ಕುಂದಾಪುರ:ವ್ಯಕ್ತಿ ನಾಪತ್ತೆ
ಉಡುಪಿ: ಕುಂದಾಪುರ ತಾಲೂಕು ಹಟ್ಟಿಯಂಗಡಿ ಗ್ರಾಮ ಹಟ್ಟಿಯಂಗಡಿ ಕ್ರಾಸ್ ಟೆಂಟ್ ಹೌಸ್ ನಿವಾಸಿ ಸಂತೋಷ ಭರತ ಸಾಳುಂಕೆ (26) ಎಂಬ ವ್ಯಕ್ತಿಯು ನವೆಂಬರ್ 5 ರಿಂದ ನಾಪತ್ತೆಯಾಗಿರುತ್ತಾರೆ. 5 ಅಡಿ 8 ಇಂಚು ಎತ್ತರ, ಕೋಲು ಮುಖ, ಗೋದಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ, ಹಿಂದಿ ಹಾಗೂ ಮರಾಠಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಜಿಲ್ಲಾ ಪೊಲೀಸ್ ಕಚೇರಿ ದೂ.ಸಂಖ್ಯೆ:0820-2526444, ಕುಂದಾಪುರ ವೃತ್ತ ಕಚೇರಿ ದೂ.ಸಂಖ್ಯೆ: 08254-230880, ಕುಂದಾಪುರ ಪೊಲೀಸ್ ಉಪಾಧೀಕ್ಷಕರ ಕಚೇರಿ […]
ಉಡುಪಿ:ಯುವಕ ನಾಪತ್ತೆ
ಉಡುಪಿ: ನಗರದ ಶಿವಳ್ಳಿ ಗ್ರಾಮದ ದೊಡ್ಡಣಗುಡ್ಡೆ ಎಂಬಲ್ಲಿ ವಾಸವಿದ್ದ ಸುಕೇಶ್ (26) ಎಂಬ ಯುವಕನು ಸೆಪ್ಟಂಬರ್ 11 ರಿಂದ ನಾಪತ್ತೆಯಾಗಿರುತ್ತಾರೆ. 5 ಅಡಿ 4 ಇಂಚು ಎತ್ತರ, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ, ತುಳು ಹಾಗೂ ಮರಾಠಿ ಭಾಷೆಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಣಿಪಾಲ ಪೊಲೀಸ್ ಠಾಣೆಯ ಪಿ.ಐ ಮೊ.ನಂ:9480805448, ಪಿ.ಎಸ್.ಐ ಮೊ.ನಂ: 9480805475 ಹಾಗೂ ಉಡುಪಿ ಕಂಟ್ರೋಲ್ ರೂಂ ದೂ.ಸಂಖ್ಯೆ:0820-2526444 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮಣಿಪಾಲ ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆತಿಳಿಸಿದೆ.
ಹೆಬ್ರಿ:ವೃದ್ಧ ನಾಪತ್ತೆ
ಉಡುಪಿ: ಹೆಬ್ರಿಯ ನಾಲ್ಕೂರು ಗ್ರಾಮದ ಮಿಯ್ಯಾರು ದೊಡ್ಡಮನೆ ಎಂಬಲ್ಲಿ ವಾಸವಿದ್ದ ರಾಮಣ್ಣ ಶೆಟ್ಟಿ (70) ಎಂಬ ವೃದ್ಧರು ನವೆಂಬರ್ 5 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇನಾಪತ್ತೆಯಾಗಿರುತ್ತಾರೆ. 5 ಅಡಿ 2 ಇಂಚು ಎತ್ತರ, ಸಾಧಾರಣ ಶರೀರ, ಎಣ್ಣೆಕಪ್ಪು ಮೈಬಣ್ಣ, ಕೋಲು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಹೆಬ್ರಿ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳನ್ನುಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮಂಗಳೂರು: ಅನಾರೋಗ್ಯದಿಂದ ಕಾಲೇಜು ಉಪನ್ಯಾಸಕಿ ಮೃತ್ಯು.
