ಮಂಗಳೂರು: ಪಕ್ಷಿಕೆರೆ ಕೊಲೆ ಪ್ರಕರಣ: ಕಾರ್ತಿಕ್ ಭಟ್ ತಾಯಿ ಹಾಗೂ ಸಹೋದರಿ ಬಂಧನ
ಮಂಗಳೂರು: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಕ್ಷಿಕೆರೆಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾರ್ತಿಕ್ ಭಟ್ ತಾಯಿ ಹಾಗೂ ಅಕ್ಕನನ್ನು ಪೊಲೀಸರು ಬಂದಿಸಿದ್ದಾರೆ. ಶ್ಯಾಮಲಾ ಭಟ್(61) ಹಾಗೂ ಸುರತ್ಕಲ್ ಬಾಳ ನಿವಾಸಿ ಕಣ್ಮಣಿ ರಾವ್(36) ಬಂಧಿತರು. ಇಬ್ಬರ ವಿರುದ್ಧ ಕಾರ್ತಿಕ್ ಭಟ್ ಪತ್ನಿಯ ತಾಯಿ ಸಾವಿತ್ರಿ ನೀಡಿದ ದೂರಿನಂತೆ 308 ಭಾರತೀಯ ನ್ಯಾಯ ಸಂಹಿತೆ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಾಗಿದ್ದು ಇಬ್ಬರನ್ನು ಮುಲ್ಕಿ ಪೊಲೀಸರು ಬಂಧಿಸಿ ಮೂಡಬಿದ್ರೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಳೆದ ದಿನದ ಹಿಂದೆ ಪೊಲೀಸ್ ಠಾಣಾ […]
ಮಂಗಳೂರು: ಕಾರ್ಕಳ ಮೂಲದ ಮಹಿಳೆ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ.
ಮಂಗಳೂರು: ನಗರದ ಲೇಡಿಗೋಷನ್ ಹೆರಿಗೆ ಅಸ್ಪತ್ರೆಯ ನಾಲ್ಕನೇ ಮಹಡಿಯಿಂದ ಜಿಗಿದು ಬಾಣಂತಿಯೊಬ್ಬರು ಸೋಮವಾರ ಆತ್ಮಹತ್ಯೆಮಾಡಿಕೊಂಡಿದ್ದಾರೆ. ಮೃತರು ಉಡುಪಿ ಜಿಲ್ಲೆಯ ಕಾರ್ಕಳದ ರಂಜಿತಾ ಆಚಾರ್ಯ (28). ರಂಜಿತಾ ಅವರಿಗೆ ಅವಧಿ ಪೂರ್ವ ಪ್ರಸವವಾಗಿತ್ತು. ಅ.30ರಂದು ಸಿಸೇರಿಯನ್ ಮೂಲಕ ಹೆರಿಗೆ ನಡೆದಿತ್ತು. ಎನ್ ಐಸಿಯುವಿನಲ್ಲಿ ಅರೈಕೆಯಲ್ಲಿದ್ದ ಶಿಶು ನ.3ರಂದು ಮೃತಪಟ್ಟಿತ್ತು. ರಂಜಿತಾ ಅವರು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಬೇಕಿತ್ತು. ಅಷ್ಟರಲ್ಲಿ ಈ ಘಟನೆ ನಡೆದಿದೆ. ರಂಜಿತಾ ಅವರನ್ನು ಆಸ್ಪತ್ರೆಯಿಂದ ಕರೆದೊಯ್ಯಲು ಮನೆಯವರು ಕೂಡ ಲೇಡಿಗೋಷನ್ ಆಸ್ಪತ್ರೆಗೆ ಬಂದಿದ್ದರು. ಆದರೆ ರಂಜಿತಾ ಏಕಾಏಕಿ […]
ಉಡುಪಿ: ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘ; ಪ್ರಧಾನ ಕಾರ್ಯದರ್ಶಿಯಾಗಿ ಎಲಿಟಾ ರೋಸ್ ಸೈಮನ್ ಆಯ್ಕೆ
ಉಡುಪಿ: ಕುಂಜಿಬೆಟ್ಟು ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯದ 2024- 25ನೇ ಸಾಲಿನ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಎಲಿಟಾ ರೋಸ್ ಸೈಮನ್ ಅವರು ಆಯ್ಕೆಯಾಗಿದ್ದಾರೆ. ಸಂಘದ ಪ್ರಧಾನ ಕಾರ್ಯದರ್ಶಿ ಹುದ್ದೆ ನಡೆದ ಚುನಾವಣೆಯಲ್ಲಿ ಎಲಿಟಾ ರೋಸ್ ಅವರು ಅತ್ಯಧಿಕ ಮತಗಳೊಂದಿಗೆ ಭರ್ಜರಿ ಜಯಗಳಿಸಿದ್ದಾರೆ. ಇವರು 5 ವರ್ಷಗಳ ಕಾನೂನು ಪದವಿಯ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ.
