ಕಾರಿನಲ್ಲಿ ಕರೆತಂದು ತಾಯಿಯನ್ನು ರಸ್ತೆಯಲ್ಲೇ ಬಿಟ್ಟು ತೆರಳಿದ ಮಗ

ಉಡುಪಿ: ಹೆತ್ತ ತಾಯಿಯನ್ನು ಮಗ ಕಾರಿನಲ್ಲಿ ಕರೆತಂದು ರಸ್ತೆಯಲ್ಲೇ ಬಿಟ್ಟು ತೆರಳಿದ ಅಮಾನವೀಯ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.ಬ್ರಹ್ಮಾವರದ ಎಸ್.ಎಂ.ಎಸ್. ಆಂಗ್ಲ ಮಾಧ್ಯಮ ಶಾಲೆಯ ಬಳಿ 70 ವರ್ಷದ ವೃದ್ಧೆಯೊಬ್ಬರು ದಿಕ್ಕು ತೋಚದೆ ಚಡಪಡಿಸುತ್ತಿರುವುದನ್ನು ಶಾಲಾ ಬಸ್ ಚಾಲಕ ರಾಮನಾಥ್ ಶೆಣೈ ಗಮನಿಸಿದರು. ಬಳಿಕ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದರು.ತಕ್ಷಣ ಸ್ಥಳಕ್ಕೆ ಸ್ಪಂದಿಸಿದ ನಿತ್ಯಾನಂದ ಒಳಕಾಡು ಅವರು 112 ತುರ್ತು ಪೊಲೀಸ್ ಸಹಾಯವಾಣಿ ಸಿಬ್ಬಂದಿಯ ನೆರವಿನಿಂದ ವೃದ್ಧೆಯನ್ನು ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ದಾಖಲು ಪ್ರಕ್ರಿಯೆ […]
ಅಭಿಮಾನಿಗಳ ಸರದಾರ ನಂದಳಿಕೆ “ಪಾಂಡು” ಕೋಣ ನಿಧನ.

ಉಡುಪಿ: ಕಂಬಳ ಕ್ಷೇತ್ರದ ದಂತಕತೆ, ಅಪಾರ ಅಭಿಮಾನಿಗಳ ಸರದಾರ, ಮಿಂಚಿನ ಓಟದೊಂದಿಗೆ ಕಂಬಳದಲ್ಲಿ ಪ್ರದರ್ಶನ ನೀಡುತ್ತಿದ್ದ ನಂದಳಿಕೆ “ಪಾಂಡು” ಕಂಬಳದ ಕೋಣ ಅನಾರೋಗ್ಯದಿಂದ ಇಂದು (ಸೆ.28) ಮುಂಜಾನೆ ನಿಧನ ಹೊಂದಿದೆ. ನಂದಳಿಕೆ ಶ್ರೀಕಾಂತ್ ಭಟ್ ಅವರ ಮನೆಯ ಹಿರಿಯ ಸದಸ್ಯನಾಗಿದ್ದ ಪಾಂಡು, 8 ವರ್ಷ ಚಾಂಪಿಯನ್, 150ಕ್ಕೂ ಹೆಚ್ಚು ಪದಕಗಳನ್ನು ತಂದುಕೊಟ್ಟು, ಅದ್ಭುತ ಪ್ರದರ್ಶನದ ಮುಖೇನ ತನ್ನ ಮಾಲಕರಿಗೂ ಹೆಮ್ಮೆ ತಂದಿತ್ತು. ಪಾಂಡು ಕಂಬಳ ಕ್ಷೇತ್ರಕ್ಕೆ ಹಲವು ವರ್ಷಗಳ ಹಿಂದೆ ನಿವೃತ್ತಿ ಪಡೆದಿದ್ದನು. ಇದೀಗ ಪಾಂಡು ನಿಧನಕ್ಕೆ […]
ಸುಂದರ ನಾಳೆಗಳಿಗೆ ಹಸಿರಿನ ಉಸಿರು ನೀಡುವ ಉಡುಪಿಯ ಟೀಮ್ ಯುವ ಓಜಸ್