ಮಂಗಳೂರು: ಅನಾರೋಗ್ಯದಿಂದ ಕಾಲೇಜು ಉಪನ್ಯಾಸಕಿ ಮೃತ್ಯುಪಟ್ಟ ಘಟನೆ ಬುಧವಾರ ನಡೆದಿದೆ. ನಗರದ ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ, ಬಜಪೆ ನಿವಾಸಿ ಗ್ಲೋರಿಯಾ ರೋಡ್ರಿಗಸ್(23) ಮೃತಪಟ್ಟವರು. ಫುಡ್ ಅಲರ್ಜಿ ಕಾರಣ ಗ್ಲೋರಿಯಾ ಕಳೆದ ಶುಕ್ರವಾರ ಮಧ್ಯಾಹ್ನ ಊಟ ಸೇವಿಸಿದ ಬಳಿಕ ಕಾಲೇಜಿನಲ್ಲಿ ಏಕಾಏಕಿ ಕುಸಿದುಬಿದ್ದಿದ್ದರು. ಅವರನ್ನು ಕೂಡಲೇ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ನಡುವೆ ಅವರ ಮೆದುಳು ನಿಷ್ಕ್ರಿಯವಾಗಿರುವುದಾಗಿ ನುರಿತ ವೈದ್ಯರ ತಂಡ ತಿಳಿಸಿದ್ದರು. ಅನಾಫಿಲ್ಯಾಕ್ಟಿಕ್ ರಿಯಾಕ್ಷನ್ ಗ್ಲೋರಿಯಾ ಅವರಿಗೆ ಫುಡ್ ಅಲರ್ಜಿ(ಅನಾಫಿಲ್ಯಾಕ್ಟಿಕ್ ರಿಯಾಕ್ಷನ್) ಸಮಸ್ಯೆ […]
ಉಡುಪಿ:ಪ್ರತಿಷ್ಠಿತ ವಸ್ತ್ರ ಮಳಿಗೆ ಗೀತಾಂಜಲಿ ಸಿಲ್ಕ್ಸ್ ನಲ್ಲಿ ಉದ್ಯೋಗವಕಾಶ
ಉಡುಪಿಯ ಪ್ರತಿಷ್ಠಿತ ವಸ್ತ್ರಮಳಿಗೆ ಗೀತಾಂಜಲಿ ಸಿಲ್ಕ್ಸ್ ನಲ್ಲಿ ಉದ್ಯೋಗವಕಾಶ ಲಭ್ಯವಿದ್ದು, ಅರ್ಹರು ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಹುದ್ದೆಗಳ ವಿವರ : ಸೇಲ್ಸ್ (ಯುವಕ/ಯುವತಿಯರು) ಪುರುಷರ ಉಡುಪು ವಿಭಾಗ, ಮಹಿಳೆಯರ ಉಡುಗೆ ವಿಭಾಗ, ಸೀರೆ ವಿಭಾಗ, ಮಕ್ಕಳ ಉಡುಗೆ ವಿಭಾಗ.ಸ್ವಾಗತಗಾರ (welcome ಸಿಬ್ಬಂದಿ) (ಯುವಕ-ಯುವತಿಯರು)ಸೆಕ್ಯುರಿಟಿ ಗಾರ್ಡ್ಆಸಕ್ತರು ನ.14,15,16,17ರಂದು ಮುಖತಃ ಭೇಟಿ ನೀಡಿಬಹುದಾಗಿದೆ. ಪಿಜಿ ವ್ಯವಸ್ಥೆ ಇದ್ದು, ಸ್ಥಳೀಯ ಅನುಭವಸ್ಥರಿಗೆ ಮೊದಲ ಆದ್ಯತೆ, 8296367501 ಸಂಪರ್ಕಿಸಬಹುದಾಗಿದೆ.