ಇಂಡಿಯಾ ಬುಕ್ ಆಫ್ ರೆಕಾರ್ಡ್: ಹೆಬ್ರಿ ಎಸ್.ಆರ್. ವಿದ್ಯಾರ್ಥಿನಿ ಸಾಧನೆ.

ಹೆಬ್ರಿ: ಹೆಬ್ರಿಯ ಎಸ್.ಆರ್ ಪಬ್ಲಿಕ್ ಸ್ಕೂಲ್ ನಲ್ಲಿ 4ನೇ ತರಗತಿಯ ವಿದ್ಯಾರ್ಥಿನಿ ಆಪ್ತಿ ಆಚಾರ್ಯ ಅವರು, 2025 ಮಾರ್ಚ್ 1 ರಂದು ಜಿಮ್ನಾಸ್ಟಿಕ್ ನ ಒಂದು ಭಾಗವಾದ ಹೈಡ್ರೋಲ್ ಅನ್ನು ಗರಿಷ್ಟ 4 ನಿಮಿಷ 40 ಸೆಕೆಂಡ್ ನಲ್ಲಿ ಸತತ 65 ರೌಂಡುಗಳನ್ನು ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸಾಧನೆ ಮಾಡಿದ್ದಾಳೆ. ಈಕೆ ಮುನಿಯಾಲಿನ ಶ್ರೀಮತಿ ಲತಾ ಹಾಗೂ ಶಿವಾನಂದ ಆಚಾರ್ಯ ಅವರ ಮಗಳು. ವಿದ್ಯಾರ್ಥಿನಿಯನ್ನು ಎಸ್. ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್. […]

ಎ.18ರಂದು “ಕೋರ” ಚಿತ್ರ ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆ

ಉಡುಪಿ: ರತ್ನಂ ಮೂವೀಸ್ ಬ್ಯಾನರ್ ಅಡಿಯಲ್ಲಿ ಪಿ ಮೂರ್ತಿ ನಿರ್ಮಿಸಿದ ಮತ್ತು ಒರಟ ಶ್ರೀ ನಿರ್ದೇಶಿಸಿದ ‘ಕೋರ’ ಚಿತ್ರವು ಇದೇ ಎ.18ರಂದು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ರಿಯಾಲಿಟಿ ಶೋ ಖ್ಯಾತಿ ಪಡೆದಿರುವ ಸುನಾಮಿ‌ ಕಿಟ್ಟಿ ಈ ಚಿತ್ರದ ನಾಯಕ ನಟರಾಗಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಿರ್ಮಾಪಕ ಪಿ. ಮೂರ್ತಿ ಅವರು, ಕೊರಗಜ್ಜನ‌ ಆಶೀರ್ವಾದದಿಂದ ಆರಂಭವಾದ ಚಿತ್ರ “ಕೋರ”. ಇದು ನಮ್ಮ ನೆಲದ ಕಥೆ.‌ ಆದಿವಾಸಿ ಬುಡಕಟ್ಟು ಜನಾಂಗ ಹಾಗೂ ರಾಕ್ಷಸನೊಬ್ಬನ‌ […]

ಹೋಟೆಲ್ ಗಳಲ್ಲಿ ಟೀ, ಕಾಫಿ, ಹಾಲಿನ ಖಾದ್ಯದ ಬೆಲೆ ಹೆಚ್ಚಳ ಸಾಧ್ಯತೆ.!

