ಹಿರಿಯಡಕ: ಶ್ರೀರಾಮ ಪ್ರಾಣ ಪ್ರತಿಷ್ಠೆ ಪ್ರಯುಕ್ತ ಜ.15 ರಿಂದ ಶ್ರೀರಾಮ ಕಥಾ ಸಪ್ತಾಹ ಪ್ರವಚನ ಸತ್ಸಂಗ

ಹಿರಿಯಡಕ: ಅಕ್ಷಯಾಮೃತ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ (ನಿ.) ಹಿರಿಯಡ್ಕ ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ , ಶ್ರೀ ವೀರಭದ್ರ ದೇವಸ್ಥಾನ ಕರಸೇವಕರು ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಇವರ ಜಂಟಿ ಆಶ್ರಯದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರ ಶ್ರೀ ರಾಮನ ಪ್ರಾಣ ಪ್ರತಿಷ್ಠೆಯ ಪರ್ವಕಾಲದಲ್ಲಿ ಡಾ|ಶಾಂತರಾಮ ಪ್ರಭು ನಿಟ್ಟೂರು ಹಿರಿಯ ವಿದ್ವಾಂಸರು ಹಾಗೂ ಸಂಸ್ಕೃತ ಕೋವಿದರು ಇವರಿಂದ ಶ್ರೀರಾಮ ಕಥಾ ಸಪ್ತಾಹ ಶ್ರೀಮದ್ವಾಲ್ಮೀಕಿ ರಾಮಾಯಣ ಪ್ರವಚನ ಸತ್ಸಂಗವು ಜ15 ರಿಂದ 21ರ ವರೆಗೆ […]
ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ: ಮೂವರು ವಶಕ್ಕೆ

ಉಡುಪಿ: ಬ್ರಹ್ಮಗಿರಿ ಜಂಕ್ಷನ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಎಸ್. ಗೌತಮ್ (24), ಕುಕ್ಕಿಕಟ್ಟೆ ಮೀನು ಮಾರುಕಟ್ಟೆಯ ಬಳಿ ಗೌರವ ಜೆ. (26), ಶಾಂತಿನಗರದ ಬಳಿ ಜಗದೀಶ್ (31)ನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಫಾರೆನ್ಸಿಕ್ ವರದಿಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದೆ. ಉಡುಪಿ ಸೆನ್ ಹಾಗೂ ಮಣಿಪಾಲ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಜನಕಪುರಿಯಲ್ಲಿ 101 ಕ್ವಿಂಟಾಲ್ ನ 11 ಬಗೆಯ ಧಾನ್ಯಗಳಿಂದ 11,000 ಚದರ ಅಡಿಯಲ್ಲಿ ಮೂಡಿಬಂತು ಜಾನಕಿ-ರಾಮರ ವಿವಾಹ ಚಿತ್ರ!!

ಕಠ್ಮಂಡು: ನೇಪಾಳ ಮತ್ತು ಭಾರತದಿಂದ ಬಂದ ಹತ್ತು ನುರಿತ ಕಲಾವಿದರ ಗುಂಪು ನೇಪಾಳದ ಜನಕ್‌ಪುರದಲ್ಲಿ ಭಗವಾನ್ ರಾಮ ಮತ್ತು ಸೀತೆಯ ಭಾವಚಿತ್ರವನ್ನು ಅನಾವರಣಗೊಳಿಸುವ ಮೂಲಕ ವಿಶ್ವದಾಖಲೆಯೊಂದನ್ನು ಬರೆದಿದೆ. ತ್ರೇತಾಯುಗದಲ್ಲಿ ರಾಮ ಸೀತೆಯರ ದೈವಿಕ ವಿವಾಹ ಸಮಾರಂಭವನ್ನು ನೆನಪಿಸುವ ಈ ಮಹಾ ಮೇರುಕೃತಿಯು 11,000 ಚದರ ಅಡಿ ವಿಸ್ತಾರವಾದ ಮೈದಾನ ಪ್ರದೇಶವನ್ನು ಅಲಂಕರಿಸಿದೆ. ವೈವಿಧ್ಯಮಯ ಧಾನ್ಯಗಳಿಂದ ನಿಖರವಾಗಿ ರಚಿಸಲಾದ ಬೃಹತ್ ಭಾವಚಿತ್ರವು 120 ಅಡಿ ಉದ್ದ ಮತ್ತು 91.5 ಅಡಿ ಅಗಲವನ್ನು ವ್ಯಾಪಿಸಿದೆ. ಈ ವಿಸ್ಮಯ-ಸ್ಫೂರ್ತಿದಾಯಕ ಸೃಷ್ಟಿಗೆ ಜೀವ […]
ಸ್ನೇಹಾಲಯ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಕ್ರಿಸ್ ಮಸ್ ಹಬ್ಬದ ಸಂಭ್ರಮ

