TECH YUVA- K24: ಬಂಟಕಲ್ ಮಧ್ವ ವಾದಿರಾಜ ಕಾಲೇಜಿಗೆ ಸಮಗ್ರ ಚಾಂಪಿಯನ್ ಶಿಪ್ ಪ್ರಶಸ್ತಿ

ಉಡುಪಿ: ಶ್ರೀ ಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಡ್ ಮ್ಯಾನೆಜ್ಮೆಂಟ್ ವಿದ್ಯಾರ್ಥಿಗಳು “TECH YUVA- K24” ನಲ್ಲಿ ಸಮಗ್ರ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಸ್ಪರ್ಧೆಯು ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮಾರ್ಚ್ 26 ಮತ್ತು 27 ರಂದು ನಡೆಯಿತು. ಸ್ಟ್ಯಾಂಡ್ ಅಪ್ ಕಾಮಿಡಿ, ಪ್ರಾಜೆಕ್ಟ್ ಎಕ್ಸ್ ಪೋ, ಟೆಕ್ನಿಕಲ್ ನಲ್ಲಿ ಪ್ರಥಮ ಸ್ಥಾನ, ರಸಪ್ರಶ್ನೆ ಸ್ಪರ್ಧೆ, ಲೈನ್ ಫಾಲೋವರ್ ಮತ್ತು ಫೋಟೋಗ್ರಫಿಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ, ಐಡಿಯೇಷನ್‌ನಲ್ಲಿ ದ್ವಿತೀಯ ಸ್ಥಾನ, ಟೇಬಲ್ ಟೆನ್ನಿಸ್‌ನಲ್ಲಿ […]
ಏಪ್ರಿಲ್ 30 ರ ಒಳಗೆ ಮಕ್ಕಳ ಪಾಲನಾ ಸಂಸ್ಥೆಗಳನ್ನು ನೋಂದಾಯಿಸಿ: ಜಿಲ್ಲಾಧಿಕಾರಿ

ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿರುವ 0-18 ವರ್ಷದೊಳಗಿನ ಪಾಲನೆ ಹಾಗೂ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮಕ್ಕಳ ಪಾಲನಾ ಸಂಸ್ಥೆಗಳು ಕಡ್ಡಾಯವಾಗಿ ಬಾಲನ್ಯಾಯ ಕಾಯ್ದೆ-2015ರಡಿ ನೋಂದಾವಣೆಗೊಂಡಿರಬೇಕು. ಯಾವುದೇ ಮಕ್ಕಳ ಪಾಲನಾ ಸಂಸ್ಥೆಗಳು, ಮಠ, ಮದ್ರಸಾ, ಚರ್ಚ್ಗಳಲ್ಲಿ ಮಕ್ಕಳನ್ನು ದಾಖಲಿಸಿ, ಮಕ್ಕಳ ಪಾಲನಾ ಸಂಸ್ಥೆಗಳನ್ನು ಸರ್ಕಾರದ ನೋಂದಣಿ ಇಲ್ಲದೇ ನಡೆಸುತ್ತಿದ್ದಲ್ಲಿ ಅವುಗಳನ್ನು ಏಪ್ರಿಲ್ 30 ರ ಒಳಗೆ ನೋಂದಾಯಿಸಿಕೊಳ್ಳಬೇಕು. ಅನಾಥ, ಪರಿತ್ಯಕ್ತ, ಪಾಲನೆ, ಪೋಷಣೆ ಹಾಗೂ ರಕ್ಷಣೆಗೆ ಅಗತ್ಯವಿರುವ ಮಕ್ಕಳನ್ನು ಹೊಂದಿದ್ದು, ಔಪಚಾರಿಕ ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳನ್ನು ಹೊಂದಿರದೇ ಬಾಲನ್ಯಾಯ […]
ಬೆಳ್ತಂಗಡಿ: ರಕ್ಷಿತ್ ಶಿವರಾಂ ಸೋದರ ಮಾವ ಅಪಘಾತದಲ್ಲಿ ನಿಧನ

ಬೆಳ್ತಂಗಡಿ: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಕ್ಷಿತ್ ಶಿವರಾಂ ಸೋದರ ಮಾವ ಸ್ಕೂಟರ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಶೇಖರ್ ಬಂಗೇರ ಹೇರಾಜೆ (65)ಮೃತರಾದವರು. ಗುರುವಾರ ರಾತ್ರಿ ಪಟ್ಟಣದ ಸಂತೆಕಟ್ಟೆ ಬಸ್ ನಿಲ್ದಾಣದ ಮುಂಭಾಗದ ಹೋಟೆಲ್‌ನಿಂದ ಪಾರ್ಸಲ್ ಖರೀದಿಸಿದ್ದ ಅವರು, ರಸ್ತೆ ದಾಟುವಾಗ ಸ್ಕೂಟರ್ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಕೊನೆಯುಸಿರೆಳೆದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಶೇಖರ್ ಬಂಗೇರ ಹೇರಾಜೆ ವಿಜಯ ಬ್ಯಾಂಕಿನ […]
ಉಡುಪಿ: ಮೊದಲ ದಿನ 1 ನಾಮಪತ್ರ ಸಲ್ಲಿಕೆ

ಉಡುಪಿ: ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆಯ ಮೊದಲ ದಿನವಾದ ಇಂದು ಬಹುಜನ ಸಮಾಜ ಪಾರ್ಟಿಯ ಕೆ.ಟಿ ರಾಧಾಕೃಷ್ಣ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಲು ಏಪ್ರಿಲ್ 4 ಕೊನೆಯ ದಿನಾಂಕವಾಗಿದ್ದು, ಏಪ್ರಿಲ್ 5 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 8 ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದೆ.
ಯುವ ಸಬಲೀಕರಣ ಇಲಾಖೆ ವತಿಯಿಂದ ಮಕ್ಕಳಿಗಾಗಿ ಬೇಸಿಗೆ ತರಬೇತಿ ಶಿಬಿರ

ಉಡುಪಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ 5 ವರ್ಷ ಮೇಲ್ಪಟ್ಟವರಿಗೆ ಏಪ್ರಿಲ್ 1 ರಿಂದ 21 ರ ವರೆಗೆ ಹಾಗೂ ಏಪ್ರಿಲ್ 22 ರಿಂದ ಮೇ 12 ರ ವರೆಗೆ ಎರಡು ಹಂತದಲ್ಲಿ ಈಜು, ಶಟ್ಲ್ ಬ್ಯಾಡ್ಮಿಂಟನ್, ಲಾನ್ ಟೆನ್ನಿಸ್, ಅಥ್ಲೆಟಿಕ್ಸ್ ಹಾಗೂ ಬಾಸ್ಕೆಟ್ ಬಾಲ್ ಕ್ರೀಡಾ ವಿಭಾಗದಲ್ಲಿ ಬೇಸಿಗೆ ತರಬೇತಿ ಶಿಬಿರಗಳನ್ನು ಆಯೋಜಿಸಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ […]