ಉಡುಪಿಯ ಜಾಹೀರಾತು ಕಂಪನಿಗೆ ಗ್ರಾಫಿಕ್ ಡಿಸೈನರ್, ವಿಡಿಯೋ ಎಡಿಟರ್ ತಕ್ಷಣ ಬೇಕಾಗಿದ್ದಾರೆ

ಉಡುಪಿ: ಇಲ್ಲಿನ ಜಾಹೀರಾತು ಕಂಪನಿ ಒಂದಕ್ಕೆ ಗ್ರಾಫಿಕ್ ಡಿಸೈನರ್ ಹಾಗೂ ವಿಡಿಯೋ ಎಡಿಟರ್ ತಕ್ಷಣ ಬೇಕಾಗಿದ್ದರೆ. ಕಮರ್ಷಿಯಲ್ ಗ್ರಾಫಿಕ್ ಡಿಸೈನ್ ನಲ್ಲಿ ಕನಿಷ್ಠ ಎರಡು ವರ್ಷಗಳ ಅನುಭವ, ಫೋಟೋಶಾಪ್, ಕೋರೆಲ್ ಡ್ರಾ, ಇಲ್ಲಸ್ಟ್ರೆಟರ್ ಹಾಗೂ ವಿಡಿಯೋ ಎಡಿಟಿಂಗ್ ನಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.ಉತ್ತಮ ವೇತನ ನೀಡಲಾಗುವುದು. ಸ್ಥಳೀಯರಿಗೆ ಆದ್ಯತೆ ಸಂಪರ್ಕಿಸಿ: 9448379989

ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಲೋಕಸಭಾ ಚುನಾವಣಾ ಪೂರ್ವಭಾವಿ ಸಭೆ

ಉಡುಪಿ: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ನೇತೃತ್ವದಲ್ಲಿ ಲೋಕಸಭಾ ಚುನಾವಣಾ ಪೂರ್ವಭಾವಿ ಸಭೆಯು ಮಾ.27 ಬುಧವಾರದಂದು ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ನಡೆಯಿತು. ಮಾಜಿ ಸಚಿವ, ಮಾಜಿ ಸಂಸ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಅವರ ಉಪಸ್ಥಿತಿಯಲ್ಲಿ ಹಾಗೂ ನಾಯಕರ ಸಮ್ಮುಖದಲ್ಲಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವು‌ ಉದ್ಘಾಟನೆಗೊಂಡಿತು. ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್, ಜಯಪ್ರಕಾಶ್ ಹೆಗ್ಡೆ ಅವರಿಗೆ ಹೂಮಾಲೆ ಹಾಕಿ ಶಾಲು ಹೊದಿಸಿ ಗೌರವಿಸಿದರು. […]

ಏ.1 ರಿಂದ 30 ರವರೆಗೆ Kidzee ಸಮ್ಮರ್ ಕ್ಯಾಂಪ್-2024

ಮಣಿಪಾಲ: 2 ರಿಂದ 8 ವರ್ಷದ ಒಳಗಿನ ಮಕ್ಕಳಿಗಾಗಿ ಅನಂತನಗರದಲ್ಲಿರುವ Kidzee ಸ್ಕೂಲ್ ನಲ್ಲಿ ಏ.1 ರಿಂದ 30 ರವರೆಗೆ ಸಮ್ಮರ್ ಕ್ಯಾಂಪ್ ಆಯೋಜಿಸಲಾಗಿದೆ. ಸಮ್ಮರ್ ಕ್ಯಾಂಪ್ ನಲ್ಲಿ ಮಕ್ಕಳಿಗಾಗಿ ಆರ್ಟ್ಸ್ ಎಂಡ್ ಕ್ರಾಫ್ಟ್ಸ್, ಯೋಗ, ಝುಂಬಾ, ಪೈಟಿಂಗ್, ಔಟ್ ಡೋರ್ ಗೇಮ್ಸ್, ಫನ್ ಲರ್ನಿಂಗ್ ಮುಂತಾದ ಚಟುವಟಿಕೆಗಳನ್ನು ನಡೆಸಲಾಗುವುದು. ಮಾಹಿತಿಗಾಗಿ ಸಂಪರ್ಕಿಸಿ: 9591982777

ಉಡುಪಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳ ಡೆಂಟಲ್ ಕ್ಲಿನಿಕ್: ಡಾ. ತಲ್ಲಾಣಿ ಸೂಪರ್ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್

ಉಡುಪಿ: ಇಲ್ಲಿನ ಹಳೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ, ಆಲ್ವಿನ್ ಬೇಕರಿ ಎದುರುಗಡೆ ಮಾ.17 ರಂದು ನೂತನವಾಗಿ ಪ್ರಾರಂಭವಾದ ಡಾ.ತಲ್ಲಾಣಿ ಸೂಪರ್ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ ನಲ್ಲಿ ಸೇವೆ ಪ್ರಾರಂಭವಾಗಿದ್ದು ಡಾ. ಸಚಿನ್ ತಲ್ಲಾಣಿ ಹಾಗೂ ಇತರ ತಜ್ಞರು ಬೆಳಿಗ್ಗೆ 9 ರಿಂದ ರಾತ್ರಿ 8 ರವರೆಗೆ ಸೇವೆಗೆ ಲಭ್ಯರಿರುತ್ತಾರೆ. ಅಪಾಯಿಂಟ್ಮೆಂಟ್ಗಳಿಗಾಗಿ ಸಂಪರ್ಕಿಸಿ: 9901008538

ದೊಡ್ಡಣ್ಣಗುಡ್ಡೆ: ವೇದ ಮಾತೆ ಗಾಯತ್ರಿ ದೇವಿಯ ನೂತನ ಗುಡಿಗೆ ನಿಧಿ ಕುಂಭ ಪ್ರತಿಷ್ಠಾಪನಾ ಮಹೋತ್ಸವ

ಉಡುಪಿ: ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನಿರ್ಮಾಣಗೊಳ್ಳಲಿರುವ ವೇದ ಮಾತೆ ಗಾಯತ್ರಿ ದೇವಿಯ ನೂತನ ಶಿಲಾಮಯ ಗುಡಿಗೆ ನಿಧಿ ಕುಂಭ ಪ್ರತಿಷ್ಠಾಪನಾ ಮಹೋತ್ಸವ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಮಾ.28 ರಂದು ನೆರವೇರಲಿದೆ. ಈ ಪ್ರಯುಕ್ತ ಕ್ಷೇತ್ರದಲ್ಲಿ ರುದ್ರಯಾಗವನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಈ ನಿಧಿ ಕುಂಭದಲ್ಲಿ ಭಕ್ತರು ತಮ್ಮ ಕೈಲಾದಷ್ಟು ಚಿನ್ನ ಬೆಳ್ಳಿ ನವರತ್ನಗಳನ್ನು ಸಮರ್ಪಿಸಲು ಅವಕಾಶವಿದೆ. ಭಕ್ತರು ನಗದು ರೂಪದಲ್ಲಿಯೂ ದೇಣಿಗೆಯನ್ನು ನೀಡಬಹುದು. ಈ ಮಹತ್ ಕಾರ್ಯದಲ್ಲಿ ಭಕ್ತರೆಲ್ಲ ಪಾಲ್ಗೊಂಡು ಗಾಯತ್ರಿ ದೇವಿಯ […]