ಅ.8 ರಂದು ನೇರ ಸಂದರ್ಶನ

ಉಡುಪಿ: ನಗರದ ಶಾಂತ ಎಲೆಕ್ಟ್ರಿಕಲ್ಸ್ ಪ್ರೈವೇಟ್.ಲಿ., ಆಭರಣ ಜುವೆರ‍್ಸ್ ಹತ್ತಿರ, ಕಾರ್ಪೋರೇಶನ್ ಬ್ಯಾಂಕ್ ರೋಡ್, ಅನುಗ್ರಹ ಕಾಂಪ್ಲೆಕ್ಸ್, ಉಡುಪಿ ಇಲ್ಲಿ ಅಕ್ಟೋಬರ್ 8 ರಂದು ಬೆಳಗ್ಗೆ 10 ಗಂಟೆಗೆ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮಾ ಮತ್ತು ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ಪ್ರತಿಯೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, […]

ಅಭಿವೃದ್ಧಿಗೆ ಹಣವಿಲ್ಲ, ಸರ್ಕಾರದ ಬೊಕ್ಕಸ ಖಾಲಿ’: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸುನೀಲ್ ಕುಮಾರ್ ವಾಗ್ದಾಳಿ; ಅಕ್ಟೋಬರ್‌ ಪೂರ್ತಿ ಉಡುಪಿ ಜಿಲ್ಲೆಯಲ್ಲಿ ಪ್ರತಿಭಟನೆ

ಉಡುಪಿ: ನಾಲ್ಕು ಬಜೆಟ್‌ ಮಂಡಿಸಿದರೂ ನಿರೀಕ್ಷಿತ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಸರ್ಕಾರ ಒಂದೇ ಒಂದು ಹೊಸ ರೇಷನ್‌ ಕಾರ್ಡ್‌ ನೀಡಿಲ್ಲ. ಬಿಪಿಎಲ್‌ ಕಾರ್ಡ್‌ಗಳ ಪರಿಶೀಲನೆ ಹೆಸರಿನಲ್ಲಿ 6 ಸಾವಿರಕ್ಕೂ ಅಧಿಕ ಕಾರ್ಡ್‌ಗಳನ್ನು ರದ್ದುಪಡಿಸಲು ಮುಂದಾಗಿದೆ ಎಂದು ಮಾಜಿ ಸಚಿವ, ಶಾಸಕ ವಿ. ಸುನೀಲ್ ಕುಮಾರ್ ಆರೋಪಿಸಿದರು.ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾರ್ಕಳ ಬಿಜೆಪಿ ವತಿಯಿಂದ ಕಾರ್ಕಳ ತಾಲೂಕು ಕಚೇರಿ ಮುಂಭಾಗ ಸೋಮವಾರ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರ 3.75 ವರ್ಷಗಳ ಆಡಳಿತ ಪೂರ್ಣಗೊಳಿಸಿದ್ದರೂ […]

ಬಂಟ್ವಾಳದ ಕಾರ್ಮಿಕನಿಗೆ ಒಲಿಯಿತು ₹1 ಕೋಟಿ ಲಾಟರಿ: ರೂ.500 ಬೆಲೆಯ ಲಾಟರಿ ತಂದ ಅದೃಷ್ಟವಿದು!

ಮಂಗಳೂರು: ಅದೃಷ್ಟ ಯಾವಾಗ, ಯಾರಿಗೆ ಕೈಹಿಡಿಯುತ್ತದೆ ಎಂಬುದಕ್ಕೆ ಬಂಟ್ವಾಳ ತಾಲೂಕಿನ ಪಣೋಲಿಬೈಲ್ ನಿವಾಸಿ ರೋಹಿತ್ ಅವರ ಕಥೆಯೂ ಮತ್ತೊಂದು ಉದಾಹರಣೆಯಾಗಿದೆ. ಕೇರಳದ ತಿರುವೋಣಂ ಬಂಪರ್ ಲಾಟರಿ-2026ರ ಡ್ರಾದಲ್ಲಿ ರೋಹಿತ್ ಅವರಿಗೆ ಬರೋಬ್ಬರಿ ₹1 ಕೋಟಿ ಬಹುಮಾನ ಒಲಿದಿದೆ. ತಿರುವೋಣಂ ಬಂಪರ್‌ನ ಎರಡನೇ ಬಹುಮಾನವಾಗಿ ತಲಾ ₹1 ಕೋಟಿ ನೀಡಲಾಗಿದ್ದು, ಈ ಬಹುಮಾನಕ್ಕೆ 20 ಮಂದಿ ವಿಜೇತರಾಗಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೋಹಿತ್ ಅವರಿಗೆ ಲಾಟರಿ ಖರೀದಿಸುವುದು ಹೊಸತೇನಲ್ಲ. ಕೇರಳ ಗಡಿಭಾಗದಲ್ಲಿರುವ ಸಂಬಂಧಿಕರ ಮನೆಗೆ ತೆರಳುವ […]

ಸೌಹಾರ್ದ ಸಮಾಜ ಕಟ್ಟುವ ಹೊಣೆ ಮುಸ್ಲಿಮ್ ಒಕ್ಕೂಟ ವಹಿಸಲಿ: ಯು.ಟಿ.ಖಾದರ್

ಸಾಮರಸ್ಯದ ಬದುಕು ಮತ್ತು ಒಗ್ಗಟ್ಟಿನ ಸಮಾಜವೇ ನಮ್ಮ ದೊಡ್ಡ ಶಕ್ತಿ ಹಾಗೂ ಗೌರವದ ಸಂಕೇತ. ಇಂದಿನ ಸಂದರ್ಭದಲ್ಲಿ ಸಾಮರಸ್ಯದ ಸಮಾಜ ನಿರ್ಮಾಣ ಅತ್ಯಂತ ಅಗತ್ಯವಾಗಿದ್ದು, ಈ ಕಾರ್ಯವನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ತನ್ನ ಪ್ರಮುಖ ಧ್ಯೇಯವನ್ನಾಗಿ ಮಾಡಿಕೊಳ್ಳಬೇಕು ಎಂದು ರಾಜ್ಯ ವಕ್ಫ್, ಹಜ್, ಅಲ್ಪಸಂಖ್ಯಾತ ಕಲ್ಯಾಣ ಹಾಗೂ ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು. ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ 25 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ರಜತ ಸಂಭ್ರಮದ ಅಂಗವಾಗಿ ಉಡುಪಿ ನಗರದ ವಿ.ಕೆ. ಪ್ಯಾರಡೈಸ್ ಕಟ್ಟಡದಲ್ಲಿ […]

ಕಾರ್ಕಳ: ಜನವಿರೋಧಿ ನೀತಿ ಖಂಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ

ಉಡುಪಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಬಿಜೆಪಿ ಕಾರ್ಕಳ ವತಿಯಿಂದ ಕಾರ್ಕಳ ತಾಲೂಕು ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಯಿತು. ಶಾಸಕ ಸುನಿಲ್ ಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ರೇಷನ್ ಕಾರ್ಡ್, ಪಿಂಚಣಿ ಹಾಗೂ ರಸ್ತೆ ನಿರ್ವಹಣೆಗೆ ಅಗತ್ಯ ಅನುದಾನ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕಾಂಗ್ರೆಸ್ ಸರ್ಕಾರವನ್ನು “ಜೀರೋ ಬ್ಯಾಲೆನ್ಸ್ ಸರ್ಕಾರ” ಎಂದು ಟೀಕಿಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ […]