ನಾಡಿನ ಜನಪ್ರಿಯ ಕಲೆ ಯಕ್ಷಗಾನವನ್ನು ರಾಜ್ಯ ಕಲೆ ಎಂದು ಘೋಷಿಸುವಂತೆ ಸರ್ಕಾರಕ್ಕೆ ಯಕ್ಷಗಾನ ಅಕಾಡೆಮಿಯ ಮನವಿ

ಉಡುಪಿ: ನಾಡಿನಾದ್ಯಂತ ಜನಪ್ರಿಯವಾಗಿರುವ ಕರಾವಳಿಯ ಯಕ್ಷಗಾನ ಕಲೆಯನ್ನು ‘ಕರ್ನಾಟಕ ರಾಜ್ಯ ಕಲೆ’ ಎಂದು ಘೋಷಿಸುವಂತೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ್ ಶೆಟ್ಟಿ ಅವರ ನೇತೃತ್ವದಲ್ಲಿ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅ.8ರಂದು ಮನವಿ ಮಾಡಿಲಿದ್ದಾರೆ. ಕರ್ನಾಟಕ ಕರಾವಳಿಯ ಗಂಡುಕಲೆಯೆಂದೇ ಪ್ರಖ್ಯಾತವಾಗಿರುವ ನೂರಾರು ವರ್ಷಗಳ ಇತಿಹಾಸ ಹೊಂದಿರುವ ‘ಯಕ್ಷಗಾನ ಕಲೆ’ಯ ಉಳಿವು ಹಾಗೂ ಬೆಳವಣಿಗೆಯ ದೃಷ್ಟಿಯಿಂದ ‘ಕರ್ನಾಟಕ ರಾಜ್ಯ ಕಲೆ’ಯಾಗಿ ಮಾನ್ಯತೆ ನೀಡಿ ಸರಕಾರದ ವತಿಯಿಂದ ಅಧಿಕೃತವಾಗಿ ಘೋಷಿಸಬೇಕು ಎಂಬ ಮನವಿ ಇದೆ. ಕರ್ನಾಟಕದ ಹೆಮ್ಮೆಯ […]
ಉಡುಪಿ: ಪೋದಾರ್ ಶಾಲೆಯಲ್ಲಿ ಗಾಂಧೀಜಿ-ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

ಉಡುಪಿ: ಪೋದಾರ್ ಅಂತರಾಷ್ಟ್ರೀಯ ಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜಯಂತಿಯನ್ನು ಗೌರವಪೂರ್ವವಾಗಿ ಆಚರಿಸಲಾಯಿತು. ಕಾರ್ಯಕ್ರಮಮದಲ್ಲಿ ಮಹನೀಯರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು. ಹತ್ತನೇಯ ತರಗತಿಯ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಿಕೊಟ್ಟರು. ಕಾಯಕ್ರಮದಲ್ಲಿ ಕಿರು ನಾಟಕ, ಭಾಷಣ, ಸರ್ವಧರ್ಮ ಪ್ರಾರ್ಥನೆ ಹಾಗೂ ರಘುಪತಿ ರಾಘವ ಗೀತೆಯನ್ನು ಪ್ರಸ್ತುತಪಡಿಸಲಾಯಿತು. ಶಾಲೆಯ ಪ್ರಾಂಶುಪಾಲೆ ಶ್ರೀಮತಿ ನೇತ್ರಾ ಹೆಚ್ ಅವರು ಗಾಂಧೀಜಿಯವರ ಸತ್ಯ, ಅಹಿಂಸೆ, ಕೌಶಲ್ಯಾಧಾರಿತ ಶಿಕ್ಷಣ, ಶ್ರಮ, ಒಗ್ಗಟ್ಟಿನ ಮಹತ್ವ, ಸತ್ಯಮೇವ ಜಯತೆ ಎಂಬ ಸಂದೇಶ […]
ಉಡುಪಿ: ರೈಲುಗಳಿಗೆ ನೀರು ತುಂಬಿಸುವ ವ್ಯವಸ್ಥೆಯ ಮೂಲಭೂತ ಸೌಕರ್ಯಗಳಿಗೆ 2 ಕೋಟಿ ರೂ. ಅನುದಾನ ಬಿಡುಗಡೆ: ಕೋಟ ಶ್ರೀನಿವಾಸ್ ಪೂಜಾರಿ

