನು ಗುರುತಿಸುವುದು: ಹೃದಯ ಹಾಗೂ […]