ಎಕ್ಸಿಟ್ ಪೋಲ್, ಅಭಿಪ್ರಾಯ ಸಂಗ್ರಹಣೆಗಿಲ್ಲ ಅವಕಾಶ: ಚುನಾವಣಾ ಆಯೋಗ ನಿರ್ದೇಶನ

ನವದೆಹಲಿ: ಲೋಕಸಭೆ ಹಾಗೂ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಏ.19ರ ಬೆಳಿಗ್ಗೆ 7 ರಿಂದ ಜೂ.1ರ ಸಂಜೆ 6.30ರವರೆಗೆ ಯಾವುದೇ ಚುನಾವಣೋತ್ತರ ಸಮೀಕ್ಷೆ(Exit Polls) ನಡೆಸುವುದಾಗಲಿ, ಪ್ರಕಟಿಸುವುದಾಗಲಿ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ಆದೇಶ ನೀಡಿದೆ. ಅಭಿಪ್ರಾಯ ಸಂಗ್ರಹಗಳು, ಚುನಾವಣಾ ಸಮೀಕ್ಷೆ ಫಲಿತಾಂಶ ಸೇರಿದಂತೆ ಯಾವುದೇ ಚುನಾವಣೆ ಸಂಬಂಧಿ ಮಾಹಿತಿಗಳನ್ನು ಚುನಾವಣೆ ಮುಗಿಯುವವರೆಗೆ ವಿದ್ಯುನ್ಮಾನ ಮಾಧ್ಯಮಗಳಲ್ಲಿನ ಪ್ರಸಾರಕ್ಕೆ ಜನಪ್ರತಿನಿಧಿಗಳ ಕಾಯ್ದೆ ಅನುಸಾರ ನಿರ್ಬಂಧಿಸಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಕಾಡುಬೆಟ್ಟು ಶನೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ

ಉಡುಪಿ: ಅಬ್ಬಗ-ದಾರಗ, ವೀರಭದ್ರ ಮತ್ತು ಶನೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ಶನಿವಾರ ದೈವಗಳ ದಿವ್ಯ ಸನ್ನಿಧಿಯಾದ ವೀರಭದ್ರ ಸಪರಿವಾರ, ಶನೈಶ್ವರ ಹಾಗೂ ನಾಗ ಸನ್ನಿಧಿಯಲ್ಲಿವಾರ್ಷಿಕ ವರ್ಧಂತಿ ಮಹೋತ್ಸವದ ದೇವರಿಗೆ ಕಲಶಾಭಿಷೇಕ, ಗಣ ಯಾಗ, ಸಾನಿಧ್ಯ ಹವನ, ವಿಶೇಷ ಹೂವಿನ ಅಲಂಕಾರ, ದೀಪಾರಾಧನೆ, ರಂಗ ಪೂಜೆ ಮುಂತಾದ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಕೊರಂಗ್ರಪಾಡಿ ವಿದ್ವಾನ್ ಕೆ.ಪಿ.ಕುಮಾರ್ ಗುರು ತಂತ್ರಿ ಮಾರ್ಗದರ್ಶನದಲ್ಲಿ ಅರ್ಚಕರು ನಡೆಸಿಕೊಟ್ಟರು. ಈ ಸಂದರ್ಭ ಟ್ರಸ್ಟಿನ ಅಧ್ಯಕ್ಷರು, ವಿಶ್ವಸ್ಥ ಮಂಡಳಿಯ ಸದಸ್ಯರು, ನೂರಾರು ಭಕ್ತರೂ ಉಪಸ್ಥಿತರಿದ್ದರು. ಮಹಾ […]
ಏ.7 ರಂದು ಡಾ.ಟಿಎಂ.ಎ ಪೈ ಪಾಲಿಟೆಕ್ನಿಕ್ ಕ್ಯಾಂಪಸ್ ನಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಕರಿಯರ್ ಗೈಡೆನ್ಸ್ ಕಾರ್ಯಕ್ರಮ

ಮಣಿಪಾಲ: ಡಾ.ಟಿಎಂ.ಎ ಪೈ ಪಾಲಿಟೆಕ್ನಿಕ್ ಕ್ಯಾಂಪಸ್ ಹಾಗೂ ಎಂ.ಎಸ್.ಡಿ.ಸಿ ಸಹಯೋಗದೊಂದಿಗೆ 10 ನೇ ತರಗತಿ ವಿದ್ಯಾರ್ಥಿಗಳಿಗಾಗಿ ಕರಿಯರ್ ಗೈಡೆನ್ಸ್ ಕಾರ್ಯಕ್ರಮವು ಈಶ್ವರನಗರದ ಡಾ.ಟಿಎಂ.ಎ ಪೈ ಪಾಲಿಟೆಕ್ನಿಕ್ ಕ್ಯಾಂಪಸ್ ನಲ್ಲಿ ಏ.7 ರಂದು ಬೆಳಿಗ್ಗೆ 9.30 ರಿಂದ 1.30 ರವರೆಗೆ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಎಂ.ಎಸ್.ಡಿ.ಸಿ ಅಧ್ಯಕ್ಷ ಬ್ರಿ.ಡಾ ಸುರ್ಜಿತ್ ಸಿಂಗ್ ಪಾಬ್ಲಾ, ಎಂಐಟಿ ಮಾಜಿ ಸಹ ನಿರ್ದೇಶಕ ಡಾ.ಬಿ.ಎಚ್ ವೆಂಕಟರಾಮ್ ಪೈ, ಮಾಹೆ ಅಂತರಾಷ್ಟ್ರೀಯ ಸಹಯೋಗದ ನಿರ್ದೇಶಕ ಡಾ. ಕರುಣಾಕರ್ ಎ.ಕೋಟೆಗಾರ್ ಭಾಗವಹಿಸಲಿದ್ದಾರೆ. ಪ್ರವೇಶ ಉಚಿತವಾಗಿದ್ದು ಊಟೋಪಚಾರದ […]
ಲೋಕಸಭಾ ಚುನಾವಣೆ: ನೀತಿ ಸಂಹಿತೆ ಉಲ್ಲಂಘನೆ – ನಗದು ವಶ

ಉಡುಪಿ, ಮಾರ್ಚ್ 30: ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ಹಿನ್ನೆಲೆ, ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾ. 29 ರಂದು ಹೆಜಮಾಡಿ ಚೆಕ್‌ಪೋಸ್ಟ್ನಲ್ಲಿ 97,000 ರೂ. ದಾಖಲೆ ರಹಿತ ನಗದನ್ನು ವಶಪಡಿಸಿಕೊಳ್ಳಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಕಾರ್ಕಳ: ಭತ್ತದ ಗದ್ದೆಗೆ ನೀರು ಬಿಡಲು ಹೋದ ವ್ಯಕ್ತಿ ಸಾವು

ಕಾರ್ಕಳ: ಭತ್ತದ ಗದ್ದೆಗೆ ನೀರು ಬಿಡಲು ಹೋದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.ಕಾರ್ಕಳ ನಿವಾಸಿ ರೂಪಾ (49) ಎಂಬವರ ಪತಿ ಸತೀಶ್ (53)ಮೃತಪಟ್ಟ ವ್ಯಕ್ತಿ. ಇವರು ಭತ್ತದ ಗದ್ದೆಗೆ ನೀರು ಬಿಡಲು ಹೋದಾಗ ಅರಂತೋಟು ಎಂಬಲ್ಲಿ ನೀರಿನ ತೋಡಿಗೆ ಹಾಕಿದ ಸೇತುವೆಯಿಂದ ಕಾಲು ಜಾರಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.