ಕಿದಿಯೂರ್ಸ್ ಲಾರ್ಡ್ಸ್ ಇಂಟರ್‌ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್ ವತಿಯಿಂದ ಮುದ್ದು ಕೃಷ್ಣ ಸ್ಪರ್ಧೆ 2026: ವಿಜೇತರಿಗೆ ಕಾದಿದೆ ಭರ್ಜರಿ ಬಹುಮಾನಗಳು

ಉಡುಪಿ: ಕಿದಿಯೂರುಸ್ ಲಾರ್ಡ್ಸ್ ಇಂಟರ್‌ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್ ವತಿಯಿಂದ ‘ಮುದ್ದು ಕೃಷ್ಣ ಸ್ಪರ್ಧೆ 2026’ ಆಯೋಜಿಸಲಾಗಿದೆ. Yad Bhavam Tad Bhavati’ ಎಂಬ ಧ್ಯೇಯವಾಕ್ಯದೊಂದಿಗೆ ಪುಟಾಣಿಗಳ ಪ್ರತಿಭೆ ಹಾಗೂ ಸಂಭ್ರಮಕ್ಕೆ ವೇದಿಕೆ ಕಲ್ಪಿಸಲು ಶಾಲೆ ಮುಂದಾಗಿದೆ.  ಪುಟಾಣಿ ಕೃಷ್ಣಪ್ರೇಮಿಗಳಿಗಾಗಿ ವಿಶೇಷವಾಗಿ ಆಯೋಜಿಸಿರುವ ಈ ವರ್ಣರಂಜಿತ ಕಾರ್ಯಕ್ರಮವು ಸೆಪ್ಟೆಂಬರ್ 2 ರಂದು ಬೆಳಗ್ಗೆ 10 ಗಂಟೆಯಿಂದ ನಡೆಯಲಿದೆ.

ಉಡುಪಿಯ ನಿಟ್ಟೂರಿನ ಜ್ಞಾನಕಾಶಿ ಕ್ಯಾಂಪಸ್‌ನಲ್ಲಿರುವ ಲಾರ್ಡ್ಸ್ ಇಂಟರ್‌ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್‌ನ ಜ್ಞಾನ ವೇದಿಕೆಯಲ್ಲಿ ಸ್ಪರ್ಧೆ ನಡೆಯಲಿದೆ.

2ರಿಂದ 5 ವರ್ಷದ ಮಕ್ಕಳಿಗೆ ಅವಕಾಶ

2ರಿಂದ 5 ವರ್ಷದೊಳಗಿನ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಶ್ರೀಕೃಷ್ಣನ ವೇಷದಲ್ಲಿ ಸಿಂಗರಿಸಿ ಸ್ಪರ್ಧೆಗೆ ಕರೆತರಬಹುದು.

ವಿಜೇತರಿಗೆ ಭರ್ಜರಿ ನಗದು ಬಹುಮಾನ

ಪ್ರಥಮ ಬಹುಮಾನ – ₹25,000
ದ್ವಿತೀಯ ಬಹುಮಾನ – ₹20,000
🥉 ತೃತೀಯ ಬಹುಮಾನ – ₹15,000

ಸ್ಪರ್ಧೆಗೆ ಎಲ್ಲರಿಗೂ ಮುಕ್ತವಾಗಿ ನೋಂದಣಿ ಅವಕಾಶ ಕಲ್ಪಿಸಲಾಗಿದೆ. ನೋಂದಣಿಯನ್ನು ಶಾಲೆಯಲ್ಲಿಯೇ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ 7338285811, 7795648500, 7795648501 ಸಂಪರ್ಕಿಸಬಹುದು. ‘