ಸಾವಯವ ಕೃಷಿಯಲ್ಲಿ ಲಕ್ಷ ಲಕ್ಷ ಆದಾಯ ಗಳಿಸ್ತಾರೆ ಶಿರ್ಲಾಲಿನ ಈ ಪ್ರಗತಿಪರ ಕೃಷಿಕ: ಕೃಷಿ ಆಸಕ್ತರೇ ಒಮ್ಮೆ ಇವರ ಕತೆ ಕೇಳಿ!
ಬೆಳೆಗಳಿಗೆ ಬೆಲೆ ಇಲ್ಲ, ಮಾರುಕಟ್ಟೆ ಇಲ್ಲ ಎನ್ನುವ ನಾನಾ ಕಾರಣಗಳಿಂದ ರೈತರು ಕೃಷಿಯಿಂದ ವಿಮುಖರಾಗುತ್ತಿರುವುದು ಸಹಜ. ಆದರೆ ಬಾಲ್ಯದ ಕೃಷಿ ಒಲವಿನಿಂದ ತೋಟಗಾರಿಕೆ ಮಾಡುತ್ತ, ಮಣ್ಣಿನೊಂದಿಗೆ ಬೆರೆಯುತ್ತ ಬೆಳೆದ ಯಶಸ್ವಿ ಪ್ರಗತಿಪರ ಕೃಷಿಕರೊಬ್ಬರ ಯಶೋಗಾಥೆ ಇಲ್ಲಿದೆ. ಇವರ ಹೆಸರು ಅಶ್ವಥ್ ನಾರಾಯಣ, ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಕೃಷಿಕರಿವರು. ತಮ್ಮ ಮೂರುವರೆ ಎಕರೆ ಜಮೀನಿನಲ್ಲಿ ಹದಿನೆಂಟು ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುವ ಈ ರೈತನ ಸಾಹಸ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ ಎಂದರೆ ನೀವು ನಂಬಲೇಬೇಕು. ♦ಬದುಕು ಕೊಟ್ಟ […]
ಹೂವಿನ ಬೆಳೆಗಾರರಿಗೆ ನಷ್ಠ ಪರಿಹಾರ: ಮೇ 28 ರೊಳಗೆ ಅರ್ಜಿ ಸಲ್ಲಿಸಿ
ಉಡುಪಿ ಮೇ 15: ಲಾಕ್ ಡಾನ್ ನಿಂದ ನಷ್ಟ ಅನುಭವಿಸಿದ ಹೂವಿನ ಬೆಳೆಗಾರರಿಗೆ ರೂ.25000.00 ಪ್ರತಿ ಹೇಕ್ಟರಗೆ, ಗರಿಷ್ಟ 1 ಹೇಕ್ಟರ್ ಮಾರ್ಗಸೂಚಿಯಂತೆ ಸರ್ಕಾರ ಪರಿಹಾರ ಘೋಷಿಸಿದ್ದು, 2019-20 ನೇ ಸಾಲಿನ ಬೆಳೆ ಸಮೀಕ್ಷೆ ಆಧಾರದಲ್ಲಿ ಪರಿಹಾರ ಪಾವತಿ ಮಾಡಲಾಗುವುದು. ರೈತರು ಬೆಳೆದಿರುವ ಬಹು ವಾರ್ಷಿಕ ಪುಷ್ಪ ಬೆಳೆ 2019-20 ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ನಮೂದಿದಾಗಿರುವ ಬಗ್ಗೆ ಹಾಗೂ ವಾರ್ಷಿಕ ಪುಷ್ಪ ಬೆಳೆಗಳು 2019-20 ನೇ ಸಾಲಿನ ಹಿಂಗಾರು ಬೆಳೆ ಸಮೀಕ್ಷೆಯಲ್ಲಿ ನಮೂದಾಗಿರುವ ಬಗ್ಗೆ […]
ಅಡಿಕೆಯಲ್ಲಿ ಸಿಂಗಾರ ಒಣಗುವ ರೋಗ ಮತ್ತು ಕಾಯಿ ಉದುರುವಿಕೆಯನ್ನು ನಿಯಂತ್ರಿಸುವ ಕ್ರಮಗಳು
