ಮಣಿಪಾಲ: ಮಣಿಪಾಲದ ಮುನಿಯಾಲು ಆಯುರ್ವೇದದ ಅಂಗ ಸಂಸ್ಥೆ ಡಾ. ಕೃಷ್ಣ ಲೈಫ್ ಸೈನ್ಸಸ್ ಲಿಮಿಟೆಡ್ ಕಂಪನಿಯ ಅಲ್ಝೈಮರ್ಸ್ ಮತ್ತು ಪಾರ್ಕಿನ್ಸನ್ ಔಷಧಿ ಮುನಿಪ್ರಜ್ಞಾ ಮಾತ್ರೆಗಳಿಗೆ ಭಾರತ ಸರಕಾರದಿಂದ 20 ವರ್ಷಗಳಪೇಟೆಂಟ್ ದೊರೆತಿದೆ. ಮುನಿಪ್ರಜ್ಞಾ ಮಾತ್ರೆಗಳು ಮೆದುಳಿನಲ್ಲಿ ಸಂಗ್ರಹವಾಗುವ ವಿಷಕಾರಿ ಪ್ರೋಟೀನ್ ಕರಗಿಸುವ ಮೂಲಕ ಅದರಿಂದ ಉಂಟಾಗುವ ಅಲ್ಝೈಮರ್ಸ್ ಮತ್ತು ಪಾರ್ಕಿನ್ಸನ್ ಕಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಕೆನಡದಲ್ಲಿರುವ ಶ್ರೇಷ್ಠ ಅಲ್ಝೈಮರ್ಸ್ ರಿಸರ್ಚ್ ಸೆಂಟರ್ ವ್ಶೆಜ್ಞಾನಿಕವಾಗಿ ದೃಢಪಡಿಸಿದೆ.
ಮುನಿಪ್ರಜ್ಞಾ ಮಾತ್ರೆಗಳಿಗೆ ಈಗಾಗಲೇ ಅಮೆರಿಕಾದ ಪೇಟೆಂಟ್ ದೊರೆತಿದ್ದು ಮುನಿಯಾಲು ಅಯುರ್ವೇದ ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್ ಡಾ.ಎಂ ವಿಜಯಭಾನು ಶೆಟ್ಟಿಯವರಿಗೆ ಒಟ್ಟು ಅಮೆರಿಕ ಸರಕಾರದ 17 ಪೇಟೆಂಟ್ ಹಾಗೂ ಭಾರತ ಸರಕಾರದ 8 ಪೇಟೆಂಟ್ದೊರೆತಿದೆ.
ಪೇಟೆಂಟ್ನ ಪ್ರಾಮುಖ್ಯತೆ:
ಪೇಟೆಂಟ್ ಹಕ್ಕು ಸಿಗಬೇಕಾದರೆ ಮುಖ್ಯವಾಗಿ ಮೂರು ಪ್ರಮುಖ ಅರ್ಹತೆಗಳನ್ನು ಹೊಂದಿರುವುದು ಅತೀ ಅಗತ್ಯ. ಅವೆಂದರೆ ವೈದ್ಯಕೀಯ ಜಗತ್ತಿನಲ್ಲಿ ಹಿಂದೆಂದೂ ಕಂಡಿರದ, ಸುಲಭದಲ್ಲಿ ಕಂಡು ಹಿಡಿಯಲಾಗದ, ಹಾಗೂ ಅಮೂಲಾಗ್ರ ವ್ಶೆಜ್ಞಾನಿಕ ಸಂಶೋಧನೆಗಳಿಂದ ದೃಢಪಟ್ಟಿರುವ ಬಹು ಜನೋಪಯೋಗಿ ಆವಿಷ್ಕಾರವಾಗಿರುವುದು.
ಆಯುರ್ವೇದದ ಪ್ರಸ್ತುತತೆ:
90% ರೋಗಿಗಳ ಚಿಕಿತ್ಸೆಯನ್ನುಆಯುರ್ವೇದ ವಿಜ್ಞಾನದ ಮೂಲಕ ಯಶಸ್ವಿಯಾಗಿ ಗುಣಪಡಿಸಲು ಸಾಧ್ಯವಿದ್ದರೂ ಸರಾಸರಿ 10% ರೋಗಿಗಳು ಮಾತ್ರ ಆಯುರ್ವೇದದ ಚಿಕಿತ್ಸೆಯನ್ನು ಪಡೆಯುತ್ತಿರುವುದು ಚಿಂತಾಜನಕ ವಿಷಯವಾಗಿದೆ. ಹೀಗಾಗಲು ಆಯುರ್ವೇದ ಔಷಧಿಗಳಿಗೆ ಜಾಗತಿಕ ಅಂಗೀಕೃತಿ ದೊರಕದಿರುವುದೇ ಮುಖ್ಯಕಾರಣ.