ಕಾಂತಾರ ಚಾಪ್ಟರ್-1 ಚಿತ್ರದಲ್ಲಿ ಭಾಗಿಯಾದ ಕಲಾವಿದರಿಗೆ ಹೊಂಬಾಳೆ ಸಂಸ್ಥೆಯಿಂದ ಅನ್ಯಾಯ ಆರೋಪ: ಕಲಾವಿದರಿಂದ ಪ್ರತಿಭಟನೆ
ಉಡುಪಿ: ಕಾಂತಾರ ಚಾಪ್ಟರ್- 1 ಚಿತ್ರದ ಜ್ಯೂನಿಯರ್ ಆರ್ಟಿಸ್ಟ್ ಗಳಿಗೆ ಹೊಂಬಾಳೆ ಸಂಸ್ಥೆ ಅನ್ಯಾಯ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಕಾಂತಾರ ಪ್ರೀಕ್ವೆಲ್ ನಲ್ಲಿ ಭಾಗಿಯಾಗಿರುವ ಜ್ಯೂನಿಯರ್ ಆರ್ಟಿಸ್ಟ್ ಗಳು ಈ ಸಂಬಂಧ ಪ್ರತಿಭಟನೆ ನಡೆಸಿದ್ದಾರೆ. ಸದ್ಯ ಸಿನಿಮಾದ ಶೂಟಿಂಗ್ ಕುಂದಾಪುರ ತಾಲೂಕಿನ ಕೆರಾಡಿಯಲ್ಲಿ ನಡೆಯುತ್ತಿದೆ. ತಮಗೆ ಪೇಮೆಂಟ್ ಸಿಕ್ಕಿಲ್ಲ ಎಂದು ಆರೋಪಿಸಿರುವ ಜ್ಯೂನಿಯರ್ ಆರ್ಟಿಸ್ಟ್ ಗಳು ಪ್ರತಿಭಟನೆ ನಡೆಸಿದ್ದು ಇದು ಸೋಶಿಯಲ್ ಮೀಡಿಯಾದಲ್ಲೂ ಸದ್ದು ಮಾಡುತ್ತಿದೆ. ಜ್ಯೂನಿಯರ್ ಕಲಾವಿದರನ್ನು ಸರಿಯಾಗಿ ನಡೆಸಿಕೊಳ್ಳುವುದಿಲ್ಲ, ದೂರದಿಂದ ಶೂಟಿಂಗ್ ಗೆ […]
ಬ್ರಹ್ಮಾವರ ಲಾಕಪ್ ಡೆತ್ ಪ್ರಕರಣ; ತನಿಖೆಗೆ ಸಿಐಡಿ ಪೊಲೀಸರ ಎಂಟ್ರಿ
ಉಡುಪಿ: ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಲಾಕಪ್ ಡೆತ್ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಪ್ರಕರಣದ ತನಿಖೆಗೆ ಸಿಐಡಿ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ. ಬೆಂಗಳೂರಿನಿಂದ ಉಡುಪಿಗೆ ತಲುಪಿರುವ ಸಿಐಡಿ ಪೊಲೀಸರ ತಂಡವು, ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಮಾಹಿತಿ ಸಂಗ್ರಹಿಸುವ ಕಾರ್ಯ ಕೈಗೊಂಡಿದೆ. ಬಳಿಕ ಬ್ರಹ್ಮಾವರ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮೃತದೇಹ ಪರಿಶೀಲನೆ ನಡೆಸಿ ವೈದ್ಯಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿತು. ಮೃತದೇಹವನ್ನು ಮಣಿಪಾಲ ಕೆಎಂಸಿಯಲ್ಲಿ ಇಂದು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿ ಕೇರಳದಿಂದ ಮೃತರ […]