ಮಂಜೇಶ್ವರ: ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ವ್ಯಕ್ತಿಗಳನ್ನು ನೋಡಿಕೊಳ್ಳುವ ಪ್ರಮುಖ ಸಂಸ್ಥೆಯಾದ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರವು ಡಿ. 21 ರಂದು ತನ್ನ ನಿವಾಸಿಗಳಿಗಾಗಿ ಕ್ರಿಸ್‌ಮಸ್ ಆಚರಣೆಯನ್ನು ಏರ್ಪಡಿಸಿತ್ತು. ನಿವಾಸಿಗಳು ಮತ್ತು ಸಿಬ್ಬಂದಿಗಳು ವರ್ಣರಂಜಿತ ಹಬ್ಬದ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಕ್ರಿಸ್ಮಸ್ ಹಬ್ಬಗಳು ನಮ್ಮ ನಿವಾಸಿಗಳ ಭಾವನಾತ್ಮಕ ಯೋಗಕ್ಷೇಮವನ್ನು ಬಲಪಡಿಸಲು ಅವಕಾಶವನ್ನು ನೀಡುತ್ತವೆ, ಇವು ತಮ್ಮ ಜೀವನವನ್ನು ನವೀಕೃತ ಭರವಸೆಯೊಂದಿಗೆ ಪುನರ್ನಿರ್ಮಿಸಲು ಸಹಾಯ ಮಾಡುತ್ತವೆ ಮತ್ತುಇದು ನಮಗೆ ಸಂತೋಷವನ್ನು ನೀಡುತ್ತದೆ ಎಂದು ಕೇಂದ್ರದ ನಿರ್ದೇಶಕ ಜೋಸೆಫ್ ಕ್ರಾಸ್ತಾ ಹೇಳಿದರು. ಸಿಬ್ಬಂದಿ […]
ಕಲ್ಯಾಣಪುರ ವೆಂಕಟರಮಣ ದೇವಸ್ಥಾನದಲ್ಲಿ ಗೀತಾ ಜಯಂತಿ; ಮುಕ್ಕೋಟಿ ದ್ವಾದಶೀ ಧಾರ್ಮಿಕ ಆಚರಣೆ

ಕಲ್ಯಾಣಪುರ: ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 95 ನೇ ಭಜನಾ ಸಪ್ತಾಹ ಹಾಗೂ ಗೀತಾ ಜಯಂತಿ ಅಂಗವಾಗಿ ಶನಿವಾರ ರಾತ್ರಿ ವಿಶೇಷ ಹೂಗಳಿಂದ ಅಲಂಕೃತ ಪುಷ್ಪಗಳಿಂದ ರಥ ರಚನೆಯನ್ನು ದೇವಳದ ಪ್ರಧಾನ ಅರ್ಚಕ ಜಯದೇವ ಭಟ್ ಹಾಗೂ ಸ್ವಯಂ ಸೇವಕರು ನಿರ್ಮಿಸಿದರು. , ಜಿ ಎಸ್ ಬಿ ಸಭಾ ಸದಸ್ಯರು ಸಹಕರಿಸಿದರು. ಊರಿನ ಮುಖ್ಯ ಬೀದಿಯಲ್ಲಿ ಶ್ರೀ ದೇವರ ಪೇಟೆ ಉತ್ಸವ ನಡೆಯಿತು. ಆದಿತ್ಯವಾರ ಮುಕ್ಕೋಟಿ ದ್ವಾದಶೀ ಅಂಗವಾಗಿ ಮುಂಜಾನೆ ಶ್ರೀ ದೇವರ ಪಲ್ಲಕ್ಕಿಯೊಂದಿಗೆ ಸ್ವರ್ಣ ನದಿಗೆ ತೆರಳಿ […]