ಅಂಬಾಗಿಲು ನ್ಯಾಚುರಲ್ ಗ್ರಾನೈಟ್ ಎಂಡ್ ಟೈಲ್ಸ್ ಶೋರೂಂ ದಶಮಾನೋತ್ಸವ

ಉಡುಪಿ: ಅಂಬಾಗಿಲಿನಲ್ಲಿರುವ ನ್ಯಾಚುರಲ್ ಗ್ರಾನೈಟ್ ಎಂಡ್ ಟೈಲ್ಸ್ ಶೋರೂಂನ ದಶಮಾನೋತ್ಸವ ಕಾರ್ಯಕ್ರಮ ಬುಧವಾರ ನಡೆಯಿತು. ಮಾಂಡವಿ ರಿಯಲ್ ಎಸ್ಟೇಟ್ ಎಂಡ್ ಡೆವೆಲಪರ್ಸ್ ನ ಎಂಡಿ, ಡಾ.ಜೆರಿ ವಿನ್ಸೆಂಟ್ ಡಯಾಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಮನೆ ಕಟ್ಟುವವರು ಇತರರ ಮನೆಗಳಿಗಿಂತ ತಮ್ಮ ಮನೆ ಭಿನ್ನವಾಗಿರಬೇಕೆಂದು ಯೋಚಿಸುತ್ತಾರೆ. ಅದಕ್ಕೆ ಪೂರಕವಾಗಿ ಗುಣಮಟ್ಟದ ಕಟ್ಟಡ ನಿರ್ಮಾಣ ಸಾಮಾಗ್ರಿ ಒಂದೇ ಸೂರಿನಡಿ ದೊರೆಯುವ ಶೋರೂಂ ಆಯ್ಕೆ ಮಾಡುತ್ತಾರೆ. ಎಲ್ಲ ಬಗೆಯ ಸಾಮಾಗ್ರಿಗಳ ವಿತರಣೆಯೊಂದಿಗೆ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾದ ಈ ಮಳಿಗೆಯು ಅಭಿವೃದ್ದಿ […]

ಮಲ್ಪೆ: ಏ.24 ರಂದು ಉಡುಪಿಗೆ ಯೋಗಿ ಆದಿತ್ಯನಾಥ್

ಮಲ್ಪೆ: ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ(Kota Shrinivas Poojari) ಪರವಾಗಿ ಹಿಂದುತ್ವದ ಬೆಂಕಿ ಚೆಂಡು ಎಂದೇ ಪ್ರಖ್ಯಾತರಾದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಏ.24 ರಂದು ಸಂಜೆ 4 ಗಂಟೆಗೆ ಮಲ್ಪೆ ಸೀವಾಕ್ ಬಳಿ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ. ಇದಕ್ಕೂ ಮುನ್ನ ತಮಿಳುನಾಡು ಬಿಜೆಪಿ ಮುಖಂಡ ಅಣ್ಣಾಮಲೈ ಏ. 22ರಂದು ಉಡುಪಿ ಹಾಗೂ ಮಂಗಳೂರಿನಲ್ಲಿ ಪ್ರಚಾರ ನಡೆಸಲಿದ್ದಾರೆ. ಎಂದರು.

ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ನಾಳೆ ಅಷ್ಟಪವಿತ್ರ ನಾಗಮಂಡಲೋತ್ಸವ.

