ಕಡಿಯಾಳಿ ಗಣೇಶೋತ್ಸವದ ವಜ್ರಮಹೋತ್ಸವ ಯಶಸ್ಸು ಜನತೆಗೆ ಸಮರ್ಪಣೆ

ಉಡುಪಿ: ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಡಿಯಾಳಿ ವತಿಯಿಂದ ನಡೆದ 60ನೇ ವರ್ಷದ ವಜ್ರಮಹೋತ್ಸವದ ಯಶಸ್ಸಿನ ಶ್ರೇಯಸ್ಸು ಉಡುಪಿಯ ಜನತೆಗೆ ಸಲ್ಲುತ್ತದೆ ಎಂದು ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ಡಾ. ಕಟ್ಟೆ ರವಿರಾಜ ಆಚಾರ್ಯ ಹೇಳಿದರು. ಉಡುಪಿಯ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆದ 60ನೇ ವರ್ಷದ ಸಮಾಪನ ಸಭೆಯಲ್ಲಿ ಮಾತನಾಡಿದ ಅವರು, ಉಡುಪಿ ಜನತೆಯ ಸಹಕಾರ ಹಾಗೂ ಬೆಂಬಲದಿಂದ ವಜ್ರಮಹೋತ್ಸವದ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿವೆ. ಹೀಗಾಗಿ ಇದರ ಸಂಪೂರ್ಣ ಶ್ರೇಯಸ್ಸನ್ನು ಉಡುಪಿಯ ಜನತೆಗೆ ಸಮರ್ಪಿಸುವುದಾಗಿ ಹೇಳಿದರು. […]
ಅ.1 ರಿಂದ ಮಂಗಳೂರು ರೈಲ್ವೆ, ಮೈಸೂರು ವಿಭಾಗಕ್ಕೆ ಸೇರ್ಪಡೆ: ಅಂತೂ ದಶಕಗಳ ಕನಸು, ನನಸು

ಮಂಗಳೂರು: ಕರಾವಳಿ ಭಾಗದ ದಶಕಗಳ ಬೇಡಿಕೆಗೆ ಇದೀಗ ಮಹತ್ವದ ಬೆಳವಣಿಗೆ ಎದುರಾಗಿದೆ. ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲ್ವೆ ಪ್ರದೇಶವು ಅಕ್ಟೋಬರ್ 1ರಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯಾಪ್ತಿಗೆ ಬರಲಿದೆ. ರೈಲ್ವೆ ಮಂಡಳಿಯ ಆಗಸ್ಟ್ 21ರ ಅಧಿಸೂಚನೆಯಂತೆ ಈ ಆಡಳಿತಾತ್ಮಕ ಬದಲಾವಣೆ ಜಾರಿಗೆ ಬರಲಿದೆ. ಮಧ್ಯರಾತ್ರಿಯಿಂದ ಆಡಳಿತ ಹಸ್ತಾಂತರ ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 1ರ ಮಧ್ಯರಾತ್ರಿಯಿಂದ ಮಂಗಳೂರು ಪ್ರದೇಶದ ರೈಲ್ವೆ ಆಡಳಿತದ ನಿಯಂತ್ರಣ ಮೈಸೂರು ವಿಭಾಗಕ್ಕೆ ವರ್ಗಾವಣೆಯಾಗಲಿದೆ. ಬದಲಾವಣೆಯ ಸಂದರ್ಭದಲ್ಲಿ ರೈಲು […]
ಆಂತರಿಕ ಗುಣಮಟ್ಟ ಭರವಸೆ ಕೋಶದ (IQAC) ಸದಸ್ಯರಾಗಿ ಡಾ.ಮಿಥುನ್ ಯು ಆಯ್ಕೆ

