ಅ.11 ರಂದು ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭ

ಉಡುಪಿ: ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 13ನೇ ವರ್ಷದ ಪದವಿ ಪ್ರಧಾನ ಸಮಾರಂಭವು 11 ನೇ ಅಕ್ಟೋಬರ್ 2026 ಭಾನುವಾರದಂದು ಕಾಲೇಜಿನ ಆವರಣದಲ್ಲಿ ನಡೆಯಲಿದೆ. ಅಂದು 2025-26ನೇ ಶೈಕ್ಷಣಿಕ ವರ್ಷದಲ್ಲಿ ಅಂತಿಮ ವರ್ಷದ ಬಿ. ಇ. ಮತ್ತು ಎಮ್. ಬಿ. ಎ. ಪದವಿ ಪೂರೈಸಿದ ಅರ್ಹ ಪದವೀಧರರಿಗೆ ಪದವಿ ಪ್ರಮಾಣ ಪತ್ರ ಹಾಗೂ ಪ್ರತೀ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಗಳಿಸಿದವರಿಗೆ ಚಿನ್ನದ ಪದಕವನ್ನು ನೀಡಲಾಗುವುದು. ಇದಲ್ಲದೆ 2025-26 ನೇ ಸಾಲಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ […]

ಮಣಿಪಾಲ: ಈಶ್ವರ ನಗರದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ

ಉಡುಪಿ: ಉಡುಪಿ ನಗರಸಭೆಯ ಆಶ್ರಯದಲ್ಲಿ ಹಾಗೂ ಈಶ್ವರ ನಗರ ರೆಸಿಡೆನ್ಸ್ ವೆಲ್ಫೇರ್ ಅಸೋಸಿಯೇಷನ್, ರಾಷ್ಟ್ರೀಯ ಸ್ವಯಂಸೇವಕ ಸಂಘ ಈಶ್ವರ ನಗರ, ವಾರ್ಡ್ ಸಮಿತಿ ಈಶ್ವರ ನಗರ, ಉಡುಪಿ ನಗರಸಭೆಯ ಸಮುದಾಯ ಸಂಘಟನೆ ಇವರ ಸಹಭಾಗಿತ್ವದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸೇವಾ ಸಂಕಲ್ಪ ಅಭಿಯಾನದಡಿಯಲ್ಲಿ ನಿಕಟ ಪೂರ್ವ ನಗರಸಭಾ ಸದಸ್ಯ ಮಂಜುನಾಥ ಮಣಿಪಾಲರವರ ಸಂಯೋಜನೆಯಲ್ಲಿ ಈಶ್ವರ ನಗರದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲಾಯಿತು. ಮಣಿಪಾಲ ಬಬ್ಬುಸ್ವಾಮಿ ದೈವಸ್ಥಾನದ ಆಡಳಿತ ಮೊಕ್ತೆಸರ ಶ್ರೀನಿವಾಸ್ ಪೂಜಾರಿ, ಸಂಘಟನೆಗಳ ಪ್ರಮುಖರಾದ […]

