ಭಾರತದ ವಾಯುವ್ಯ ರಾಜ್ಯಗಳಲ್ಲಿ ದಾಖಲೆ ಮೀರಿದ ಮಳೆ
ನವದೆಹಲಿ: ದೆಹಲಿ, ಚಂಢೀಗಢ ಮತ್ತು ಹಿಮಾಚಲ ಪ್ರದೇಶದಲ್ಲಿ ದಾಖಲೆ ಮಳೆ ಸುರಿದಿದ್ದರೆ, ಇನ್ನಿತರ ಪ್ರದೇಶದಲ್ಲಿ ಮಳೆಯ ಕೊರತೆ ಅನುಭವಿಸಿದೆ. ಜುಲೈ 1 ರಿಂದ ಜುಲೈ 12ರವರೆಗೆ ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿ ಪ್ರದೇಶದಲ್ಲಿ ಅಧಿಕ ಮಳೆಗೆ ಸಾಕ್ಷಿಯಾಗಿದೆ. ಇದರಲ್ಲಿ 29 ರಾಜ್ಯಗಳು ಮತ್ತು ಕೇಂದ್ರಾಡಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಅಚ್ಚರಿ ಅಂಶ ಎಂದರೆ, ಸಾಮಾನ್ಯ ಮಟ್ಟಕ್ಕಿಂತ ಇಲ್ಲಿ 1,000 ಪ್ರತಿಶತ ಹೆಚ್ಚು ಮಳೆಯಾಗಿದೆ.2023ರ ಮಾನ್ಸೂನ್ ಮಾರುತಗಳು ಭಾರತದ ಹಲವು ಭಾಗದಲ್ಲಿ ಭಾರೀ ಮಳೆಯನ್ನು ತಂದಿದೆ. ಜುಲೈ1ರಿಂದ […]
ವಿಜಯಪುರದಲ್ಲಿ ಐದು ದಿನ ಮಳೆ ಮುಂದುವರಿಕೆ ಕೊನೆಗೂ ಜಿಲ್ಲೆಗೆ ಮುಂಗಾರು ಆರಂಭ
ವಿಜಯಪುರ: ಸದ್ಯ ಹವಾಮಾನ ಇಲಾಖೆಯ ಮಾಹಿತಿಯಂತೆ ಮಂಗಳವಾರ ಬೆಳಗ್ಗೆ 8-30ರಿಂದ ಸಂಜೆ 5-30ರವರೆಗೆ 5.2 ಮಿ,ಮೀ ಮಳೆ ದಾಖಲಾಗಿದೆ. ಇನ್ನೂ ಐದು ದಿನ ಇದೇ ರೀತಿ ಮಳೆ ಮುಂದುವರೆಯಲಿದೆ. ಕೊನೆಗೂ ಒಂದೂವರೆ ತಿಂಗಳ ನಂತರ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕಾಗಿದೆ. ಸೋಮವಾರ ರಾತ್ರಿಯಿಂದಲೇ ಜಿಟಿ ಜಿಟಿ ಮಳೆ ಆರಂಭವಾಗಿದ್ದು, ಮಂಗಳವಾರ ದಿನವಿಡಿ ಜಿಟಿ ಜಿಟಿ ಮಳೆಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆಯಾಗಿದೆ. ಹವಾಮಾನ ಇಲಾಖೆಯ ಮಾಹಿತಿಯಂತೆ ಇನ್ನೂ ಐದು ದಿನ ಇದೇ ರೀತಿ ಮಳೆ ಇರಲಿದೆ. […]
ಇದು El Nino ಪರಿಣಾಮ ಏಷ್ಯಾದಲ್ಲಿ ಮಳೆಯಬ್ಬರ ಯುರೋಪ್ -ಅಮೆರಿಕದಲ್ಲಿ ವಿಪರೀತ ತಾಪಮಾನ
ಜಾಗತಿಕವಾಗಿ ಹವಾಮಾನ ವೈಪರೀತ್ಯಗಳು ಕಂಡು ಬರುತ್ತಿವೆ. ಅಮೆರಿಕ ಮತ್ತು ಯುರೋಪ್ನಲ್ಲಿ ಶಾಖದ ಅಲೆ ಹೆಚ್ಚುತ್ತಿವೆ.