ಅಮೆರಿಕಾದ ಪೇಟೆಂಟ್ ಹೊಂದಿರುವ ಹಿನ್ನೆಲೆಯ ಆಧಾರದಲ್ಲಿ ಮುಂದಿನ ದಿನಗಳಲ್ಲಿ ಜಾಗತಿಕಅಂಗೀಕೃತಿಯನ್ನು ಪಡೆಯುವ ಮೂಲಕ ಮುನಿಯಾಲು ಸಂಸ್ಥೆಯು ಜಗತ್ತಿನಾದ್ಯಂತ ಅಲೋಪತಿ ಔಷಧಿಗಳಂತೆ ಪ್ರಿಸ್ಕ್ರಿಪ್ಷನ್ ಡ್ರಗ್ರೂಪದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಆಯುರ್ವೇದಕ್ಕೆ ಅತೀ ಅಗತ್ಯವಿರುವ ಜಾಗತಿಕ ಮನ್ನಣೆಯನ್ನು ಒದಗಿಸುವ ಸದುದ್ದೇಶವನ್ನು ಹೊಂದಿರುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಸಂಸ್ಥೆಯು ಪೇಟೆಂಟ್ ಪಡೆದ ಮುಖ್ಯ ಔಷಧಿಗಳ ವಿವರ:
ಕ್ಯಾನ್ಸರ್ ಕಾಯಿಲೆಯ ಚಿಕಿತ್ಸೆಯಲ್ಲಿ ಅನಿಯಂತ್ರಿತ ಜೀವಕಣಗಳ ವಿಭಜನೆಯನ್ನು ತಡೆಹಿಡಿಯುವ ಮುನೆಕ್ಸ್ ಮಾತ್ರೆಗಳು, ಜೀನ್ ಮಟ್ಟದಲ್ಲಿ ಜೀವಕಣದ ಸಾವನ್ನು ತಡೆಹಿಡಿಯುವ ಮೂಲಕ ಹೃದಯಾಘಾತದಿಂದ ರಕ್ಷಿಸುವ ಹಾರ್ಟೋಜನ್ ಮಾತ್ರೆಗಳು, ಸಿಹಿಮೂತ್ರ ರೋಗದ ಚಿಕಿತ್ಸೆಗೆ ಇನ್ಸೋಲ್ ಎನ್ ಮಾತ್ರೆಗಳು, ಬ್ಯಾಕ್ಟೀರಿಯಾ ಮತ್ತು ವೈರಸ್ರೋಗಾಣುಗಳ ನಿಯಂತ್ರಣಕ್ಕೆ ಮುನಿಬಯೋಟಿಕ್ ಮಾತ್ರೆಗಳು, ಬೊಜ್ಜು ಮತ್ತು ಲಿಪಿಡ್, ಕೊಲೆಸ್ಟ್ರಾಲ್ ತೊಂದರೆಗಳಿಗೆ ಹರ್ಬೋಟ್ರಿಮ್ ಮಾತ್ರೆಗಳು, ರೋಗನಿರೋಧಕ ಶಕ್ತಿಯವರ್ಧನೆ ಹಾಗೂ ಮಕ್ಕಳ ಸರ್ವಾಂಗಿಣ ಬೆಳವಣಿಗೆಗೆ ಹಿರಣ್ಯಪ್ರಾಶ ಬಿಂದುಗಳು, ಕಿಡ್ನಿ, ಮೂತ್ರಾಶಯ ಮತ್ತು ಪ್ರಾಸ್ಟೇಟ್ಗ್ರಂಥಿಯ ತೊಂದರೆಗಳಿಗೆ ಮುನಿಪ್ರಭಾ ಮಾತ್ರೆಗಳು, ಮದ್ಯ ಹಾಗೂ ಮಾದಕದ್ರವ್ಯ ವ್ಯಸನ ಮುಕ್ತಿಗೆ ಹಾಗೂ ಲಿವರ್ತೊಂದರೆಗಳಿಗೆ ಹರ್ಬಾಡಿಕ್ಟ್ ಮಾತ್ರೆಗಳು, ಹೈಪೋ ಮತ್ತು ಹೈಪರ್ಥೈರೋಡಿಸಮ್ಗೆ ಮುನಿಥೈರೋನ್ ಮಾತ್ರೆಗಳು, ದಂತ ಮತ್ತು ಒಸಡಿನ ತೊಂದರೆಗಳಿಗೆ ಮುನಿಡೆಂಟ್ ಮಾತ್ರೆಗಳು, ಗರ್ಭಕೋಶ ಮತ್ತುಗರ್ಭಾಶಯದ ತೊಂದರೆಗಳಿಗೆ ಸೌಭಾಗ್ಯಕಲ್ಪ ಮಾತ್ರೆಗಳು ಹಾಗೂ ವಿವಿಧ ತರಹದ 1300 ಕ್ಯಾನ್ಸರ್ರೋಗಿಗಳಲ್ಲಿ ಯಶಸ್ವಿಯಾಗಿ ಉಪಯೋಗಿಸಲ್ಪಟ್ಟಿರುವ ಕ್ಯಾನ್ಸರ್ ಚಿಕಿತ್ಸಾಕ್ರಮವಾದ ಮಹೋಷಧಕಲ್ಪ.
ಮುನಿಯಾಲು ಆಯುರ್ವೇದ ಸಂಸ್ಥೆ ಮಣಿಪಾಲದಲ್ಲಿ ಆಯುರ್ವೇದ ಸ್ನಾತಕ ಮತ್ತು ಸ್ನಾತಕೋತ್ತರ ಕೇಂದ್ರ, ಆಯುರ್ವೇದ ಆಸ್ಪತ್ರೆ, ಯೋಗ ನ್ಯಾಚುರೋಪತಿ ಕಾಲೇಜು, ಔಷಧಿ ತಯಾರಿಕಾ ಘಟಕ ಮತ್ತು ಸಂಶೋಧನಾ ಕೇಂದ್ರವನ್ನು ನಡೆಸುತ್ತಿದೆ..