ಉಡುಪಿ: ಉಡುಪಿ ರೈಲು ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವಂತಹ ಪ್ರಮುಖ ವ್ಯವಸ್ಥೆಯಾದ ರೈಲುಗಳಿಗೆ ನೀರು ತುಂಬಿಸುವ ಸೌಲಭ್ಯತೆಗೆ ತಮ್ಮ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರವು ಎರಡು ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸಿದೆ ಎಂದು ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿಯವರು ಮಾಹಿತಿ ನೀಡಿದರು. ಅವರು ಮಣಿಪಾಲದ ಸಂಸದರ ಕಚೇರಿಯಲ್ಲಿ ಉಡುಪಿ ರೈಲ್ವೆ ಯಾತ್ರಿ ಸಂಘದ ಜೊತೆ ರೈಲ್ವೆ ಸಂಬಂಧಿತ ಸಮಸ್ಯೆಗಳು ಮತ್ತು ಸೌಲಭ್ಯತೆಗಳ ಬಗ್ಗೆ ಸಮಾಲೋಚನೆ ಸಭೆ ನಡೆಸಿದ ಸಂದರ್ಭದಲ್ಲಿ ಈ ಮಾಹಿತಿ ನೀಡಿದರು. ಉಡುಪಿಯು ಕರಾವಳಿಯ ವೇಗವಾಗಿ ಬೆಳೆಯುತ್ತಿರುವ […]
ಉಡುಪಿಯಲ್ಲಿ ಅ.6ರಂದು ‘ಉದ್ಯೋಗ ಮೇಳ”: ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಇಲ್ಲಿದೆ ಅವಕಾಶ

ಉಡುಪಿ: ಮಹಿಳಾ ಸಬಲೀಕರಣ ಹಾಗೂ ಹಿರಿಯ ನಾಗರಿಕರಿಗಾಗಿ ‘ಉದ್ಯೋಗ ಮೇಳ’ವನ್ನು ಅ.6ರಂದು ಉಡುಪಿಯಲ್ಲಿ ಆಯೋಜಿಸಲಾಗಿದೆ. ಉಡುಪಿಯ ಹೋಟೆಲ್ ಕಿದಿಯೂರಿನ ಶೇಷಶಯನ ಬಾಲ್ಕನಿ ಹಾಲ್ನಲ್ಲಿ ಬೆಳಿಗ್ಗೆ 10.30ಕ್ಕೆ ಉದ್ಯೋಗ ಮೇಳ ನಡೆಯಲಿದೆ. ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ಉದ್ಯೋಗ ಮತ್ತು ಹೆಚ್ಚುವರಿ ಆದಾಯದ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಮೇಳದಲ್ಲಿ ಆರ್ಥಿಕ ಸ್ವಾವಲಂಬನೆ, ಆರೋಗ್ಯ ಸಹಾಯ, ಆತ್ಮವಿಶ್ವಾಸ ವೃದ್ಧಿ, ಸಕ್ರಿಯ ಹಾಗೂ ಸಂತಸದ ವೃದ್ಧಾಪ್ಯ, ಎರಡನೇ ಆದಾಯ, ಕುಟುಂಬ ವೈದ್ಯಕೀಯ ಸೌಲಭ್ಯ ಸೇರಿದಂತೆ […]
ಕಾಪು: ತಂದೆ, ಮಗಳು ನಾಪತ್ತೆ

ಕಾಪು: ಉಳಿಯಾರಗೋಳಿ ಗ್ರಾಮದ ಕಲ್ಯಾ ಭರತ್ ನಗರ ನಿವಾಸಿ ದಿನೇಶ್ ಶೆಟ್ಟಿಗಾರ(45) ಹಾಗೂ ತನ್ನ 5 ವರ್ಷದ ಹೆಣ್ಣು ಮಗು ವಿಸ್ಮಿತ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ಇವರು, ಸೆ.26ರ ತನ್ನ ಮಗುವಿನ ಹುಟ್ಟಿದ ಹಬ್ಬಕ್ಕಾಗಿ ಮಗಳಿಗೆ ಬಟ್ಟೆ ತೆಗೆದುಕೊಡಿಸುವುದಾಗಿ ಹೇಳಿ ಸೆ.25ರಂದು ಸಂಜೆ ಮನೆಯಿಂದ ಮಗು ಅನ್ವಿತಳನ್ನು ಕರೆದುಕೊಂಡು ಹೋದವರು ಈವರೆಗೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.