ಉಡುಪಿ ಮೇ 12: ಅಡಿಕೆಯಲ್ಲಿ ಸಣ್ಣ ಕಾಯಿಗಳು ಉದುರುವುದು ಸಾಮಾನ್ಯವಾಗಿ ಕಾಣುತ್ತಿದ್ದು, ಇದಕ್ಕೆ ಹಲವಾರು ಕಾರಣಗಳನ್ನು ಗುರುತಿಸಲಾಗಿದೆ. 1) ಸರಿಯಾದ ಪ್ರಮಾಣದಲ್ಲಿ ಅಡಿಕೆ ಮರಗಳಿಗೆ ನೀರನ್ನು ಒದಗಿಸುವುದು: ಮಣ್ಣಿನ ಗುಣಧರ್ಮಕ್ಕೆ ಅನುಗುಣವಾಗಿ ಮಾರ್ಚ, ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಪ್ರತಿ ಗಿಡಕ್ಕೆ, 15ರಿಂದ 20 ಲೀಟರ್ ನೀರನ್ನು ಹನಿ ನೀರಾವರಿ ಮುಖಾಂತರ ನೀಡಬೇಕಾಗುತ್ತದೆ. ಬುಡದಲ್ಲಿ ತೇವಾಂಶ ಕಡಿಮೆಯಾದಾಗ ಹರಳುಗಳು ಉದುರುವುದು ಸಾಮಾನ್ಯ. 2) ಸಮಗ್ರ ಪೋಷಕಾಂಶ ಮತ್ತು ಹುಳಿ ಮಣ್ಣು ನಿರ್ವಹಣೆ: ಮಣ್ಣಿನ ಪರೀಕ್ಷೆಯ ಅನುಗುಣವಾಗಿ ಶಿಫಾರಸ್ಸು […]
ಬಿಟ್ಟೆನೆಂದರೂ ಬಿಡದು ಮೊಟ್ಟೆ ಹಣ್ಣಿನ ಮಾಯೆ!: ಆರೋಗ್ಯಕ್ಕೂ ಪೂರಕ ಈ ರುಚಿಕರ ಹಣ್ಣು
ಕೆಲವೊಂದು ಹಣ್ಣುಗಳು ಅಷ್ಟೊಂದು ರುಚಿ ಇಲ್ಲದಿದ್ದರೂ ಮಾರುಕಟ್ಟೆಯ ಬೇಡಿಕೆಯಿಂದಾಗಿಯೋ, ಹಣ್ಣುಗಳ ಅಧಿಕ ಇಳುವರಿಯಿಂದಾಗಿಯೋ ಎಲ್ಲರ ಬಾಯಲ್ಲೂ ಸೆಟ್ಟೇರಿಬಿಡುತ್ತದೆ. ಆದರೆ ಕೆಲವೊಂದು ಹಣ್ಣುಗಳು ಅತ್ಯಂತ ರುಚಿಕರವಾಗಿದ್ದರೂ, ಅದು ಮಾರುಕಟ್ಟೆಯಲ್ಲಿ ಅಷ್ಟೊಂದು ಮುನ್ನೆಲೆಗೂ ಬಾರದೇ, ಇತ್ತ ಬೆಳೆಯುವವರ ಕೈಯನ್ನೂ ಹಿಡಿಯದೇ ಹಣ್ಣಾಗಿ ಕೋತಿಗಳ ಪಾಲಾಗಿ ಬಿಡುತ್ತದೆ. ಇಲ್ಲೊಂದು ಹಣ್ಣಿದೆ. ಇದರ ಹೆಸರು ಮೊಟ್ಟೆ ಹಣ್ಣು. ಅತ್ಯಂತ ಚೇತೋಹಾರಿಯಾದ ರುಚಿಯುಳ್ಳ ಈ ಹಣ್ಣಿನ ಪರಿಸ್ಥಿತಿಯೂ ಅಲ್ಪ ಸ್ವಲ್ಪ ಹೀಗೆಯೇ. ಇಂಗ್ಲೀಷಿನಲ್ಲಿ ಸಾಮಾನ್ಯವಾಗಿ ಎಗ್ ಫ್ರುಟ್ ಎಂದು ಕರೆಯಲ್ಪಡುವ ಈ ಹಣ್ಣಿನ ಮೂಲ […]
ದೊಡ್ಡ ಪತ್ರೆಯ ದೊಡ್ಡಸ್ತಿಕೆ ನಿಮಗೆ ಗೊತ್ತಾ ?: ಶೀತ, ಕೆಮ್ಮಿಗೆ ರಾಮಬಾಣ, ಇದರ ಪೋಡಿ ಸೂಪರ್
ನಮ್ಮ ಮನೆ ಅಂಗಳದಲ್ಲೇ ಬೆಳೆಯಬಹುದಾದ ಜೌಷದೀಯ ಸಸ್ಯಗಳ ಪೈಕಿ ದೊಡ್ಡಪತ್ರೆಗೆ ತನ್ನದೇ ಆದ ದೊಡ್ಡಸ್ತಿಕೆ ಇದೆ. ಮನೆಯ ಅಂಗಳದಲ್ಲಿ ದೊಡ್ಡಪತ್ರೆಯ ಗಿಡವೊಂದಿದ್ದರೆ ಸಣ್ಣ ಪುಟ್ಟ ಕಾಯಿಲೆಗೆಲ್ಲಾ ದೊಡ್ಡಪತ್ರೆ ದೊಡ್ಡ ಪಾತ್ರವಹಿಸುತ್ತದೆ. ದೊಡ್ಡ ಪತ್ರೆಯ ಸಸ್ಯಶಾಸ್ತ್ರೀಯ ಹೆಸರು ಕಾಲಿಯಸ್ ಅರೋಮ್ಯಾಟಿಕಸ್. ಈ ಸಸ್ಯದ ಮೂಲ ಭಾರತ, ಆಗ್ನೇಯ ಏಷ್ಯಾ, ದಪ್ಪ ಮುಸುಡಿಯ ಈ ದೊಡ್ಡ ಪತ್ರೆಯ ಗಿಡ, ಮನೆಯ ನೀರು ಹೋಗುವಲ್ಲಿಯೋ?ಅಂಗಳದ ನೀರಿನ ತೇವಾಂಶ ದಟ್ಟವಾಗಿ ವ್ಯಾಪಿಸುವ ಜಾಗ ಹುಡುಕಿ ಹುಲುಸಾಗಿ ಬೆಳೆಯುತ್ತದೆ. ಔಷಧೀಯ ಆಗರ: ದಪ್ಪ ಕಾಂಡಗಳಿಂದ […]