ಎಸ್‌ಐಆರ್ ವಿವಾದ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ, ಬಂಧನಕ್ಕೆ ಕಾಂಗ್ರೆಸ್ ಆಗ್ರಹ

ಉಡುಪಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಗೆ ಸಂಬಂಧಿಸಿದಂತೆ ತೀವ್ರ ವಿವಾದಕ್ಕೆ ಕಾರಣರಾದ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ಹಾಗೂ ಬಂಧನಕ್ಕೆ ಆಗ್ರಹಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಸೋಮವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಕಾರರು ಜ್ಞಾನೇಶ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರತಿಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು […]

ಕಂಬಳ ಅಂಗಳದ ಲೆಜೆಂಡ್ ನಂದಳಿಕೆ ಪಾಂಡು ಇನ್ನಿಲ್ಲ

ಉಡುಪಿ: ಕಂಬಳ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿ, ಅಪಾರ ಅಭಿಮಾನಿ ಬಳಗ ಹೊಂದಿದ್ದ ‘ನಂದಳಿಕೆ ಪಾಂಡು’ (23) ಹೆಸರಿನ ಕೋಣ ವಯೋಸಹಜ ಅನಾರೋಗ್ಯದಿಂದ ಸೋಮವಾರ ಮುಂಜಾನೆ ಮೃತಪಟ್ಟಿದೆ. ಹಗ್ಗ ವಿಭಾಗದಲ್ಲಿ ವೇಗದ ಓಟಕ್ಕೆ ಹೆಸರಾಗಿದ್ದ ಪಾಂಡು ಕಂಬಳದ ಅಂಗಳದಲ್ಲಿ ಹಲವು ಸಾಧನೆಗಳನ್ನು ಮಾಡಿತ್ತು. ಜೂನಿಯರ್ ಹಗ್ಗ ವಿಭಾಗದಲ್ಲಿ ಸತತ ಎರಡು ವರ್ಷ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದ ಪಾಂಡು, ಬಳಿಕ ಸೀನಿಯರ್ ವಿಭಾಗದಲ್ಲೂ ತನ್ನ ಓಟದ ಮೂಲಕ ಕಂಬಳಾಭಿಮಾನಿಗಳ ಗಮನ ಸೆಳೆದಿತ್ತು. ಕಾರ್ಕಳದ ಜೀವನ್‌ದಾಸ್ ಅಡ್ಯಂತಾಯ ಅವರ […]

ಹದಗೆಟ್ಟ ರಸ್ತೆಯಿಂದ ಹೈರಾಣಾದ ಜನ; ತಕ್ಷಣ ದುರಸ್ತಿಗೆ ಆಗ್ರಹ

ಉಡುಪಿ: ಹನುಮಾನ್ ಗ್ಯಾರೇಜ್‌ಗೆ ತೆರಳುವ ರಸ್ತೆ ಹಾಗೂ ವಿಷನ್ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಹಲವು ತಿಂಗಳಿಂದ ಹದಗೆಟ್ಟಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಡ್ರೈನೇಜ್ ಕಾಮಗಾರಿ ಹೆಸರಿನಲ್ಲಿ ರಸ್ತೆಯನ್ನು ಅಗೆದು ಬಳಿಕ ಸಮರ್ಪಕವಾಗಿ ದುರಸ್ತಿ ಮಾಡದೆ ಬಿಟ್ಟಿರುವುದರಿಂದ ರಸ್ತೆ ಉದ್ದಕ್ಕೂ ಜಲ್ಲಿ, ಕಲ್ಲು ಹಾಗೂ ಮಣ್ಣು ಹರಡಿಕೊಂಡಿದೆ. ಬಸ್ ಮತ್ತು ಭಾರಿ ವಾಹನಗಳು ಸಂಚರಿಸುವ ಸಂದರ್ಭದಲ್ಲಿ ಅಪಾರ ಪ್ರಮಾಣದ ಧೂಳು ಮೇಲೇಳುತ್ತಿದ್ದು, ಸುತ್ತಮುತ್ತಲಿನ ನಿವಾಸಿಗಳು ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ರಸ್ತೆಯಲ್ಲಿರುವ ಜಲ್ಲಿಕಲ್ಲುಗಳಿಂದ […]