ಆಳ್ವಾಸ್ ಆನಂದಮಯ ಆರೋಗ್ಯಧಾಮದಲ್ಲಿ ತ್ರ‍ಯಾ ಓ3 ಓಝೋನ್ ಥೆರಪಿ’ ಘಟಕ ಆರಂಭ

ಮೂಡುಬಿದಿರೆ: ಮಿಜಾರಿನ ಶೋಭಾವನ ಆವರಣದಲ್ಲಿರುವ ಆಳ್ವಾಸ್ ಆನಂದಮಯ ಆರೋಗ್ಯಧಾಮದಲ್ಲಿ ‘ತ್ರಯಾ ಓ3 ಓಝೋನ್ ಥೆರಪಿ’ ನೂತನ ಘಟಕವನ್ನು ಬುಧವಾರ ಉದ್ಘಾಟಿಸಲಾಯಿತು. ಇದರೊಂದಿಗೆ ಆರೋಗ್ಯಧಾಮದ ಸಮಗ್ರ ಆರೋಗ್ಯ ಹಾಗೂ ಪ್ರಕೃತಿ ಚಿಕಿತ್ಸಾ ಸೇವೆಗಳ ವ್ಯಾಪ್ತಿಗೆ ಮತ್ತೊಂದು ಚಿಕಿತ್ಸಾ ವಿಧಾನ ಸೇರ್ಪಡೆಯಾಗಿದೆ.ನೂತನ ಘಟಕದಲ್ಲಿ ರೋಗಿಯ ಆರೋಗ್ಯ ಸ್ಥಿತಿ ಹಾಗೂ ಚಿಕಿತ್ಸೆಯ ಅಗತ್ಯಕ್ಕೆ ಅನುಗುಣವಾಗಿ ಓಝೋನೇಟೆಡ್ ನೀರು, ಓಝೋನ್ ಬ್ಯಾಗಿಂಗ್, ಸ್ಕಾಲ್ಪ್ ಬ್ಯಾಗಿಂಗ್, ಸಂಪೂರ್ಣ ದೇಹ ಬ್ಯಾಗಿಂಗ್, ಓಝೋನ್ ಫನಲಿಂಗ್, ಓಝೋನ್ ಎನಿಮಾ, ಕಿವಿ ಮತ್ತು ರೆಕ್ಟಲ್ ಇನ್‌ಸಫ್ಲೇಷನ್, ಯೋನಿ ಇನ್‌ಸಫ್ಲೇಷನ್, […]

ಮಣಿಪಾಲ ಹಾಸ್ಪಿಸ್‌ನಲ್ಲಿ 700ಕ್ಕೂ ಅಧಿಕ ರೋಗಿಗಳಿಗೆ ಉಚಿತ ಆರೈಕೆ

ಡುಪಿ: ಗಂಭೀರ ಹಾಗೂ ಮಾರಣಾಂತಿಕ ಕಾಯಿಲೆಯಿಂದ ಜೀವನದ ಕೊನೆಯ ಹಂತದಲ್ಲಿರುವವರಿಗೆ ನೋವುರಹಿತ ಹಾಗೂ ಗೌರವಯುತ ಅಂತಿಮ ದಿನಗಳನ್ನು ಕಳೆಯಲು ಮಾಹೆ ವಿಶ್ವವಿದ್ಯಾಲಯದ ಮಣಿಪಾಲ ಹಾಸ್ಪಿಸ್ ಆ್ಯಂಡ್ ರೆಸ್ಟೆಟ್ ಸೆಂಟರ್ (ಎಂಎಚ್‌ಆರ್‌ಸಿ) ಉಚಿತವಾಗಿ ಉತ್ಕೃಷ್ಟ ಉಪಶಾಮಕ ಆರೈಕೆ ಸೇವೆ ಒದಗಿಸುತ್ತಿದೆ. ಕಳೆದ ಒಂದು ವರ್ಷದಲ್ಲಿ 700ಕ್ಕೂ ಅಧಿಕ ರೋಗಿಗಳಿಗೆ ಉಚಿತ ಆರೈಕೆ ನೀಡಲಾಗಿದ್ದು, 1,300ಕ್ಕೂ ಹೆಚ್ಚು ಕುಟುಂಬದ ಆರೈಕೆದಾರರಿಗೆ ಬೆಂಬಲ ಒದಗಿಸಲಾಗಿದೆ ಎಂದು ಮಾಹೆ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಹೇಳಿದರು.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, […]

ಉಡುಪಿಯಲ್ಲಿ ವಿಕಸಿತ ಭಾರತ ಸಂಕಲ್ಪ ಸಭೆ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ಸಾಂವಿಧಾನಿಕ ಹುದ್ದೆಯಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿಯಿಂದ ಬುಧವಾರ ನಗರದ ಪುರಭವನದಲ್ಲಿ ‘ವಿಕಸಿತ ಭಾರತ ಸಂಕಲ್ಪ ಸಭೆ’ ಹಾಗೂ ‘ಸೇವಾ ಜ್ಯೋತಿ ಯಾತ್ರೆ’ ಕಾರ್ಯಕ್ರಮ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಜ್ಯೋತಿ ಬೆಳಗಿಸಿದ ಕಾರ್ಯಕ್ರಮದ ನೇರ ಪ್ರಸಾರವನ್ನು ಜಿಲ್ಲಾ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ವೀಕ್ಷಿಸಿದರು. ಬಳಿಕ ಪಕ್ಷದ ಪ್ರಮುಖರು ಸೇವಾ ಜ್ಯೋತಿ ಯಾತ್ರೆಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಉಡುಪಿ ಚಿಕ್ಕಮಗಳೂರು ಸಂಸದ ಕೋಟ […]