ಏ.7 ರಂದು ಡಾ.ಟಿಎಂ.ಎ ಪೈ ಪಾಲಿಟೆಕ್ನಿಕ್ ಕ್ಯಾಂಪಸ್ ನಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಕರಿಯರ್ ಗೈಡೆನ್ಸ್ ಕಾರ್ಯಕ್ರಮ

ಮಣಿಪಾಲ: ಡಾ.ಟಿಎಂ.ಎ ಪೈ ಪಾಲಿಟೆಕ್ನಿಕ್ ಕ್ಯಾಂಪಸ್ ಹಾಗೂ ಎಂ.ಎಸ್.ಡಿ.ಸಿ ಸಹಯೋಗದೊಂದಿಗೆ 10 ನೇ ತರಗತಿ ವಿದ್ಯಾರ್ಥಿಗಳಿಗಾಗಿ ಕರಿಯರ್ ಗೈಡೆನ್ಸ್ ಕಾರ್ಯಕ್ರಮವು ಈಶ್ವರನಗರದ ಡಾ.ಟಿಎಂ.ಎ ಪೈ ಪಾಲಿಟೆಕ್ನಿಕ್ ಕ್ಯಾಂಪಸ್ ನಲ್ಲಿ ಏ.7 ರಂದು ಬೆಳಿಗ್ಗೆ 9.30 ರಿಂದ 1.30 ರವರೆಗೆ ನಡೆಯಲಿದೆ.

ಸಂಪನ್ಮೂಲ ವ್ಯಕ್ತಿಗಳಾಗಿ ಎಂ.ಎಸ್.ಡಿ.ಸಿ ಅಧ್ಯಕ್ಷ ಬ್ರಿ.ಡಾ ಸುರ್ಜಿತ್ ಸಿಂಗ್ ಪಾಬ್ಲಾ, ಎಂಐಟಿ ಮಾಜಿ ಸಹ ನಿರ್ದೇಶಕ ಡಾ.ಬಿ.ಎಚ್ ವೆಂಕಟರಾಮ್ ಪೈ, ಮಾಹೆ ಅಂತರಾಷ್ಟ್ರೀಯ ಸಹಯೋಗದ ನಿರ್ದೇಶಕ ಡಾ. ಕರುಣಾಕರ್ ಎ.ಕೋಟೆಗಾರ್ ಭಾಗವಹಿಸಲಿದ್ದಾರೆ.

ಪ್ರವೇಶ ಉಚಿತವಾಗಿದ್ದು ಊಟೋಪಚಾರದ ವ್ಯವಸ್ಥೆ ಇದೆ.

ಹೆಚ್ಚಿನ ಮಾಹಿತಿಗಾಗಿ: 9844729291/9880414718/9481019816