ರಾಷ್ಟ್ರಸುಧಾ ಮಾಧ್ಯಮ ಬಳಗದಲ್ಲಿ ಉದ್ಯೋಗಾವಕಾಶ; ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಉಡುಪಿ: ರಾಷ್ಟ್ರಸುಧಾ ಮಾಧ್ಯಮ ಬಳಗದಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವಿಡಿಯೋ ಎಡಿಟರ್, ಕ್ಯಾಮರಾಮನ್, ಕಾರ್ಯಕ್ರಮ/ಸುದ್ದಿ ವರದಿಗಾರರು, ಕಾರ್ಯಕ್ರಮ ನಿರೂಪಕರು, ಅಕೌಂಟೆಂಟ್/ರಿಸೆಪ್ಷನಿಸ್ಟ್, ಗ್ರಾಫಿಕ್ ಡಿಸೈನರ್ ಹಾಗೂ ವಾಣಿಜ್ಯ ಕಾರ್ಯನಿರ್ವಾಹಕ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಅ.3ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು [email protected] ಇ-ಮೇಲ್‌ಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ 09094 80707 ಸಂಪರ್ಕಿಸಬಹುದು. ನೇಮಕಾತಿಗೆ ಸಂಬಂಧಿಸಿದಂತೆ ಅ.5ರಂದು ಅಕೌಂಟೆಂಟ್, ರಿಸೆಪ್ಷನಿಸ್ಟ್ ಹಾಗೂ ಕ್ಯಾಮರಾಮನ್; ಅ.6ರಂದು ಎಡಿಟರ್ ಹಾಗೂ ಗ್ರಾಫಿಕ್ ಡಿಸೈನರ್; ಅ.7ರಂದು ಕಾರ್ಯಕ್ರಮ ನಿರೂಪಕರು […]

ಶ್ರೀ ಬ್ರಹ್ಮಲಿಂಗೇಶ್ವರ ಆದಿ ಆಲಡೆ ಪಾಂಗಾಳ ಮಂಡೇಡಿ ಇನ್ನಂಜೆ ಇದರ ಬ್ರಹ್ಮ ಕಲಶೋತ್ಸವ

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಕರ್ನಿರೆ ವಿಶ್ವನಾಥ್ ಶೆಟ್ಟಿ, ಕಾರ್ಯಾಧ್ಯಕ್ಷರಾಗಿ ರತ್ನಾಕರ್ ಶೆಟ್ಟಿ ವಸಾಯಿ, ಗೌರವದ್ಯಕ್ಸರಾಗಿ ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಆಯ್ಕೆ ಕಾಪು, ಸೆ.22- ಕಾಪು ಇನ್ನಂಜೆ ಗ್ರಾಮದ ಪಾಂಗಾಳ ಮಂಡೇಡಿ ಶ್ರೀ ಬ್ರಹ್ಮಲಿಂಗೇಶ್ವರ ಆದಿ ಆಲಡೆ ಬ್ರಹ್ಮಕಲಶೋತ್ಸವ ಹಾಗೂ ಸಾನಿಧ್ಯ ಜೀರ್ಣೋದ್ಧಾರ ನಿಮಿತ್ತ ಪಾಂಗಲಣ್ಣ ಬಂಟ ಕುಟುಂಬದವರೆಲ್ಲರೂ ಸೇರಿ ಸಂಕಲ್ಪಿಸಿರುವುದು, ಬ್ರಹ್ಮ ಕಲಶ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ, ಮುಂಬೈ ಬಂಟರ ಸಂಘದ ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ್ […]