ಭಾರತ ಸೇರಿದಂತೆ ಏಷ್ಯಾದ ಹಲವು ದೇಶಗಳಲ್ಲಿ ಮಳೆ ಅಬ್ಬರ ತೀವ್ರವಾಗಿದೆ. ಆದರೆ ಇನ್ನೊಂದೆಡೆ, ಯುರೋಪ್, ಅಮೆರಿಕದಂತಹ ಪಾಶ್ಚಿಮಾತ್ಯ ದೇಶದಲ್ಲಿ ಜನರು ಬಿಸಿಲ ಬೇಗೆಯಿಂದ ತತ್ತರಿಸುತ್ತಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಜನರು ಪ್ರವಾಹದಿಂದ ತತ್ತರಿಸುತ್ತಿದ್ದಾರೆ. ಈ ತಾಪಮಾನ ಜುಲೈ 19 ಮತ್ತು 23ರಂದು ಮತ್ತಷ್ಟು ಹೆಚ್ಚಲಿದೆ. ಇಟಲಿ ಮಾತ್ರವಲ್ಲ ಗ್ರೀಸ್, ಟರ್ಕಿ, ಬ್ಲಲ್ಕಾನ್ಸ್ ಜನರು ನೆತ್ತಿ ಸುಡುವ ಬಿಲಿಸಿನಿಂದ ಬಳಲುತ್ತಿದ್ದಾರೆ. ಮುಂದಿನ ವಾರಗಳಲ್ಲಿ ಅನೇಕ ಸ್ಥಳೀಯ […]
ರೈತರ ಮೊಗದಲ್ಲಿ ಸಂತಸ : ಕೆಆರ್ಎಸ್ ಜಲಾಶಯದ ಒಳಹರಿವಿನಲ್ಲಿ ಹೆಚ್ಚಳ
ಮಂಡ್ಯ: 2023ನೇ ಸಾಲಿನಲ್ಲಿ ಇದೇ ಅಧಿಕ ಪ್ರಮಾಣದ ಒಳ ಹರಿವು ಆಗಿದ್ದು. ಒಂದೇ ದಿನ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಡ್ಯಾಂನಲ್ಲಿ ನೀರಿನ ಮಟ್ಟ ಹೆಚ್ಚಳವಾಗಿರುವುದರಿಂದ ರಾಜ್ಯ ಮತ್ತು ತಮಿಳುನಾಡಿನ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಡ್ಯಾಂನ ಗರಿಷ್ಠ ನೀರಿನ ಮಟ್ಟ 124.80 ಅಡಿಯಾಗಿದ್ದು, ಈಗ ಅದು 82 ಅಡಿಗೆ ತಲುಪಿದೆ. 49.452 ಟಿಎಂಸಿ ಗರಿಷ್ಠ ಸಾಂದ್ರತೆ ಡ್ಯಾಂನಲ್ಲಿ 11.695 ಟಿಎಂಸಿ ನೀರು ಶೇಖರಣೆಯಾಗಿದೆಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಉತ್ತಮ ಮಳೆಯಾದ ಹಿನ್ನೆಲೆ […]
ಉಡುಪಿ ಜಿಲ್ಲೆಗೆ ಜುಲೈ 7 ರವರೆಗೂ ಮುಂದುವರಿದ ರಜೆ
ಉಡುಪಿ : ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದ್ದು , ಹವಾಮಾನ ಇಲಾಖೆಯ ರೆಡ್ ಅಲರ್ಟ್ ಮುನ್ಸೂಚನೆಯಂತೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದು , ಮಳೆ ಮುಂದುವರೆಯುವ ಮುನ್ಸೂಚನೆಯಿರುವುದರಿಂದ ಮುಂಜಾಗರ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಿನಾಂಕ:07.07.20123 ರಂದು ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಹಾಗೂ ಪ್ರಾಥಮಿಕ,ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಲಾಗಿದೆ. ಉಳಿದಂತೆ ಎಲ್ಲಾ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮ, ಇಂಜಿನಿಯರಿಂಗ್, ಐ.ಟಿ.ಐ, ಕಾಲೇಜುಗಳಿಗೆ ರಜೆ ಘೋಷಿಸಿರುವುದಿಲ್ಲ ಕಾಲೇಜುಗಳಲ್ಲಿ ಪಾಠ ಪ್ರವಚನಗಳನ್ನು ನಡೆಸುವಾಗ ಈ […]