ಕಲ್ಯಾಣಪುರ ವೆಂಕಟರಮಣ ದೇವಸ್ಥಾನದಲ್ಲಿ ಗೀತಾ ಜಯಂತಿ; ಮುಕ್ಕೋಟಿ ದ್ವಾದಶೀ ಧಾರ್ಮಿಕ ಆಚರಣೆ

ಕಲ್ಯಾಣಪುರ: ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 95 ನೇ ಭಜನಾ ಸಪ್ತಾಹ ಹಾಗೂ ಗೀತಾ ಜಯಂತಿ ಅಂಗವಾಗಿ ಶನಿವಾರ ರಾತ್ರಿ ವಿಶೇಷ ಹೂಗಳಿಂದ ಅಲಂಕೃತ ಪುಷ್ಪಗಳಿಂದ ರಥ ರಚನೆಯನ್ನು ದೇವಳದ ಪ್ರಧಾನ ಅರ್ಚಕ ಜಯದೇವ ಭಟ್ ಹಾಗೂ ಸ್ವಯಂ ಸೇವಕರು ನಿರ್ಮಿಸಿದರು. , ಜಿ ಎಸ್ ಬಿ ಸಭಾ ಸದಸ್ಯರು ಸಹಕರಿಸಿದರು. ಊರಿನ ಮುಖ್ಯ ಬೀದಿಯಲ್ಲಿ ಶ್ರೀ ದೇವರ ಪೇಟೆ ಉತ್ಸವ ನಡೆಯಿತು.

ಆದಿತ್ಯವಾರ ಮುಕ್ಕೋಟಿ ದ್ವಾದಶೀ ಅಂಗವಾಗಿ ಮುಂಜಾನೆ ಶ್ರೀ ದೇವರ ಪಲ್ಲಕ್ಕಿಯೊಂದಿಗೆ ಸ್ವರ್ಣ ನದಿಗೆ ತೆರಳಿ ಶ್ರೀ ನವನೀತ ಗೋಪಾಲ ಕೃಷ್ಣ ದೇವರೊಂದಿಗೆ ಭಕ್ತರೂ ತೀರ್ಥ ಸ್ಥಾನ ಮಾಡಿದರು. ದೇವಳದ ಅರ್ಚಕರಾದ ಜಯದೇವ ಭಟ್ , ಮಹೇಶ್ ಭಟ್ , ಗಣೇಶ ಭಟ್ , ಲಕ್ಷ್ಮೀಶ್ ಭಟ್ , ರಾಮಚಂದ್ರ ಭಟ್, ಆಡಳಿತ ಮೊಕ್ತೇಸರ ಅನಂತ ಪದ್ಮನಾಭ ಕಿಣಿ, ಭಜನಾ ಸಮಿತಿಯ ಅಧ್ಯಕ್ಷ ಕೆ. ತುಳಸೀದಾಸ್ ಕಿಣೆ ಹಾಗೂ ಭಜನಾ ಸಪ್ತಾಹ ಸಮಿತಿಯ ಸದಸ್ಯರು, ಆಡಳಿತ ಮಂಡಳಿಯ ಸದಸ್ಯರು, ಜಿ ಎಸ್ ಬಿ ಮಹಿಳಾ ಮಂಡಳಿಯ ಸದಸ್ಯರು ನೂರಾರು ಭಕ್ತರೂ ಉಪಸ್ಥಿತರಿದ್ದರು.