ಬೆಂಗಳೂರು: ಮಂಗಳವಾರದಿಂದ ಹಾಲು, ಮೊಸರಿನ ದರ ಹೆಚ್ಚಳವಾಗುವ ಹಿನ್ನೆಲೆಯಲ್ಲಿ ಹೋಟೆಲ್‌ಗಳಲ್ಲಿ ಚಹ, ಕಾಫಿ ಸೇರಿದಂತೆ ಹಾಲಿನ ಖಾದ್ಯ, ಸಿಹಿ ತಿನಿಸುಗಳ ಬೆಲೆಯಲ್ಲೂ ಏರಿಕೆಯಾಗಲಿದೆ. ಸದ್ಯ ನಗರದಲ್ಲಿ ಟೀ, ಕಾಫಿ ಬೆಲೆ ರೂ.15- 20 ಇದೆ. ಇದನ್ನು ಎಷ್ಟರ ಪ್ರಮಾಣದಲ್ಲಿ ಏರಿಕೆ ಮಾಡಬಹುದು ಎಂಬ ಬಗ್ಗೆ ಬೆಂಗಳೂರು ಹೋಟೆಲ್‌ಗಳ ಸಂಘ, ಕರ್ನಾಟಕ ಹೋಟೆಲ್‌ಗಳ ಸಂಘಗಳು ಸಭೆ ಸೇರಿ ನಿರ್ಧರಿಸಲಿವೆ. ನಂದಿನಿ ಹಾಲಿನ ಬೆಲೆಯೂ ಲೀ.ಗೆ ರೂ.4 ಹೆಚ್ಚಳವಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ಕಾಫಿ-ಟೀ ದರದಲ್ಲಿ ಶೇ.10-15ರಷ್ಟು ಹೆಚ್ಚಳವಾಗಲಿದೆ ಎಂದು ಬೃಹತ್ […]

ಬ್ರಹ್ಮಾವರ: ಕಾರು ಡಿಕ್ಕಿ ಹೊಡೆದು ಶಾಲಾ ಬಾಲಕ ಮೃತ್ಯು

ಉಡುಪಿ: ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಶಾಲಾ ಬಾಲಕನೋರ್ವ ಸ್ಥಳದಲ್ಲೆ ಮೃತಪಟ್ಟ ಘಟನೆ ಬ್ರಹ್ಮಾವರ ಮಹೇಶ್ ಆಸ್ಪತ್ರೆಯ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ66ರಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ. ಮೃತ ವಿದ್ಯಾರ್ಥಿಯನ್ನು ಬ್ರಹ್ಮಾವರ ಎಸ್.ಎಮ್.ಎಸ್. ಶಾಲೆಯ 6ನೇ ತರಗತಿಯ ವಂಶಿ ಜಿ. ಶೆಟ್ಟಿ(14) ಎಂದು ಗುರುತಿಸಲಾಗಿದೆ. ವಂಶಿ ಇಂದು ಬೆಳಿಗ್ಗೆ ಶಾಲೆಗೆಂದು ತೆರಳುತ್ತಿದ್ದಾಗ ಹೆದ್ದಾರಿ ದಾಟಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಕುಂದಾಪುರದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರೊಂದು ರಭಸವಾಗಿ ಬಂದು ಡಿಕ್ಕಿ […]

ರಾಜ್ಯದಲ್ಲಿರುವುದು ಔರಂಗಜೇಬನ ಸರಕಾರ- ಹರೀಶ್ ಪೂಂಜ

ಉಡುಪಿ: ದೇಶದಲ್ಲಿ ಔರಂಗಜೇಬನ ರೀತಿಯಲ್ಲಿ ಆಡಳಿತ ನಡೆಸುವವರು ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯನವರು ಮಾತ್ರ. ಔರಂಗಜೇಬನಿಗೂ ಸಿದ್ದರಾಮಯ್ಯನವರಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು. ರಾಜ್ಯ ಬಜೆಟ್‌ನಲ್ಲಿ ಉಡುಪಿ ಜಿಲ್ಲೆಗೆ ಅನುದಾನ ನೀಡಿಲ್ಲ ಎಂದು ಆರೋಪಿಸಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಉಡುಪಿಯ ರಾಜಾಂಗಣ ಪಾರ್ಕಿಂಗ್ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ತೆರಿಗೆ ಲೂಟಿ ಮಾಡುವ ಸಿದ್ದರಾಮಯ್ಯ ಅವರಿಗೆ ಔರಂಗಜೇಬನೇ ಪ್ರೇರಣೆ. ತೆರಿಗೆ ಮೂಲಕ ಬಹುಸಂಖ್ಯಾತ ಹಿಂದೂಗಳ ಹಣವನ್ನು […]