ಶೇಕ್ಸ್‌ಪಿಯರ್ ನಾಟಕಗಳಲ್ಲಿ ನೈತಿಕತೆ ಮತ್ತು ರಾಜಕೀಯ ನೈಜ ಜಗತ್ತಿನ ಚಿತ್ರಣವಿದೆ: ಪ್ರೊ.ಎನ್. ಮನು ಚಕ್ರವರ್ತಿ

ಮಣಿಪಾಲ: ಶೇಕ್ಸ್‌ಪಿಯರ್ ತನ್ನ ದುರಂತ ನಾಟಕಗಳಲ್ಲಿ ತನ್ನ ಕಾಲದ ಸಾಮಾಜಿಕ ಜೀವನದಲ್ಲಿ ನೈತಿಕತೆ ಹೇಗೆ ಕ್ರಮೇಣ ಮಾಯವಾಗ ತೊಡಗಿತು ಎಂಬುದನ್ನು ತೋರಿಸಲು ಪ್ರಯತ್ನಿಸಿದ್ದಾನೆ. ನೈತಿಕತೆ ಮತ್ತು ರಾಜಕೀಯ ನೈಜ ಜಗತ್ತಿನಲ್ಲಿ ಎರಡು ಪ್ರತ್ಯೇಕ ಭಾಗಗಳು ಎಂದು ಅವನು ಚಿತ್ರಿಸಿದ್ದಾನೆ ಎಂದು ಖ್ಯಾತ ಸಂಸ್ಕೃತಿ ವಿಮರ್ಶಕ ಪ್ರೊ.ಎನ್. ಮನು ಚಕ್ರವರ್ತಿ ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್‌ ಆಯೋಜಿಸಿದ್ದ “ಶೇಕ್ಸ್‌ಪಿಯರ್ ಜಗತ್ತು” ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಶೇಕ್ಸ್‌ಪಿಯರ್ ತನ್ನ ನಾಟಕಗಳಲ್ಲಿ ಒಳಸಂಚುಗಳು, […]

ಕಾರ್ಕಳ ತಹಶೀಲ್ದಾರರ ಗ್ರಾಮ ವಾಸ್ತವ್ಯ ಮುಂದೂಡಿಕೆ

ಉಡುಪಿ: ಕಾರ್ಕಳ ತಾಲೂಕು ಇರ್ವತ್ತೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನವೆಂಬರ್ 19 ರಂದು ಆಯೋಜಿಸಲಾಗಿದ್ದ ಕಾರ್ಕಳ ತಹಶೀಲ್ದಾರರ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕೋಸ್ಟಲ್ ಕಿಚನ್ ಫ್ಯಾಮಿಲಿ ರೆಸ್ಟೋರೆಂಟ್ : ಕೋಸ್ಟಲ್ ಕಿಚನ್ ವೆಜ್ ಮತ್ತು ನಾನ್ ವೆಜ್ ಫ್ಯಾಮಿಲಿ ರೆಸ್ಟೋರೆಂಟ್

ಉಡುಪಿ: ಕರಾವಳಿಗರ ಆಹಾರ ಅಭಿರುಚಿಗಳಿಗೆ ಅನುಗುಣವಾದ ಕೋಸ್ಟಲ್ ಕಿಚನ್ ವೆಜ್ ಮತ್ತು ನಾನ್ ವೆಜ್ ಫ್ಯಾಮಿಲಿ ರೆಸ್ಟೋರೆಂಟ್ ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿ ಕಾರ್ಯಾರಂಭ ಮಾಡುತ್ತಿದ್ದು, ಶುಚಿ ರುಚಿಯಾದ ಸಮುದ್ರಾಹಾರ, ಚೈನೀಸ್, ತಂದೂರಿ, ಮೀನು ಊಟ, ಜ್ಯೂಸ್ ಮತ್ತು ಐಸ್ ಕ್ರೀಮ್ ಲಭ್ಯವಿದೆ. ಮೆನು ಡೆಸರ್ಟ್ ಐಸ್ ಕ್ರೀಮ್ ಸಿಂಗಲ್ / ಡಬಲ್ ವಿಶೇಷ ಕೋಸ್ಟಲ್ ಕಿಚನ್ ಐಸ್ ಕ್ರೀಮ್ ವಿಶೇಷ ಕೋಸ್ಟಲ್ ಕಿಚನ್ ಶೇಕ್ ಜ್ಯೂಸ್ ಮತ್ತು ಮಿಲ್ಕ್‌ಶೇಕ್‌ಗಳು ಮಿಲ್ಕ್ ಶೇಕ್ ಮಾಕ್ ಟೇಲ್ಸ್ […]

