ಮಣಿಪಾಲ :ಕರಾವಳಿ ಜಿಲ್ಲೆಯಲ್ಲಿ ಮಕ್ಕಳ ಪ್ರೀಸ್ಕೂಲ್ ಗೆ ಹೆಸರುವಾಸಿಯಾದ ಸಂಸ್ಥೆ ಟಿಮೋರ ಪ್ರೀಸ್ಕೂಲ್ ತನ್ನ ಯಶಸ್ವಿ ಒಂದು ವರ್ಷದ ಪೂರೈಕೆಯ ಅಂಗವಾಗಿ ಸ್ಥಾಪಕರ ದಿನಾಚರಣೆಯನ್ನು ಜುಲೈ 8ರಂದು ಸಂಭ್ರಮದಿಂದ ಆಚರಿಸಿತು. ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿಯವರು ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಆಶೀರ್ವಚನ ನೀಡಿ, ಸಂಸ್ಥೆಯ ಶೈಕ್ಷಣಿಕ ಸೇವೆಯನ್ನು ಪ್ರಶಂಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಶಾಲೆಯ ಸಂಸ್ಥಾಪಕಿ ಅರ್ಚನಾ ರಾವ್ ಅವರು ಸ್ವಾಮೀಜಿಯವರನ್ನು ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸಿಬ್ಬಂದಿ ಉತ್ಸಾಹದಿಂದ ಭಾಗವಹಿಸಿದರು.

CLICK HERE:
https://www.instagram.com/reel/DanGavos50H/?utm_source=ig_web_copy_link&igsh=NTc4MTIwNjQ2YQ==















