ರೆಡ್‌ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ ಗಣನಾಥ ಎಕ್ಕಾರು ನೇಮಕ

ಉಡುಪಿ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಘಟಕದ ನೂತನ ಗೌರವ ಕಾರ್ಯದರ್ಶಿಯಾಗಿ ಡಾ. ಗಣನಾಥ ಎಕ್ಕಾರು ಅವರನ್ನು ನೇಮಿಸಲಾಗಿದ್ದು, ಜಿಲ್ಲಾ ವಿಕಲ ಚೇತನರ ಪುನರ್ವಸತಿ ಕೇಂದ್ರದ ಸದಸ್ಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ ಎಂದು ರೆಡ್‌ಕ್ರಾಸ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ನಟ ರವಿಶಂಕರ್ ಅವರಿಂದ ಶ್ರೀಕೃಷ್ಣ ಮಠ ಭೇಟಿ

ಉಡುಪಿ: ಬಹುಭಾಷಾ ನಟ ರವಿಶಂಕರ್ ಶ್ರೀಕೃಷ್ಣ ಮಠಕ್ಕಾಗಮಿಸಿ ದೇವರ ದರ್ಶನ ಪಡೆದುಕೊಂಡರು. ಬಳಿಕ ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು. ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಉಪಸ್ಥಿತರಿದ್ದರು.

ಉಡುಪಿ: “ಕಲರ್ಸ್ ಅಫ್‌ ಶ್ರೀ ಕೃಷ್ಣ ಲೀಲೋತ್ಸವ” ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ

ಉಡುಪಿ: ಸೌತ್‌ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್‌ ಉಡುಪಿ ವಲಯ, ನಿಕ್ಕಾನ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಮತ್ತು ಪ್ರವಾಸೋಧ್ಯಮ ಇಲಾಖೆ ಉಡುಪಿ ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರಾಜ್ಯ ಮಟ್ಟದ “ಕಲರ್ಸ್ ಅಫ್‌ ಶ್ರೀ ಕೃಷ್ಣ ಲೀಲೋತ್ಸವ” ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಿದೆ. ವಿಜೇತರಿಗೆ ಪ್ರಥಮ 10,000.00, ದ್ವಿತೀಯ 5,000.00, ತ್ರಿತೀಯ 3,000.00 ಹಾಗು 5 ಸಮಾಧಾನಕರ ಬಹುಮಾನಗಳು, ಆಕರ್ಷಕ ಸ್ಮರಣಿಕೆ, ವಿಶೇಷ ಉಡುಗೊರೆಗಳು ಇರಲಿದೆ. ​ಸ್ಪರ್ಧೆಯ ನಿಯಮಗಳು: ಪ್ರತಿ ಸ್ಪರ್ಧಿಯು ಗರಿಷ್ಠ ನಾಲ್ಕು ಛಾಯಾಚಿತ್ರಗಳನ್ನು​ ಕಳುಹಿಸಬಹುದು.​ […]

ಸುಶಾಂತ್ ಕೆರಮಠ ಇವರಿಗೆ ಉಪರಾಷ್ಟ್ರಪತಿಯಿಂದ ಪ್ರಶಸ್ತಿ ಪತ್ರದ ಮಾನ್ಯತೆ

ಉಡುಪಿ: ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಇದರ ಕಡಿಯಾಳಿ ವಲಯದ ರೋವರ್ ಘಟಕದ ಸಕ್ರಿಯ ಸದಸ್ಯ ಸುಶಾಂತ್ ಕೆರೆಮಠ ಇವರು ಸಮುದಾಯ ಸೇವೆ, ಸ್ವಚ್ಚತೆ ಹಾಗು‌ ಪರಿಸರ ಸಂಬಂಧಿತ ಸೇವೆಯಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು,  ಉಪರಾಷ್ಟ್ರಪತಿ ಯವರಿಂದ ಪ್ರಶಸ್ತಿ ಪತ್ರದ ಮಾನ್ಯತೆ ಪಡೆದಿರುತ್ತಾರೆ. ರಾಜ್ಯ ಸಂಘಟನಾ ಸಹಾಯಕ ಕಮಿಷನರ್ ನಿತಿನ್ ಅಮೀನ್ ಗರಡಿಯಲ್ಲಿ ಪಳಗಿದ ಇವರು ಮೂಡುಬೆಟ್ಟು ಕೆರಮಠ ಸುಮನ ಹಾಗು ಶ್ರೀನಾಥ ದಂಪತಿಗಳ ಪುತ್ರ.

ಮಲ್ಪೆ: ಕರ್ತವ್ಯಕ್ಕೆ ತೆರಳಿದ್ದ ವೇಳೆ ಬೋಟ್ ನಿಂದ ಕಾಲು ಜಾರಿ ಬಿದ್ದು ಮೀನುಗಾರ ಮೃತ್ಯು

ಮಲ್ಪೆ: ಮೀನುಗಾರಿಕೆ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಬೋಟಿನಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ವರದಿಯಾಗಿದೆ. ಜಾರ್ಖಂಡ್ ಮೂಲದ ಮನೋಜ್ ಸನ್(32) ಮೃತ ಪಟ್ತ ವ್ಯಕ್ತಿ. ಆ.31 ರ ರಾತ್ರಿ ಮೀನುಗಾರರೊಂದಿಗೆ ಮಲ್ಪೆ ಬಂದರಿನಿಂದ ಸುಮಾರು ಎರಡು ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸಲು ತೆರಳಿದ್ದರು. ದುರದೃಷ್ಟವಶಾತ್ ಕಾಲು ಜಾರಿ ಸಮುದ್ರಕ್ಕೆ ಬಿದ್ದ ಮನೋಜ್ ಸನ್ ಅವರನ್ನು ಸಹಚರ ಕೀರ್ತನ್ ಎಂಬವರು ಮೇಲಕ್ಕೆತ್ತಿ ಉಪಚಾರ ನೀಡಿದ್ದಾರೆ. ಆದರೂ ಮನೋಜ್ ಸನ್ ಸ್ವಸ್ಥರಾಗದ್ದನ್ನು ಕಂಡು ಮಣಿಪಾಲದ […]