ಗಂಗೊಳ್ಳಿಯ ನಿನಾದ ಸಂಸ್ಥೆ: ಭಜನಾ ಕಾರ್ಯಕ್ರಮ

ಗಂಗೊಳ್ಳಿ : ಗಂಗೊಳ್ಳಿಯ ನಿನಾದ ಸಂಸ್ಥೆಯ ಜ್ಞಾನಗಂಗಾ ಕಾರ್ಯಕ್ರಮದ ವಿದ್ಯಾರ್ಥಿಗಳು ನಿನಾದ ಸಂಸ್ಥೆಯ ನೇತೃತ್ವದಲ್ಲಿ ಸಿದ್ಧಾಪುರದ ಶ್ರೀ ದುರ್ಗಾ ಹೊನ್ನಮ್ಮ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ಭಜನಾ ಸೇವೆ ಸಮರ್ಪಿಸಿದರು. ದೇವಸ್ಥಾನದ ಆಡಳಿತ ಧರ್ಮದರ್ಶಿ ಜಿ.ಸುಧೀರ ಜೆ.ನಾಯಕ್ ಮುಂಬೈ ಮತ್ತು ದೇವಳದ ಅರ್ಚಕ ಎಂ.ಸುರೇಂದ್ರ ಭಟ್ ಇದ್ದರು.
ಕನ್ನರ್ಪಾಡಿ: ದ್ವಿತೀಯ ವರ್ಷದ ಶಾರದಾ ಮಹೋತ್ಸವ ಆಚರಣೆ
ಉಡುಪಿ: ಉಡುಪಿ ಕಿನ್ನಿಮೂಲ್ಕಿ ಕನ್ನರ್ಪಾಡಿಯ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ದ್ವಿತೀಯ ವರ್ಷದ ಶಾರದಾ ಮಹೋತ್ಸವ ಆಚರಣೆಯು ಅ. 5ರಿಂದ 8ರ ವರೆಗೆ ನಾಲ್ಕು ದಿನಗಳ ಕಾಲ ಕಿನ್ನಿಮೂಲ್ಕಿ ಸ್ವಾಗತ ಗೋಪುರದ ಬಳಿಯ ಮೈದಾನದಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದು ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷರಾದ ಜಯಪ್ರಕಾಶ್ ಕೆದ್ಲಾಯ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅ.5ರಂದು ಬೆಳಿಗ್ಗೆ 7.30ಕ್ಕೆ ಶಾರದಾ ದೇವಿಯ ವಿಗ್ರಹ ಪ್ರತಿಷ್ಠಾಪನೆ, ಗಣ ಹೋಮ ನಡೆಯಲಿದ್ದು 8 ಗಂಟೆಗೆ ಚಂಡಿಕಾ ಯಾಗ, ತದನಂತರ ವಿವಿಧ […]
ಶ್ರೀ ಕೃಷ್ಣ ಮಠದಲ್ಲಿ ” ಶ್ರೀ ಕೃಷ್ಣನಿಗೆ ಓಲೆ ಬರೆಯುತ್ತಿರುವ ರುಕ್ಮಿಣೀ ” ಅಲಂಕಾರ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ, ಸೋದೆ ಮಠದ ಶ್ರೀ ಶ್ರೀ ವಿಶ್ವವಲ್ಲಭತೀರ್ಥರು ನವರಾತ್ರಿಯ ಪ್ರಯುಕ್ತ ಶ್ರೀ ಕೃಷ್ಣ ದೇವರಿಗೆ ” ಶ್ರೀ ಕೃಷ್ಣನಿಗೆ ಓಲೆ ಬರೆಯುತ್ತಿರುವ ರುಕ್ಮಿಣೀ ” ಅಲಂಕಾರ ಮಾಡಿದರು. ಲಕ್ಷ ತುಳಸಿ ಅರ್ಚನೆ ಮಾಡಿ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮಹಾಪೂಜೆಯನ್ನು ನೆರವೇರಿಸಿದರು.
ಶ್ರೀ ಕೃಷ್ಣ ಮಠದಲ್ಲಿ ಯೋಗ-ಸ್ವಚ್ಛ ಭಾರತ್ ಅಭಿಯಾನಕ್ಕೆ ಚಾಲನೆ

ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಶ್ರೀ ಬಾಬಾ ರಾಮ್ ದೇವರವರ ನವೆಂಬರ್ 16 -20 ರ ತನಕ ನಡೆಯುವ ಉಚಿತ ಬ್ರಹತ್ ಯೋಗ ಶಿಬಿರದ ಪ್ರಯುಕ್ತ 101 ಯೋಗ ಶಿಬಿರಕ್ಕೆ ಹಾಗೂ ಸ್ವಚ್ಛಭಾರತ್ ಅಭಿಯಾನಕ್ಕೆ ಚಾಲನೆ ನೀಡಿದರು. ಪತಂಜಲಿ ರಾಜ್ಯ ಪ್ರಭಾರಿ ಯೋಗಾಚಾರ್ಯ ಭವರ್ಲಾಲ್ ಆರ್ಯಜೀ,ಬಾಲಾಜಿ ರಾಘವೇಂದ್ರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಅ 5 ರಂದು ಪರ್ಯಾಯ ಮಹೋತ್ಸವದ ಪೂರ್ವಭಾವಿ ಸಮಾಲೋಚನಾ ಸಭೆ
ಉಡುಪಿ: ಭಾವಿ ಪರ್ಯಾಯ ಶ್ರೀ ಅದಮಾರು ಮಠದ ಪರ್ಯಾಯ ಮಹೋತ್ಸವವನ್ನು ವೈಶಿಷ್ಟ್ಯ ಪೂರ್ಣ ಹಾಗೂ ಪರಿಸರ ಪೂರಕವಾಗಿ ನಡೆಸುವ ಸಲುವಾಗಿ ಪೂರ್ವಭಾವಿ ಸಮಾಲೋಚನಾ ಸಭೆಯು ಅ 5 ರಂದು ಸಾಯಂಕಾಲ 4.30 ಗಂಟೆಗೆ ಉಡುಪಿಯ ಪೂರ್ಣಪ್ರಜ್ಞಾ ಆಡಿಟೋರಿಯಂನ ಮಿನಿ ಹಾಲಿನಲ್ಲಿ ಅದಮಾರು ಹಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಸಾನ್ನಿಧ್ಯದಲ್ಲಿ ನಡೆಯಲಿದೆ. ಈ ಸಭೆಗೆ ಮಠದ ಶಿಷ್ಯರು,ಅಭಿಮಾನಿಗಳು,ಭಕ್ತಾಭಿಮಾನಿಗಳು ಆಗಮಿಸಿ ತಮ್ಮ ಸೂಕ್ತ ಸಲಹೆ ಸೂಚನೆಯನ್ನು ನೀಡಿ ಪರ್ಯಾಯೋತ್ಸವ […]