ಉಡುಪಿ: ಮಂಗಳೂರಿನ ಪ್ರತಿಷ್ಠಿತ ಎ. ಜೆ. ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯ ಆಂತರಿಕ ಗುಣಮಟ್ಟ ಭರವಸೆ ಕೋಶದ (IQAC), ಶೈಕ್ಷಣಿಕ ಕ್ಷೇತ್ರದ ಸದಸ್ಯರಾಗಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಡೀನ್ ಅಕಾಡೆಮಿಕ್ಸ್ ಆಗಿರುವ ಡಾ.ಮಿಥುನ್ ಯು ರವರು ಆಯ್ಕೆಯಾಗಿರುತ್ತಾರೆ. ಇವರು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕನಾಗಿ, ವಿಭಾಗದ ಮುಖ್ಯಸ್ಥರಾಗಿ, ಪ್ರಸ್ತುತ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಡೀನ್ ಅಕಾಡೆಮಿಕ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು 2018ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಪ್ರೊ.ವಿಶಾಲಕ್ಷಿ […]
ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘ (ರಿ): 34ನೇ ವಾರ್ಷಿಕ ಮಹಾಸಭೆ; ಪಧಾಧಿಕಾರಿಗಳ ಆಯ್ಕೆ

ಉಡುಪಿ; ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘ (ರಿ), 34 ನೇ ವಾರ್ಷಿಕ ಮಹಾಸಭೆಯು ಅಧ್ಯಕ್ಷ ಮಟ್ಟಾರ್ ವಸಂತ ಕಿಣೆ ರವರ ಅಧ್ಯಕ್ಷತೆಯಲ್ಲಿ ಅಂಬಾಗಿಲಿನ ಅಮೃತ ಗಾರ್ಡನ್ ನಲ್ಲಿ ಜರಗಿತು. ಸಂಘದ ಮಾಜಿ ಅಧ್ಯಕ್ಷರಾದ ಹರೀಶ್ ಕುಂದರ್ ಸರ್ ಎಮ್ ವಿಶ್ವೇಶ್ವರಯ್ಯ ರವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಗೌರವ ಸಲ್ಲಿಸಿದರು ಸಂಘದ ಮಾಜಿ ಅಧ್ಯಕರುಗಳು ಪುಷ್ಪಾರ್ಚನೆ ಗೈದರು. 2026–27ನೇ ಸಾಲಿನ ಅಧ್ಯಕ್ಷರಾಗಿ ಹಿರಿಯಡ್ಕದ ಆನಂದ್ ಪಾಲಿಮರ್ಸ್ ನ ಮಟ್ಟಾರ್ ವಸಂತ ಕಿಣೆ ರವರು ಅವಿರೋಧವಾಗಿ ಪುನರಾಯ್ಕೆ ಯಾದರು. […]
ಉಡುಪಿ: ರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವಿಕೆ ಮಾಸಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮ

ಕುಂದಾಪುರ: ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್, ಕುಂದಾಪುರದ ಬಿ.ಎಸ್ಸಿ. ನರ್ಸಿಂಗ್ 6ನೇ ಸೆಮಿಸ್ಟರ್ ವಿದ್ಯಾರ್ಥಿಗಳ ವತಿಯಿಂದ ರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವಿಕೆ ಮಾಸಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮವನ್ನು ಸೆಪ್ಟೆಂಬರ್ 28ರಂದು ಬೆಳಿಗ್ಗೆ 10:30ರಿಂದ ಮಧ್ಯಾಹ್ನ 1:00ರವರೆಗೆ ಕಮಲಾ ಬಾಳಿಗ ಮೆಮೋರಿಯಲ್ ಹಾಲ್, ಎ.ವಿ. ಬಾಳಿಗ ಆಸ್ಪತ್ರೆ, ದೊಡ್ಡಣಗುಡ್ಡೆ ಉಡುಪಿ ಇಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದ ಉದ್ದೇಶ ಆತ್ಮಹತ್ಯೆ ತಡೆಗಟ್ಟುವಿಕೆಯ ಕುರಿತು ಜಾಗೃತಿ ಮೂಡಿಸುವುದು, ಮಾನಸಿಕ ಆರೋಗ್ಯದ ಮಹತ್ವವನ್ನು ತಿಳಿಸುವುದು ಹಾಗೂ ಭಾವನಾತ್ಮಕ ಸಂಕಷ್ಟದಲ್ಲಿರುವವರು ಸಮಯೋಚಿತವಾಗಿ ಸಹಾಯ ಮತ್ತು ಬೆಂಬಲವನ್ನು ಪಡೆಯುವಂತೆ […]