ಉಡುಪಿ: ಇಂದು ನೆಟ್ಟ ಸಸಿ ನಾಳೆ ನೆರಳು.. ಒಂದು ಸಸಿಯನ್ನು ನೆಡುವುದೆಂದರೆ ಮಣ್ಣಿನಲ್ಲಿ ಕೇವಲ ಒಂದು ಗಿಡ ನೆಡುವುದಲ್ಲ, ಸುಂದರ ನಾಳೆಗಳಿಗೆ ಭರವಸೆಗಳನ್ನು ಬಿತ್ತುವುದು. ಅಂತಹ ಭರವಸೆಯನ್ನು ಬಿತ್ತುವ ಕೆಲಸವನ್ನು ಮಾಡುತ್ತಿದೆ ಉಡುಪಿಯ ಟೀಮ್ ಯುವ ಓಜಸ್ ಹೌದು ಹಸಿರ ಕನಸುಗಳನ್ನು ಕಾಣುವ ಟೀಮ್ ಯುವ ಓಜಸ್, ಸುತ್ತಲೂ ಹಸಿರು ಮೂಡಿಸಲು ಶ್ರಮಿಸುತ್ತಿದೆ. ಹಸಿರೇ ಇಂದು, ನಾಳೆಗಳಿಗೆ ಉಸಿರು ನೀಡುತ್ತದೆ ಎನ್ನುವ ಅರಿವನ್ನು ಮೂಡಿಸುತ್ತಿದೆ. ಗಿಡ ನೆಡುವುದು ಕೇವಲ ಒಂದು ದಿನದ ಕಾರ್ಯಕ್ರಮವಾಗಬಾರದು; ಅದನ್ನು ಬೆಳೆಸುವುದು ನಮ್ಮ […]
ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್, ಮುಲ್ಕಿ ವತಿಯಿಂದ ಇಂಜಿನಿಯರ್ಸ್ ಡೇ ಆಚರಣೆ

ಮುಲ್ಕಿ, ಸೆಪ್ಟೆಂಬರ್ 27, 2026: ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್, ಮುಲ್ಕಿ (ACEM) ವತಿಯಿಂದ ಇಂಜಿನಿಯರ್ಸ್ ಡೇ 2026 ಕಾರ್ಯಕ್ರಮವನ್ನು ಸೆಪ್ಟೆಂಬರ್ 30, 2026ರ ಬುಧವಾರ ಸಂಜೆ 6:30 ಗಂಟೆಗೆ, ಮುಲ್ಕಿ ಸುಂದರ ರಾಮ ಶೆಟ್ಟಿ ಕನ್ವೆನ್ಶನ್ ಸೆಂಟರ್, ಕೊಳ್ನಾಡ್, ಮುಲ್ಕಿ ಇಲ್ಲಿ ಆಯೋಜಿಸಲಾಗಿದೆ. ಇಂಜಿನಿಯರ್ಸ್ ಡೇ ಅಂಗವಾಗಿ ನಡೆಯುವ ಈ ಕಾರ್ಯಕ್ರಮವು ದೇಶದ ಮೂಲಸೌಕರ್ಯ, ತಂತ್ರಜ್ಞಾನ ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ಇಂಜಿನಿಯರ್ಗಳು ನೀಡುತ್ತಿರುವ ಅಮೂಲ್ಯ ಕೊಡುಗೆಯನ್ನು ಸ್ಮರಿಸುವ ಹಾಗೂ ಗೌರವಿಸುವ ಉದ್ದೇಶವನ್ನು ಹೊಂದಿದೆ. ಕಾರ್ಯಕ್ರಮದ ಮುಖ್ಯ […]
ಉಡುಪಿ: ಅಂಬಲಪಾಡಿ ಮನೆ ಕಳ್ಳತನ ಪ್ರಕರಣ- ಉತ್ತರ ಪ್ರದೇಶದ ಬೆಡಿಯಾ ಗ್ಯಾಂಗ್ನ ಇಬ್ಬರು ಆರೋಪಿಗಳ ಬಂಧನ, 4,50,500ರೂ. ಮೌಲ್ಯದ ಸೊತ್ತುಗಳ ವಶ

ಉಡುಪಿ: ಅಂಬಲಪಾಡಿಯ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ಬೆಡಿಯಾ ಗ್ಯಾಂಗ್ನ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಪೊಲೀಸರು ಬಂಧಿಸಿ, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಉತ್ತರ ಪ್ರದೇಶ ರಾಜ್ಯ ಸಂಭಾಲ್ ಜಿಲ್ಲೆಯ ಮೊಹಮ್ಮದ್ ಜಾಫರ್(22) ಹಾಗೂ ಕದೀರ್(32) ಬಂಧಿತ ಆರೋಪಿಗಳು. ಜು.1ರಿಂದ ಜು.9ರ ಮಧ್ಯಾವಧಿಯಲ್ಲಿ ಎ.ಎಸ್.ರಾಮಮೂರ್ತಿ ಎಂಬವರ ಅಂಬಲಪಾಡಿಯ ಕುಂಜುಗುಡ್ಡೆ ರಸ್ತೆಯ ಸಹಾರಾ ಅಪಾರ್ಟ್ ಮೆಂಟ್ ಬಳಿ ಇರುವ ಮನೆಗೆ ನುಗ್ಗಿದ ಕಳ್ಳರು, 6 ಲಕ್ಷ ರೂ. ನಗದು ಹಾಗೂ 10ಸಾವಿರ ರೂ. ಮೌಲ್ಯದ 3 ವಾಚ್ಗಳನ್ನು […]