ಸಾಲಿಗ್ರಾಮ: ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರಕ್ಕೆ 50ರ ಸಂಭ್ರಮ; ‘ಯಕ್ಷ ಸಪ್ತೋತ್ಸವ’ ಕಾರ್ಯಕ್ರಮ

ಸಾಲಿಗ್ರಾಮ: ಯಕ್ಷಗಾನದಂತಹ ಕಲಾಪ್ರಕಾರದ ಉಳಿವು ಹಾಗೂ ಬೆಳವಣಿಗೆ ದೃಷ್ಟಿಯಿಂದ ಮಕ್ಕಳನ್ನು ಈ ಕಲೆಯಲ್ಲಿ ತೊಡಗಿಸಿಕೊಂಡು ಮುನ್ನಡೆಯುವುದು ಅತೀ ಆವಶ್ಯಕವಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಮಂಗಳವಾರ ಗುಂಡ್ಮಿ ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಸಂಸ್ಥೆಯ ಐವತ್ತರ ಸಂಭ್ರಮಾಚರಣೆ ಪ್ರಯುಕ್ತ ಹಮ್ಮಿಕೊಂಡ ‘ಯಕ್ಷ ಸಪ್ತೋತ್ಸವ’ ಕಾರ್ಯಕ್ರಮದಲ್ಲಿ ಮೂರನೇ ದಿನದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೃತ್ಯ, ಹಾಡುಗಾರಿಕೆ, ಅಭಿನಯ, ಮಾತು, ವೇಷಭೂಷಣ ಮೊದಲಾದ ಕಲೆಯಿಂದ […]

ಶಾಲಾ-ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ನೆಚ್ಚಿನ ಆಯ್ಕೆ – ಪಯಣ ಟ್ರಾವೆಲ್ಸ್

ಉಡುಪಿ: ಕಳೆದ 13 ವರ್ಷಳಿಂದ ಪ್ರವಾಸೋಧ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿಕೊಂಡು ಬಂದಿರುವ ಉಡುಪಿಯ ಪ್ರತಿಷ್ಠಿತ ಟ್ರಾವೆಲ್ ಸಂಸ್ಥೆ ಇದೀಗ ಶಾಲಾ-ಕಾಲೇಜು ಪ್ರವಾಸಗಳನ್ನು ಆಯೋಜಿಸುತ್ತಿದೆ. ಅತ್ಯಂತ ಮಿತ ದರದಲ್ಲಿ ಹಾಗೂ ಸುರಕ್ಷಿತವಾಗಿ ಶಾಲಾ ಮಕ್ಕಳ ಪ್ರವಾಸಗಳನ್ನು ಆಯೋಜನೆ ಮಾಡಿ ರಾಜ್ಯದ ಹಲವು ಶಾಲಾ-ಕಾಲೇಜುಗಳ ಶಿಕ್ಷಕ ಹಾಗೂ ಆಡಳಿತ ವರ್ಗದ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮೈಸೂರು,ಮಡಿಕೇರಿ, ಜಿ.ಆರ್.ಎಸ್, ವಂಡರ್ಲಾ, ಬಾದಾಮಿ, ಹಂಪಿ, ಐಹೋಳೆ, ಹೈದರಾಬಾದ್, ಕೊಚ್ಚಿನ್, ಕನ್ಯಾಕುಮಾರಿ, ಅಜಂತಾ-ಎಲ್ಲೋರಾ ಮಾತ್ರವಲ್ಲದೆ ಉತ್ತರ ಭಾರತದ ಶೈಕ್ಷಣಿಕ ಪ್ರವಾಸಗಳನ್ನು ಉತ್ತಮ […]