ಬ್ರಹ್ಮಾವರ: ಶ್ರೀ ಕ್ಷೇತ್ರ ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಪಂಚಮೀಕಾನು ನಾಗ ಸನ್ನಿಧಿಯಲ್ಲಿ ಎ.18 ಗುರುವಾರ ಅಷ್ಟಪವಿತ್ರ ನಾಗಮಂಡಲೋತ್ಸವ ನಡೆಯಲಿದೆ. ನಾಳೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು: ಸಂಜೆ 6-15ರಿಂದ: ಪುಣ್ಯಾಹ ಸರ್ಪಸೂಕ್ತ ಹೋಮ, ಪುರುಷಸೂಕ್ತ ಹೋಮ, ಪಾರಾಯಣ. ಬೆಳಿಗ್ಗೆ 7-30ರಿಂದ: ಕಲಶಾಭಿಷೇಕ ಪ್ರಾರಂಭ. ಬೆಳಿಗ್ಗೆ 9-00ರಿಂದ: ಬ್ರಹ್ಮಕಲಶಾಭಿಷೇಕ ಪೂಜೆ, ದಾನಾದಿಗಳು, ದಶದಾನ, ವಟುಆರಾಧನೆ, ಬ್ರಾಹ್ಮಣ ಆರಾಧನೆ, ಕನ್ನಿಕಾ ಪೂಜೆ, ಸುವಾಸಿನಿ ಪೂಜೆ, ದಂಪತಿ ಪೂಜೆ, ಆಚಾರ್ಯ ಪೂಜೆ, ಮಹಾಪೂಜಾ, ಸಂದರ್ಶನ, ಫಲ್ಲಪೂಜೆ ಹಾಗೂ ಮಧ್ಯಾಹ್ನ 12.30ಕ್ಕೆ […]

ರಂಗೇರಿದ ಚುನಾವಣಾ ಕಣ: ಹಿಂದುತ್ವದ ಭದ್ರಕೋಟೆ ಉಡುಪಿಗೆ ಯೋಗಿ ಆದಿತ್ಯನಾಥ್, ಅಣ್ಣಾಮಲೈ ಆಗಮನ

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರ ಪರ ಪ್ರಚಾರಕ್ಕೆ ರಾಜ್ಯ ಮತ್ತು ರಾಷ್ಟ್ರ ನಾಯಕರ ದಂಡು ಉಡುಪಿಗೆ ಆಗಮಿಸಲಿದೆ ಎನ್ನಲಾಗಿದೆ. ಎ. 19ರಂದು ಉಪ್ಪೂರಿಗೆ ಕೇಂದ್ರ ಸಚಿವೆ ಮೀನಾಕ್ಷಿ ಲೇಖೀ ಹಾಗೂ ಸಂಸದೆ ಸುಮಲತಾ, ಎ. 20ರಂದು ಉಡುಪಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಎ. 21ರಂದು ಕಾಪುವಿಗೆ ಸಂಸದ ಪ್ರತಾಪ್‌ ಸಿಂಹ, ಎ. 22ರಂದು ಹಿರಿಯಡಕಕ್ಕೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಹಾಗೂ ಎ. 24ರಂದು […]

ಬ್ರಹ್ಮಾವರ: ಮತದಾನದ ಕರ್ತವ್ಯ ಪೂರೈಸಿ ಇಹಲೋಕ ತ್ಯಜಿಸಿದ ಹಿರಿ ಜೀವ

ಬ್ರಹ್ಮಾವರ: ವಯೋವೃದ್ದರಾಗಿದ್ದ ಹಿರಿ ಜೀವವೊಂದು ಮತದಾನ ಮಾಡಿದ ಕೆಲವೇ ಕ್ಷಣದಲ್ಲಿ ಸಾವನಪ್ಪಿದ ಘಟನೆ ಬ್ರಹ್ಮಾವರ ತಾಲೂಕಿನ ಸಾಸ್ತಾನ ಪಾಂಡೇಶ್ವರ ಚಡಗರ ಅಗ್ರಹಾರದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಪಿ.ಯಶೋಧಾ ನಾರಾಯಣ ಉಪಾಧ್ಯ (83) ಎಂದು ಗುರುತಿಸಲಾಗಿದೆ. ಚುನಾವಣಾ ಆಯೋಗವು ದಿವ್ಯಾಂಗ ಹಾಗೂ ಹಿರಿಯ ನಾಗರಿಕರಿಗೆ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದು ಅದಾಗಲೇ ಜಿಲ್ಲೆಯಲ್ಲಿ ಇದಕ್ಕೆ ಚಾಲನೆ ನೀಡಲಾಗಿದೆ. ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ದಿ.ನಾರಾಯಣ ಉಪಾಧ್ಯ ಅವರ ಪತ್ನಿ ಪಿ.ಯಶೋಧಾ ಕೂಡಾ ಈ ಸೌಲಭ್ಯ ಬಳಸಿ ಮನೆಯಲ್ಲೆ ಮತದಾನ […]